ಹಾಸನ: 2013-–-14 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಬುಧವಾರ (ಮಾ. 12) ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಈ ಬಾರಿ ಒಟ್ಟು 17,766 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಒಟ್ಟಾರೆ 37 ಪರೀಕ್ಷಾ ಕೇಂದ್ರಗಳಿದ್ದು, ಕಲಾ ವಿಭಾಗದಲ್ಲಿ 8,268, ವಾಣಿಜ್ಯ ವಿಭಾಗದಲ್ಲಿ 5,132 ಹಾಗೂ ವಿಜ್ಞಾನ ವಿಭಾಗದಲ್ಲಿ 4,366 ವಿದ್ಯಾರ್ಥಿಗಳಲ್ಲದೆ 2,210 ಪುನರಾವರ್ತಿತ ಮತ್ತು 1,126 ಖಾಸಗಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಲ್ಲಿ 8,126 ಬಾಲಕರು ಹಾಗೂ 9640 ಬಾಲಕಿಯರು ಇದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿದರ್ದೇಶಕಿ ಎನ್. ರಾಜಮ್ಮ ತಿಳಿಸಿದ್ದಾರೆ.

ಹಾಸನ ತಾಲ್ಲೂಕಿನಲ್ಲಿ 13 ಪರೀಕ್ಷಾ ಕೇಂದ್ರಗಳಿದ್ದು, 2,668 ಬಾಲಕರು ಮತ್ತು 3592 ಬಾಲಕಿಯರು ಸೇರಿ 6,260 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಆಲೂರು ತಾಲ್ಲೂಕಿನಲ್ಲಿ 2 ಪರೀಕ್ಷಾ ಕೇಂದ್ರಗಳಿದ್ದು, 300 ಬಾಲಕರು ಮತ್ತು 380 ಬಾಲಕಿಯರು 680 ವಿದ್ಯಾರ್ಥಿಗಳು, ಸಕಲೇಶಪುರ ತಾಲ್ಲೂಕಿನ ಒಂದು ಕೇಂದ್ರದಲ್ಲಿ 326 ಬಾಲಕರು ಮತ್ತು 360 ಬಾಲಕಿಯರು ಸೇರಿ 686 ವಿದ್ಯಾರ್ಥಿಗಳು, ಬೇಲೂರು ತಾಲ್ಲೂಕಿನ 3 ಪರೀಕ್ಷಾ ಕೇಂದ್ರಗಳಲ್ಲಿ 682 ಬಾಲಕರು ಮತ್ತು 810 ಬಾಲಕಿಯರು ಸೇರಿ 1,492 ವಿದ್ಯಾರ್ಥಿಗಳು, ಹೊಳೆನರಸೀಪುರ ತಾಲ್ಲೂಕಿನಲ್ಲಿ 3 ಪರೀಕ್ಷಾ ಕೇಂದ್ರಗಳಿದ್ದು, 734 ಬಾಲಕರು ಮತ್ತು 937 ಬಾಲಕಿಯರು ಸೇರಿ 1,674 ವಿದ್ಯಾರ್ಥಿಗಳು, ಅರಕಲಗೂಡು ತಾಲ್ಲೂಕಿನ 4 ಪರೀಕ್ಷಾ ಕೇಂದ್ರಗಳಲ್ಲಿ 737 ಬಾಲಕರು ಮತ್ತು 772 ಬಾಲಕಿಯರು ಸೇರಿ ಒಟ್ಟು 1506 ವಿದ್ಯಾರ್ಥಿಗಳು, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 4 ಪರೀಕ್ಷಾ ಕೇಂದ್ರಗಳಿದ್ದು, 1062 ಬಾಲಕರು ಮತ್ತು 1394 ಬಾಲಕಿಯರು ಸೇರಿದಂತೆ ಒಟ್ಟು 2456 ವಿದ್ಯಾರ್ಥಿಗಳು, ಅರಸೀಕೆರೆ ತಾಲ್ಲೂಕಿನ 7 ಪರೀಕ್ಷಾ ಕೇಂದ್ರಗಳಲ್ಲಿ 1,617 ಬಾಲಕರು ಮತ್ತು 1,395 ಬಾಲಕಿಯರು ಸೇರಿ 3,012 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ರಾಜಮ್ಮ ತಿಳಿಸಿದ್ದಾರೆ.

ನಿಷೇಧಾಜ್ಞೆ ಜಾರಿ...
ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಒಂದು ಮತ್ತು ತಾಲ್ಲೂಕು ಮಟ್ಟದಲ್ಲಿ ಐದು ಹಾಗೂ ಕೇಂದ್ರ ಕಚೆೇರಿಯ ವಿಭಾಗೀಯ ಮಟ್ಟದಿಂದ ಒಂದು ಮತ್ತು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಒಂದೊಂದು ಸ್ಥಾನಿಕ ಜಾಗೃತದಳಗಳು ಕರ್ತವ್ಯ ನಿರ್ವಹಿಸಲಿವೆ.

ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪರೀಕ್ಷಾ ದಿನಗಳಂದು ನಿಷೇಧಿತ ವಲಯದಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ ಎಂದು ರಾಜಮ್ಮ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.