ಬುಧವಾರ, ಜನವರಿ 29, 2020
27 °C

ಜೀವನದಲ್ಲಿ ಪರೋಪಕಾರಿ ಗುಣ ಅಳವಡಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗೇರಿ: ಬೆಂಗಳೂರು ನಗರ ನಿರ್ಮಿಸಿದ ಕೆಂಪೇಗೌಡ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಅವರಲ್ಲಿರುವ ಪರೋಪಕಾರಿ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಶಾಸಕ ಎಂ.ಶ್ರೀನಿವಾಸ್ ಕರೆ ನೀಡಿದರು.ನಾಗರಬಾವಿಯಲ್ಲಿರುವ ಕಂದಾಯ ಭವನದಲ್ಲಿ ಕೊಟ್ಟಿಗೆ ಪಾಳ್ಯದ ವಾರ್ಡ್ ವತಿಯಿಂದ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕೆಂಪೇಗೌಡರು ಅಂದು ನಗರವನ್ನು ನಿರ್ಮಿಸದೇ ಇದ್ದರೆ ಬೆಂಗಳೂರು ವಿಶ್ವ ವಿಖ್ಯಾತರ ತಾಣವಾಗುತ್ತಿರಲಿಲ್ಲ, ನಗರದ ವಾಸವಾಗಿರುವ ಪ್ರತಿಯೊಬ್ಬ ನಾಗರೀಕರು ಕೆಂಪೇಗೌಡರನ್ನು ಸ್ಮರಿಸಬೇಕು ಎಂದರು.ಮಾಳಗಾಳ್ ಜನತಾ ಕಾಲೋನಿಯ 60 ಜನರಿಗೆ ಹಕ್ಕು ಪತ್ರ ವಿತರಿಸಲಾಯಿತು. ನಿರುದ್ಯೋಗಿ ಯುವಕರಿಗೆ ಬಿಬಿಎಂಪಿಯಿಂದ ಆರ್ಥಿಕ ಸಹಾಯ ಧನದಡಿಯಲ್ಲಿ 20 ಜನರಿಗೆ ಲಘು ವಾಹನಗಳನ್ನು ನೀಡಲಾಯಿತು.ಪಾಲಿಕೆ ಸದಸ್ಯ ವೆಂಕಟೇಶ್ ಬಾಬು, ಉಪ ಆಯುಕ್ತ ರಾಮಚಂದ್ರ, ಅಧಿಕಾರಿಗಳಾದ ಭೀಮಪ್ಪ, ಚಂದ್ರಶೇಖರ್, ವಾಸು ಇತರರು ಹಾಜರಿದ್ದರು.ವಿವಿ ಪುರಂನಲ್ಲಿ ನೀರಿನ ಅದಾಲತ್

ಬೆಂಗಳೂರು: ಜಲಮಂಡಳಿಯ ಕೇಂದ್ರ 3ನೇ ಉಪ ವಿಭಾಗದ ನೀರಿನ ಅದಾಲತ್ ಇದೇ 18 ರಂದು ಬೆಳಿಗ್ಗೆ 9.30ರಿಂದ 11ರವರೆಗೆ  ವಿ.ವಿ. ಪುರಂನಲ್ಲಿರುವ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ನಡೆಯಲಿದೆ.ಕೇಂದ್ರ 3ನೇ ಉಪವಿಭಾಗದ ಸೇವಾ ಠಾಣೆಗಳಾದ ಬನಪ್ಪ ಉದ್ಯಾನ 1 ಮತ್ತು 2, ವಿ.ವಿ.ಪುರಂ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಹಕರು ಈ ಅದಾಲತ್‌ನ ಸದುಪಯೋಗ ಪಡೆದುಕೊಳ್ಳಬಹುದು. ಗ್ರಾಹಕರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು- 2294 5187/22945190.

ಪ್ರತಿಕ್ರಿಯಿಸಿ (+)