ಶನಿವಾರ, ಮೇ 28, 2022
24 °C

ಜೇಸಿ ಗಾನಗಂಗೋತ್ರಿ ಸಮಾರೋಪ ಸಮಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಲಕ್ಷ್ಮೀವೆಂಕಟರಮಣಸ್ವಾಮಿಯ ಕಲ್ಲುಗಾಲಿಯ ಪ್ರಯುಕ್ತ ಆಯೋಜಿಸಿದ್ದ 5 ದಿನಗಳ ಗಾನ ಗಂಗೋತ್ರಿ ಕಾರ್ಯಕ್ರಮವು ಭಾನುವಾರ ಯಶಸ್ವಿಯಾಗಿ ಮುಕ್ತಾಯವಾಯಿತು.ಪಟ್ಟಣದ ಎಸ್.ಎಲ್.ವಿ.ಮಹಾದ್ವಾರದ ಬಳಿ ಶನಿವಾರ ಜೇಸಿಐ ವಿಜಯಪುರ ವತಿಯಿಂದ ಲಕ್ಷ್ಮೀವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವದ ಪ್ರಯುಕ್ತ 5 ದಿನಗಳ ಕಾಲ ಏರ್ಪಡಿಸಿದ್ದ `ಜೇಸಿ ಗಾನಗಂಗೋತ್ರಿ'  ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ವತಿಯಿಂದ ಅಭಿನಂದನೆ, ಪ್ರಶಸ್ತಿ ಮತ್ತು ಸನ್ಮಾನ ಸ್ವೀಕರಿಸಿ ಜೇಸಿಐ ಅಧ್ಯಕ್ಷ ಬಲಮುರಿ ಶ್ರಿನಿವಾಸ್ ಮಾತನಾಡಿದರು.ಜೇಸಿಐ ವಿಜಯಪುರದ ಯೋಜನಾ ನಿರ್ದೇಶಕ ಎಂ.ಶಿವಕುಮಾರ್ ಮಾತನಾಡಿ, ಕಳೆದ 29 ವರ್ಷಗಳಿಂದ ಜೇಸಿಐ ಸಂಸ್ಥೆ ಸಾರ್ವಜನಿಕ ವಲಯದಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ರಕ್ತದಾನ, ನೇತ್ರ ತಪಾಸಣಾ ಶಿಬಿರ, ಫಲಾನುಭವಿಗಳಿಗೆ ಚಿಕಿತ್ಸಾ ವೆಚ್ಚ ನೀಡುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ಶ್ರವಣ ದೋಷವುಳ್ಳ ರವಿಕುಮಾರ್ ಅವರಿಗೆ ಶ್ರವಣ ಸಾಧನ ಅಳವಡಿಸಿಕೊಳ್ಳಲು ಬೇಕಾದ ಧನ ಸಹಾಯವನ್ನು ಚೆಕ್ ಮೂಲಕ ವಿತರಿಸಲಾಯಿತು.ಸಂಸ್ಥೆಯ ವತಿಯಿಂದ ಬಳುವನಹಳ್ಳಿಯ ಸಂಗೀತ ವಿದ್ವಂಸ ಸೋಮಶೇಖರಾಚಾರಿ ಅವರಿಗೆ ಗಾಯನ ರತ್ನ ಪ್ರಶಸ್ತಿ, ಎಂ.ಹನುಮಂತಪ್ಪ ಅವರಿಗೆ ಸಂಗೀತ ರತ್ನ ಪ್ರಶಸ್ತಿ, ಹಿರಿಯ ರಂಗಭೂಮಿ ಕಲಾವಿದ ಈ.ಬೈರೇಗೌಡ ಅವರಿಗೆ ರಂಗಭೂಮಿ ರತ್ನ ಪ್ರಶಸ್ತಿಯನ್ನು ನೀಡಲಾಯಿತು.ಗಾನ ಗಂಗೋತ್ರಿ ಕಾರ್ಯಕ್ರಮದ ವತಿಯಿಂದ ಏರ್ಪಡಿಸಿದ್ದ ನೃತ್ಯ ಕಾರಂಜಿ ವಿಶೇಷ ಕಾರ್ಯಕ್ರಮದಲ್ಲಿ ಪಟ್ಟಣದ ಶೃಂಗೇರಿ ಶಾರದಾ ಶಾಲೆ, ಜೇಸಿಸ್ ಶಾಲೆ ಮತ್ತು ಮಿಥುನ್ ಸ್ಟೆಪ್ ಆಫ್ ತಂಡದ ಮಕ್ಕಳು ನೃತ್ಯ ಪ್ರದರ್ಶಿಸಿದರು.ಜೇಸಿಐ ವಿಜಯಪುರದ ಸಂಸ್ಥಾಪಕ ಅಧ್ಯಕ್ಷ ಪಿ.ಮುಕುಂದರಾವ್, ಮಾಜಿ ಅಧ್ಯಕ್ಷರ ಸಂಘದ ಅಧ್ಯಕ್ಷ ವಿ.ಎನ್.ರಮೇಶ್, ಕಾರ್ಯದರ್ಶಿ ಕೆ.ವಿ.ಭೈರೇಗೌಡ, ಖಜಾಂಚಿ ಐ.ಟಿ.ರಾಮಾಂಜಿನಪ್ಪ, ಮಾಜಿ ಅಧ್ಯಕ್ಷ ಜೆ.ಆರ್. ಮುನಿವೀರಣ್ಣ, ವಿ.ವೆಂಕಟೇಶ್, ವಿಜಯಪುರ ಬಲಿಜ ಸಂಘದ ಅಧ್ಯಕ್ಷ ಎಂ.ವಿ.ಮುನಿಯಪ್ಪ, ಸದಸ್ಯ ಎಂ.ಮುನಿರಾಜು, ಎಂ.ನಾಗರಾಜು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.