ಮಂಗಳವಾರ, ಜನವರಿ 21, 2020
29 °C

ಜೋಳಕ್ಕೆ ಬೆಂಬಲ ಬೆಲೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು:ಕ್ವಿಂಟಲ್‌ ಮೆಕ್ಕೆ­ಜೋಳಕ್ಕೆ ­₨ 1800 ಬೆಂಬಲ ಬೆಲೆ ಘೋಷಿ­ಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸು­ವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಗುರು­ವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.ತಾಲ್ಲೂಕಿನಲ್ಲಿ ಮೆಕ್ಕೆಜೋಳವನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗು­ತ್ತಿದೆ. ಜೋಳಕ್ಕೆ ಬೆಂಬಲ ಬೆಲೆ ಇಲ್ಲದೆ ರೈತರು ನಷ್ಟ ಅನುಭವಿಸುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಆರ್‌.­ಲಕ್ಷ್ಮೀನಾರಾ­ಯಣ ಹೇಳಿದರು.ರೈತರು ಬೆಳೆದ ಎಲ್ಲ ಬೆಳೆಗಳಿಗೂ ಸೂಕ್ತ ಬೆಲೆ ನಿಗದಿಗೊಳಿಸಬೇಕು, ಬ್ಯಾಂಕ್‌­­ಗಳು ಬಡ್ಡಿ ರಹಿತ ಬೆಳೆ ಸಾಲ­ವನ್ನು ನೀಡಬೇಕು, ರೈತರು ಬೆಳೆದಿರುವ ಎಲ್ಲ ಉತ್ಪನ್ನಗಳ ಖರೀದಿ ವ್ಯವಹಾರ ಎಪಿಎಂಸಿ ಆವರಣದಲ್ಲಿಯೇ ನಡೆಯ­ಬೇಕು, ಬೆಳೆ ವಿಮಾ ಯೋಜನೆ ವಿಸ್ತರಿಸಿ ರೈತರ ಆರ್ಥಿಕ ನಷ್ಟ ಭರಿಸಬೇಕು ಎಂದು ಅವರು ಒತ್ತಾಯಿಸಿದರು.ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್‌ಗೌಡ ಮಾತನಾಡಿ, ರೈತರು ಬೆಳೆದಿರುವ ಮೆಕ್ಕೆ ಜೋಳಕ್ಕೆ ನವೆಂಬರ್ ತಿಂಗಳಿನಲ್ಲಿಯೇ ಖರೀದಿ ಕೇಂದ್ರ ಸ್ಥಾಪಿ­ಸ­ಬೇಕಿತ್ತು. ಸರ್ಕಾರ ವಿಳಂಬ ಮಾಡಿ­ದ್ದರಿಂದ ಸಂಗ್ರಹಣೆ ಮಾಡಿ­ಕೊಳ್ಳಲು ಸ್ಥಳಾವಕಾಶವಿಲ್ಲದೆ, ಸಾಲ ತೀರಿಸಲು ಕಡಿಮೆ ಬೆಲೆಗೆ ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿ­ದ್ದಾರೆ. ಇದಕ್ಕೆ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದರು.ರೈತ ಸಂಘದ ಕಾರ್ಯದರ್ಶಿ ಸನತ್ ಕುಮಾರ್, ಮುಖಂಡರಾದ ರಾಜಣ್ಣ, ಮುದ್ದರಂಗಪ್ಪ, ಅಶ್ವತ್ಥಪ್ಪ, ವೆಂಕಟೇಶ್, ದೇವನಹಳ್ಳಿ ಶ್ರೀನಿವಾಸ್, ಆನಂದ್, ನಾರಾಯಣಪ್ಪ ಇತರರಿದ್ದರು.

ಪ್ರತಿಕ್ರಿಯಿಸಿ (+)