ದುಬೈ (ಪಿಟಿಐ): ಒಂದು ಸಾವಿರ ಮೀಟರ್ ಉದ್ದದ ಮತ್ತು 6,330 ಕೋಟಿ ರೂಪಾಯಿ ವೆಚ್ಚದ ವಿಶ್ವದ ಅತ್ಯಂತ ಎತ್ತರದ ಗೋಪುರ ಸೌದಿ ಅರೇಬಿಯಾದ ಜೆದ್ದಾ ನಗರದಲ್ಲಿ ನಿರ್ಮಾಣವಾಗಲಿದೆ.

ಕಿಂಗ್ಡಂ ಹೋಲ್ಡಿಂಗ್ ಕಂಪೆನಿ (ಕೆಎಚ್ಸಿ) ಅಧ್ಯಕ್ಷ ಅಬ್ದುಲ್ ಅಜೀಜ್ ಅಲ್ಸೌದ್ ಅವರು ಸೋಮವಾರ ಈ ವಿಷಯ ಪ್ರಕಟಿಸಿದರು. 63 ತಿಂಗಳಲ್ಲಿ ಕಟ್ಟಡ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸೌದಿ ಅರೇಬಿಯಾ ಮೂಲದ ಕೆಎಚ್ಸಿ ವಿಶ್ವದ ದೊಡ್ಡ ಮತ್ತು ಬಂಡವಾಳ ಹೂಡಿಕೆಯ ಖಾಸಗಿ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂಸ್ಥೆ ನಿರ್ಮಿಸುತ್ತಿರುವ ವಿಶ್ವದ ಎತ್ತರದ ಮೊದಲ ಗೋಪುರ ಇದಾಗಿದೆ. ಕಟ್ಟಡ ನಿರ್ಮಾಣಕ್ಕೆ ಸೌದಿ ಬಿನ್ ಲಾಡೆನ್ ಗ್ರೂಪ್ (ಎಸ್ಬಿಜಿ) ಸಂಸ್ಥೆ 2,065 ಕೋಟಿ ರೂಪಾಯಿ ಬಂಡವಾಳ ತೊಡಗಿಸಿದೆ ಎಂದು ಅವರು ವಿವರಿಸಿದರು. ಗೋಪುರ ನಿರ್ಮಾಣಕ್ಕಾಗಿ ಜೆದ್ದಾ ನಗರಸಭೆಯಿಂದ ಫೆಬ್ರುವರಿಯಲ್ಲಿಯೇ ಪರವಾನಗಿಯನ್ನು ಪಡೆಯಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.