ಶನಿವಾರ, ಏಪ್ರಿಲ್ 17, 2021
30 °C

ಜಿಡಿಪಿ ಶೇ 8.25ರಷ್ಟು ವೃದ್ಧಿ :ಐಎಂಎಫ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ):ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) 2011ನೇ ಸಾಲಿನಲ್ಲಿ ಶೇ 8.25ರಷ್ಟು ಇರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಅಂದಾಜಿಸಿದೆ. ಭಾರತದ ಆರ್ಥಿಕ ವೃದ್ಧಿಗೆ ಮೂಲ ಸೌಕರ್ಯ ರಂಗವು ಮಹತ್ವದ ಕಾಣಿಕೆ ನೀಡುತ್ತಿದ್ದು, ಉದ್ದಿಮೆ ಸಂಸ್ಥೆಗಳ ಬಂಡವಾಳ ಹೂಡಿಕೆಯ ಪ್ರಮಾಣವು ಗಮನಾರ್ಹವಾಗಿ ಹೆಚ್ಚಳಗೊಳ್ಳಲಿದೆ ಎಂದು ‘ಐಎಂಎಫ್’ ತನ್ನ ವಿಶ್ವ ಆರ್ಥಿಕತೆಯ ಮುನ್ನೋಟದ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

 

ಆರ್ಥಿಕ ವೃದ್ಧಿ ದರ ಏರುಗತಿಯಲ್ಲಿ ಸಾಗಲಿದ್ದರೂ, ಈ ವರ್ಷವೂ ಹಣದುಬ್ಬರವು ಹೆಚ್ಚಿನ ಪ್ರಮಾಣದಲ್ಲಿಯೇ ಇರಲಿದೆ. ಅಗತ್ಯ ವಸ್ತುಗಳ ಬೆಲೆಗಳು ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಇಳಿಕೆ ಕಾಣದ ಹಿನ್ನೆಲೆಯಲ್ಲಿ ಹಣದುಬ್ಬರ ದರದ ಸರಾಸರಿ ಮಟ್ಟವು ಶೇ 7.50ರಷ್ಟು ಆಗಿರಲಿದೆ ಎಂದು ಅಂದಾಜಿಸಿದೆ.ಆಹಾರ ಪದಾರ್ಥಗಳ ಬೆಲೆ ಏರಿಕೆ ಕಾರಣಕ್ಕೆ ಆಹಾರ ಹಣದುಬ್ಬರವು ಗರಿಷ್ಠ ಮಟ್ಟದಲ್ಲಿ ಇರುವುದರ ಜೊತೆಗೆ ಸಮಗ್ರ ಹಣದುಬ್ಬರವೂ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ ಎಂದು ‘ಐಎಂಎಫ್’ ವರದಿ ಹೇಳಿದೆ.

 

ಭಾರತ, ಹಾಂಕಾಂಗ್ ಮತ್ತು ಇಂಡೋನೇಷ್ಯಾಗಳಲ್ಲಿ ಸಾಲ ಪಡೆಯುವ ಪ್ರಮಾಣ ಏರಿಕೆಯಾಗುತ್ತಿದ್ದರೂ, ಚೀನಾದಲ್ಲಿ ಇದು ಗರಿಷ್ಠ ಪ್ರಮಾಣದಲ್ಲಿ ಇದೆ.ಜಾಗತಿಕ ಅರ್ಥ ವ್ಯವಸ್ಥೆಯು 2011 ಮತ್ತು 2012ರಲ್ಲಿ  ಶೇ 4.50 ದರದಲ್ಲಿ ವೃದ್ಧಿಯಾಗಲಿದ್ದು, ಪ್ರವರ್ಧಮಾನಕ್ಕೆ ಬರುತ್ತಿರುವ ಅಭಿವೃದ್ಧಿಶೀಲ ದೇಶಗಳು ಶೇ 6.50ರಷ್ಟು ವೃದ್ಧಿ ದಾಖಲಿಸಲಿವೆ. ಅಭಿವೃದ್ಧಿಹೊಂದಿದ ದೇಶಗಳ ಆರ್ಥಿಕತೆಯು ಕೇವಲ ಶೇ 2.50ರಷ್ಟು ಮಾತ್ರ ವೃದ್ಧಿ ಕಾಣಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.