ಕಾರ್ಗಲ್ (ಶಿವಮೊಗ್ಗ): ಜೋಗದ ಮಹಾತ್ಮಗಾಂಧಿ ವಿದ್ಯುದಾಗಾರದಲ್ಲಿ ವಿದ್ಯುತ್ ಉತ್ಪಾದನೆ ಆರಂಭಗೊಂಡಿದ್ದರೂ, ಸುಮಾರು 50 ವರ್ಷಗಳಷ್ಟು ಹಳೆಯದಾದ ಘಟಕಗಳು ನಿರ್ವಹಣೆ ಮಾಡುವುದು ಕಷ್ಟದ ಕೆಲಸವಾಗಿದೆ. ಹಾಗಾಗಿ ನಿರೀಕ್ಷೆಯ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಗೆ ಘಟಕಗಳು ಸ್ಪಂದಿಸುತ್ತಿಲ್ಲ ಎಂದು ಕೆಪಿಸಿಯ ಮುಖ್ಯ ಎಂಜಿನಿಯರ್ ಜಿ. ಹನುಮಂತಪ್ಪ ಅಭಿಪ್ರಾಯಪಟ್ಟರು.

ವಿದ್ಯುದಾಗಾರದ ಒಂದು ಘಟಕದಿಂದ 17 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಮತ್ತೊಂದು ಘಟಕ ಭಾನುವಾರದಿಂದ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ನುರಿತ ತಂತ್ರಜ್ಞರ ತಂಡ ದುರಸ್ತಿ ಕಾರ್ಯದಲ್ಲಿ ತೊಡಗಿದೆ ಎಂದು `ಪ್ರಜಾವಾಣಿ~ಗೆ ತಿಳಿಸಿದರು.

ನಾಲೆ ಕುಸಿದು ಎರಡೂವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಘಟಕಗಳಿಗೆ ನೀರು ಪೂರೈಸುತ್ತಿದ್ದ ಪೆನ್ ಸ್ಟಾಕ್ ಪೈಪ್ಗಳ ಜಾಯಿಂಟ್ಗಳು ರಿಪೇರಿಯಾಗಬೇಕಿದ್ದು, ಅವುಗಳ ಜಾಕೆಟ್ಗಳನ್ನು ಹೊಸದಾಗಿ ಅಳಡಿಸಲಾಗುತ್ತಿದೆ ಎಂದರು.

ಹಿಂದೆ ಪೋರ್ ಭೇ ಚಾನಲ್ನಿಂದ ಹರಿದು ಬರುತ್ತಿದ್ದ ನೀರಿನಲ್ಲಿ 8 ಘಟಕಗಳು ಕಾರ್ಯ ನಿರ್ವಹಿಸಿ 140 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದ್ದ ಬಗ್ಗೆ ಅವರ ಗಮನ ಸೆಳೆದಾಗ, ಹಳೆಯದಾದ ಘಟಕಗಳಿಂದ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ.

ಘಟಕಗಳ ಪುನರ್ ನವೀಕರಣದ ಅಗತ್ಯ ಇದೆ. ಅಲ್ಲದೆ ಹಾಲಿ ನಾಲೆಯಲ್ಲಿ ಹರಿದು ಬರುತ್ತಿರುವ ನೀರು ಎಲ್ಲಾ ಘಟಕಗಳ ನಿರ್ವಹಣೆಗೆ ಸಾಕಾಗುತ್ತಿಲ್ಲ. ಲಭ್ಯವಿರುವ ನೀರಿನಿಂದ ಕೇವಲ 38 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಇಲ್ಲಿ ಸಾಧ್ಯ ಎಂದು ವಿವರಿಸಿದರು.

ಶರಾವತಿ ವಿದ್ಯುದಾಗಾರದಲ್ಲಿ 980, ಲಿಂಗನಮಕ್ಕಿಯಲ್ಲಿ 55, ಮತ್ತು ಗೇರುಸೊಪ್ಪದಲ್ಲಿ 240, ಎಂ.ಜಿ.ಎಚ್.ಇ ನಲ್ಲಿ 17 ಮೆಗಾವ್ಯಾಟ್ನಂತೆ ಶರಾವತಿ ಕೊಳ್ಳದಲ್ಲಿ ಒಟ್ಟು 1,292 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ವಿದ್ಯುದಾಗಾರಕ್ಕೆ ಬಳಕೆಯಾಗಬೇಕಿದ್ದ ನೀರು, ದುರಸ್ತಿ ಕಾರ್ಯದ ನಿಮಿತ್ತ ಕಳೆದ ಎರಡೂವರೆ ತಿಂಗಳಿನಿಂದ, 600 ಕ್ಯೂಸೆಕ್ನಿಂದ 1,200 ಕ್ಯೂಸೆಕ್ವರೆಗೂ ನಿರಂತರವಾಗಿ ನದಿಗೆ ಹರಿದು ಜೋಗ ಜಲಪಾತದಲ್ಲಿ ಧುಮುಕುತ್ತಿದೆ. ಇದು ಪ್ರವಾಸಿಗರಿಗೆ ಜೋಗ ಜಲಪಾತದ ಅದ್ಭುತ ಸೌಂದರ್ಯ ಸವಿಯಲು ಅವಕಾಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.