ಶುಕ್ರವಾರ, ಮೇ 7, 2021
26 °C

ಜುಲೈ 1 ರಿಂದ ಸಹಾಯಧನ ನೇರ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕೇಂದ್ರ ತೈಲ ಮತ್ತು ಅನಿಲ ಮಂತ್ರಾಲಯದ ಸೂಚನೆ ಯಂತೆ ಮೈಸೂರು ಜಿಲ್ಲೆಯಾದ್ಯಂತ ಅಡುಗೆ ಅನಿಲ ಸಿಲಿಂಡರ್ ಹೊಂದಿ ರುವ ಆಧಾರ್ ಕಾರ್ಡ್ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಗ್ಯಾಸ್ ಸಹಾಯ ಧನವನ್ನು ನೇರ ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೆ ಜುಲೈ 1ರಿಂದ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಮೇಗೌಡ ತಿಳಿಸಿದ್ದಾರೆ.ಇದುವರೆಗೆ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸದಿರುವ ಅಡುಗೆ ಅನಿಲ ಗ್ರಾಹಕರು, ಕೂಡಲೇ ಸಂಬಂಧಪಟ್ಟ ಗ್ಯಾಸ್ ಏಜೆನ್ಸಿಗೆ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಬೇಕು. ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಸಲ್ಲಿಸದಿರುವವರು ಕೂಡಲೇ ತಮ್ಮ ಖಾತೆ ಹೊಂದಿರುವ ಬ್ಯಾಂಕ್ ಶಾಖೆಗೆ ಆಧಾರ್ ಸಂಖ್ಯೆ ನೀಡಬೇಕು. ಬ್ಯಾಂಕ್ ಖಾತೆ ಹೊಂದಿರದ ಗ್ರಾಹಕರು ಕೂಡಲೇ ಹೊಸದಾಗಿ ಬ್ಯಾಂಕ್ ಖಾತೆ ತೆರೆದು, ಆಧಾರ್ ಮಾಹಿತಿ ಸಲ್ಲಿಸಬೇಕು. ಗ್ಯಾಸ್ ಏಜೆನ್ಸಿಗೆ ಸಲ್ಲಿಸುವ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಆಧಾರ್ ಮಾಹಿತಿ ಸೀಡಿಂಗ್ ಮಾಡಿರುವ ಬ್ಯಾಂಕ್ ಖಾತೆ ಸಂಖ್ಯೆ ಒಂದೇ ಆಗಿರಬೇಕು.ಗ್ರಾಹಕರ ಅನುಕೂಲಕ್ಕಾಗಿ ಎಲ್ಲ ಗ್ಯಾಸ್ ಏಜೆನ್ಸಿಗಳಲ್ಲಿ ಡ್ರಾಪ್ ಬಾಕ್ಸ್ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರು ಈ ಡ್ರಾಪ್‌ಬಾಕ್ಸ್‌ಗಳಲ್ಲಿ ಐಎಫ್‌ಎಸ್‌ಸಿ ಕೋಡ್, ಖಾತೆ ಸಂಖ್ಯೆ ಮತ್ತು ಹೆಸರು ಸ್ಪಷ್ಟವಾಗಿ ಕಾಣುವ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಆಧಾರ್ ಪ್ರತಿ, ಎಲ್‌ಪಿಜಿ ಗ್ರಾಹಕರ ಸಂಖ್ಯೆಯುಳ್ಳ ಮಾಹಿತಿಯನ್ನು ಹಾಕಬಹುದು ಎಂದು ತಿಳಿಸಿದ್ದಾರೆ.ಹಲವು ಗ್ರಾಹಕರು ಈಗಾಗಲೇ ಅನಿಲ ಗ್ರಾಹಕರ ವಿವರ, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯ ವಿವರಗಳನ್ನು ಸಂಬಂಧ ಪಟ್ಟ ಅನಿಲ ವಿತರಕರಿಗೆ ಸಲ್ಲಿಸಿದ್ದಾರೆ ಹಾಗೂ ಆಧಾರ್ ಸಂಖ್ಯೆಯನ್ನು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಮ್ಯಾಪಿಂಗ್ ಮಾಡಿಸಿದ್ದಾರೆ.ಗ್ರಾಹಕರು ಸಲ್ಲಿಸಿ ರುವ ಮಾಹಿತಿ ಯನ್ನು ಸಂಬಂಧಪಟ್ಟ ಆಯಿಲ್ ಕಂಪೆನಿ ಯವರು ಅಪ್‌ಡೇಟ್ ಮಾಡಿದ್ದು, ಗ್ರಾಹಕರು

www.hindustanpetroleum  www.ebharatgas. com , .  ವೆಬ್‌ಸೈಟ್ ವಿಳಾಸಗಳ ಪೋರ್ಟಲ್‌ನಲ್ಲಿ ಅಥವಾ ಸಂಬಂಧ ಪಟ್ಟ ಗ್ಯಾಸ್ ಏಜೆನ್ಸಿಯವರಿಂದ ದೂರವಾಣಿ ಮೂಲಕ ಮಾಹಿತಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಐ.ಓ.ಸಿ.-ಮೊ: 94482 89974, ಎಚ್.ಪಿ.ಸಿ.- ಮೊ: 94490 41967, ಬಿ.ಪಿ.ಸಿ.-ಮೊ: 94482 82945 ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.