ಜಮ್ಮು (ಪಿಟಿಐ): ಪವಿತ್ರ ಅಮರನಾಥ ಯಾತ್ರೆಯನ್ನು ಜೂನ್ 25ರಿಂದ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಆದರೆ ವಿಶ್ವ ಹಿಂದೂ ಪರಿಷತ್ ಇದನ್ನು ವಿರೋಧಿಸಿದೆ.

ಅಮರನಾಥ ದೇವಸ್ಥಾನ ಮಂಡಳಿಯ ಅಧ್ಯಕ್ಷರೂ ಆಗಿರುವ ರಾಜ್ಯಪಾಲ ಎನ್. ಎನ್. ವ್ಹೋರಾ ಅವರು 39 ದಿನಗಳ ಯಾತ್ರೆಯ ದಿನಾಂಕ ಪ್ರಕಟಿಸಿದ್ದಾರೆ.

`ಈ ದಿನಾಂಕವನ್ನು ನಾವು ವಿರೋಧಿಸುತ್ತೇವೆ. ಜೇಷ್ಠ ಹುಣ್ಣಿಮೆ ದಿನವಾದ ಜೂನ್ 4ರಂದೇ ಯಾತ್ರೆ ಆರಂಭಿಸುತ್ತೇವೆ~ ಎಂದು ವಿಎಚ್ಪಿ ರಾಜ್ಯ ಘಟಕದ ಅಧ್ಯಕ್ಷ ರಮಾಕಾಂತ ದುಬೆ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಯಾತ್ರೆ ದಿನಾಂಕ ನಿಗದಿಪಡಿಸುವ ಹಕ್ಕು ರಾಜ್ಯಪಾಲರಿಗೆ ಇಲ್ಲ. ಅದನ್ನು ಧಾರ್ಮಿಕ ಮುಖಂಡರೇ ನಿರ್ಧರಿಸಬೇಕು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.