ಮಂಗಳವಾರ, ಮಾರ್ಚ್ 2, 2021
31 °C

ಜಿಮ್ನಾಸ್ಟಿಕ್ಸ್‌ ವೇಳೆ ಅವಘಡ: ಕಾಲು ಮುರಿದುಕೊಂಡ ಸ್ಪರ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಮ್ನಾಸ್ಟಿಕ್ಸ್‌ ವೇಳೆ ಅವಘಡ: ಕಾಲು ಮುರಿದುಕೊಂಡ ಸ್ಪರ್ಧಿ

ರಿಯೊ ಡಿ ಜನೈರೊ (ರಾಯಿಟರ್ಸ್‌): ರಿಯೊ ಒಲಿಂಪಿಕ್‌ ಕೂಟದಲ್ಲಿ ಶನಿವಾರ ಅವಘಡವೊಂದು ಸಂಭವಿಸಿದ್ದು, ಫ್ರಾನ್ಸ್‌ನ ಜಿಮ್ನಾಸ್ಟಿಕ್ಸ್‌ ಸ್ಪರ್ಧಿ ಅರ್ಹತಾ ಸುತ್ತಿನ ಪ್ರದರ್ಶನದ ವೇಳೆ ಕಾಲು ಮುರಿದುಕೊಂಡಿದ್ದಾರೆ.

ಫ್ರಾನ್ಸ್‌ ತಂಡದ ಸಮೀರ್‌ ಐತ್‌ ಸಯೀದ್‌ ಅವರು ವಾಲ್ಟ್‌ನಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ದೂರದಿಂದ ಓಡೋಡಿ ಬಂದು ಮೇಲಕ್ಕೆ ನೆಗೆದು ಕಸರತ್ತು ಮಾಡುತ್ತಾ ನೆಲಕ್ಕೆ ಬೀಳುವಾಗ ಆಯ ತಪ್ಪಿದೆ. 

​ಅವರ ಎಡಗಾಲು ಮ್ಯಾಟ್‌ ಮೇಲೆ ಬಲವಾಗಿ ಅಪ್ಪಳಿಸಿದ ಕಾರಣ ಮಂಡಿಯಿಂದ ಕೆಳಭಾಗ ತುಂಡಾಗಿ ನೇತಾಡುತ್ತಿತ್ತು. ಸಮೀರ್‌ ಒಂದು ಕೈಯಲ್ಲಿ ಕಾಲನ್ನು ಹಿಡಿದು ಮತ್ತೊಂದು ಕೈಯಿಂದ ಮುಖ ಮುಚ್ಚಿಕೊಂಡರು. ಫ್ರಾನ್ಸ್‌ ತಂಡದ ಸಹ ಆಟಗಾರರು ಕೂಡಾ ಈ ದೃಶ್ಯ ನೋಡಲಾಗದೆ ಕೆಲಹೊತ್ತು ಮುಖಮುಚ್ಚಿ ನಿಂತರು.

ಅಧಿಕಾರಿಗಳು ಹಾಗೂ ಸ್ವಯಂಸೇವಕರು ಕೂಡಲೇ ಅವರ ನೆರವಿಗೆ ಬಂದರು. ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.