ಮಂಗಳವಾರ, ಏಪ್ರಿಲ್ 20, 2021
25 °C

ಜೋಗ ಜಲಪಾತಕ್ಕೆ ಪ್ರವಾಸಿಗರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಗ ಜಲಪಾತಕ್ಕೆ ಪ್ರವಾಸಿಗರ ದಂಡು

ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ರಾಜ್ಯದ ಎಲ್ಲೆಡೆಯಿಂದ ಪ್ರವಾಸಿಗರ ದಂಡು ಭಾನುವಾರ ಹರಿದು ಬಂದ ದೃಶ್ಯ ಕಂಡು ಬರುತ್ತಿತ್ತು.ಅಬ್ಬರಿಸಿದ ಆಶ್ಲೇಷ ಮಳೆ ಮುಗಿದು ಆರಂಭವಾಗಿರುವ ಮಖ ಮಳೆ ತಣ್ಣನೆಯ ರೀತಿಯಲ್ಲಿ ಕಣಿವೆ ಪ್ರದೇಶದಲ್ಲಿ ಸುರಿಯುತ್ತಿದ್ದು, ಜಲಪಾತ ತನ್ನ ಸೌಂದರ್ಯವನ್ನು ಸಹಜ ಸ್ಥಿತಿಯಲ್ಲಿ ಕಾಯ್ದುಕೊಂಡು ಧುಮ್ಮಿಕ್ಕುತ್ತಿದೆ.ಸಾವಿರಾರು ಸಂಖ್ಯೆಯ ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ಅಡ್ಡಗಟ್ಟಿ ನಿಂತು ಇಲ್ಲಿನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ ಆಗಿತ್ತು. ಸಾವಿರರು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ  ಜೋಗದ ಗುಂಡಿಗೆ ಇಳಿದಿದ್ದರು. ಜಲಪಾತದ ಎದುರು ಭಾಗದ ಪ್ರದೇಶದಲ್ಲಿ ಭಾರೀ ಜನದಟ್ಟಣೆ ಕಂಡು ಬಂದಿತ್ತು.ಪ್ರಾಧಿಕಾರದ ಒಳಭಾಗದಲ್ಲಿ ಇರುವ ಪಾರ್ಕಿಂಗ್ ವ್ಯವಸ್ಥೆ ತುಂಬಿ ವಾಹನಗಳು ಪ್ರಧಾನ ಗೇಟಿನ ಒಳಗೆ ಬರಲು ಸಾಧ್ಯವಾಗದೇ ಸೀತಾಕಟ್ಟೆ ಸೇತುವೆಯವರೆಗೂ ರಸ್ತೆಯ ಬದಿಗಳಲ್ಲಿ ಎಲ್ಲೆಂದರಲ್ಲಿ ನಿಲುಗಡೆ ಮಾಡಿದ್ದವು. ವಾಹನಗಳಲ್ಲಿ ಬಂದ ಪ್ರವಾಸಿಗರು ಮಾರ್ಗಮಧ್ಯೆ ಕೆಳಗಿಳಿದು ಜಲಪಾತದೆಡೆಗೆ ನಡೆದು ಕೊಂಡು ಬರುವ ದೃಶ್ಯ ಕಂಡು ಬರುತ್ತಿತ್ತು.ಜಲಪಾತದ ಮುಂದಿರುವ ಪ್ರಾಧಿಕಾರದ ವೃತ್ತದಲ್ಲಿ ಸಾರಿಗೆ ಬಸ್ ಸಂಚಾರಕ್ಕೆ, ಪ್ರವಾಸಿ ವಾಹನಗಳಿಂದ ತಡೆಯುಂಟಾಗಿ ಪೊಲೀಸರು ಸಂಚಾರ ವ್ಯವಸ್ಥೆ ತಿಳಿಗೊಳಿಸಲು ಹರಸಾಹಸ ಪಡುತ್ತಿದ್ದರು.ಮೋಡ ಮುಸುಕಿದ ವಾತಾವರಣದಲ್ಲಿ ಮಳೆ ಮಂಜಿನ ನಡುವೆ ಜಲಪಾತದ ಸೌಂದರ್ಯವನ್ನು ಸಾವಿರಾರು ಪ್ರವಾಸಿಗರು ಸವಿದು ಸಂತಸ ಪಟ್ಟುಕೊಳ್ಳುತ್ತ ದೃಶ್ಯ ಕಂಡುಬಂತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.