ಬುಧವಾರ, ಏಪ್ರಿಲ್ 14, 2021
31 °C

ಜೀವನದಲ್ಲಿ ಗುರಿ ಇಟ್ಟುಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಜೀವನದಲ್ಲಿ ಗುರಿ ಇಟ್ಟುಕೊಂಡು ಅದನ್ನು ಸಾಧಿಸಲು ಪ್ರಯತ್ನಿಸಬೇಕು ಎಂದು ಮಾಜಿ ಶಾಸಕ ಎಂ.ಜಿ.ಮುಳೆ ಸಲಹೆ ಕೊಟ್ಟರು.ಇಲ್ಲಿನ ಜೀಜಾಮಾತಾ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಮತ್ತು ಗಣ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಾಲ್ಲೂಕಿನಲ್ಲಿನ ಶೈಕ್ಷಣಿಕ ವಾತಾವರಣ ಸುಧಾರಿಸುತ್ತಿದೆ. ಉನ್ನತ ಪದವಿ ಪಡೆಯುವವರ ಸಂಖ್ಯೆ ಹೆಚ್ಚುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ನೇತೃತ್ವ ವಹಿಸಿದ್ದ ಮಾಣಿಕನಗರ ಸಂಸ್ಥಾನದ ಜ್ಞಾನರಾಜಪ್ರಭು ಮಹಾರಾಜರು ಮಾತನಾಡಿ ಸಭ್ಯ ಸಮಾಜದ ನಿರ್ಮಾಣಕ್ಕೆ ಯತ್ನಿಸಬೇಕು. ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದರು.ಡಾ.ಎಸ್.ಬಿ.ಮಹಾಜನ ಮಾತನಾಡಿ ಎಸ್ಸೆಸ್ಸೆಲ್ಸಿಗೆ ಹೆಚ್ಚಿನ ಮಹತ್ವ ಇರುವುದರಿಂದ ಈ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಬೇಕು. ಮುಂದೆಯೂ ಅಧ್ಯಯನಶೀಲರಾಗಿ ಉನ್ನತ ಶಿಕ್ಷಣ ಪಡೆಯಬೇಕು ಎಂದು ಹೇಳಿದರು. ಡಾ.ಮಾರುತಿ ಪೂಜಾರಿ ಮಾತನಾಡಿದರು.ವಾಮನರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಡಾ.ಗೌತಮ ಕಾಂಬಳೆ, ಡಾ.ಸುಹಾಸ ಕಾಂಬಳೆ, ಡಾ.ನರೇಂದ್ರ ಸಿಂಧೆ, ದಿಲೀಪ ಸಿಂಧೆ, ನರಸಿಂಗರೆಡ್ಡಿ ಗದ್ಲೇಗಾಂವ, ಮಾಧವರಾವ ಹಸೂರೆ, ಬಸವರಾಜ ತಪಲಿ, ಅರುಣ ದೇಶಪಾಂಡೆ, ತಾತೇರಾವ ಪಾಟೀಲ ಉಪಸ್ಥಿತರಿದ್ದರು. ಬಾಲಾಜಿ ಬಿರಾದಾರ ಸ್ವಾಗತಿಸಿದರು. ಸುವರ್ಣಾ ಕಾಮಗಾರ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.