ಸೋಮವಾರ, ಜನವರಿ 20, 2020
18 °C
ಒಕ್ಕಲಿಗರ ಸಂಘದ ಚುನಾವಣೆ

ಜಿ.ಪಂ ಉಪಾಧ್ಯಕ್ಷ ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ರಾಜ್ಯ ಒಕ್ಕಲಿಗರ ಸಂಘಕ್ಕೆ ಜನವರಿ 5 ರಂದು ನಡೆ ಯಲಿರುವ ಚುನಾವಣೆಗೆ ಡಾ. ಅಪ್ಪಾಜಿ ಗೌಡ ನೇತೃತ್ವದ ತಂಡದ ಅಭ್ಯರ್ಥಿ ಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎನ್‌.ಹನುಮಂತೇಗೌಡ ಗುರುವಾರ ಬೆಂಗಳೂರಿನ ಒಕ್ಕಲಿಗರ ಸೌಧದಲ್ಲಿ ನಾಮ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಎನ್‌.ಹನುಮಂತೇಗೌಡ, ‘ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷನಾಗಿ ಈಗಾ ಗಲೇ ಗ್ರಾಮಾಂತರ ಜಿಲ್ಲೆಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದೇನೆ. ತಾಲ್ಲೂಕು ಹಾಗೂ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ನಡೆದಿರುವ ಹಲವು ಕಾರ್ಯಕ್ರಮಗಳಲ್ಲಿ ಸಮುದಾಯದ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿ ಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಡಾ.ಅಪ್ಪಾಜಿಗೌಡ ಅವರ ತಂಡ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲಿದೆ’ ಎಂದು ಹೇಳಿದರು.ನಾಮ ಪತ್ರ ಸಲ್ಲಿಕೆ ಸಂದರ್ಭದಲ್ಲಿ ಎಸ್‌.ಎಸ್‌.ಘಾಟಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪದ್ಮನಾಭ್‌, ಪಿಎಲ್‌ಡಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಸಂಪಂಗಿರಾಮ್ಯ, ನಗರ ಸಭೆ ಸದಸ್ಯ ಶಿವಕುಮಾರ್‌, ಒಕ್ಕಲಿಗರ ಸಂಘದ ಮುಖಂಡರಾದ ಬಚ್ಚೇಗೌಡ, ಲಿಂಗಾ ಪುರ ಬಾಬು, ಹೊಸಹಳ್ಳಿ ರಮೇಶ್‌ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)