ಬುಧವಾರ, ಮೇ 18, 2022
25 °C

ಜಿಲ್ಲೆಯಲ್ಲಿ ಕ್ಷಯರೋಗ ನಿಯಂತ್ರಣ: ಡಾ.ಜಾಫರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ಜಿಲ್ಲೆಯಲ್ಲಿ ಕ್ಷಯರೋಗ ಪೂರ್ಣ ನಿಯಂತ್ರಣದಲ್ಲಿ ಇದೆ’ ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಹೇಳಿದರು. ವಿಶ್ವ ಕ್ಷಯರೋಗ ದಿನ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ರೋಗ ಕುರಿತು ಜಾಗೃತಿ ಮೂಡಿಸುವ ಜಾಥಾ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷಯ, ಕುಷ್ಠ ಮತ್ತಿತರ ರೋಗಗಳು ವ್ಯಾಪಿಸಲು ಹಿಂದೆ ಅರಿವಿನ ಕೊರತೆಯೂ ಕಾರಣವಾಗಿತ್ತು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಜನರು ಜಾಗೃತರಾಗಿರುವ ಕಾರಣ ಇಂಥ ರೋಗಗಳು ನಿಯಂತ್ರಣದಲ್ಲಿ ಇವೆ ಎಂದು ಹೇಳಿದರು.ಕ್ಷಯ ರೋಗದ ಸೂಚನೆ ಕಂಡು ಬಂದಲ್ಲಿ ರೋಗಿಗಳು ಚಿಕಿತ್ಸೆಯನ್ನು ಮಧ್ಯೆಯಲ್ಲಿಯೇ ನಿಲ್ಲಿಸದೇ ಪೂರ್ಣ ಚಿಕಿತ್ಸೆಯನ್ನು ಪಡೆಯಬೇಕು ಎಂದು ಸಲಹೆ ಮಾಡಿದರು.ಇದಕ್ಕೂ ಮುನ್ನ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಕ್ಷಯರೋಗ ವಿರುದ್ಧ ಜಾಗೃತಿ ಜಾಥಾ ಆರಂಭವಾಗಿ, ಕಾರ್ಯಕ್ರಮ ನಡೆದ ಕಲಾಮಂದಿರವನ್ನು ತಲುಪಿತು.ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಡಾ. ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅರವಿಂದಪ್ಪ, ರೆಡ್ ಕ್ರಾಸ್ ಸೊಸೈಟಿಯ ಮೀರಾ ಶಿವಲಿಂಗಯ್ಯ, ರಾಜ್ಯ ಸಂಯೋಜಕಿ ಅಶ್ವಿನಿ, ಸಾರಮ್ಮ ಜಾನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.