ಅರಸೀಕೆರೆ: ತಾಲ್ಲೂಕಿನ ಮಾಡಾಳು ಗ್ರಾಮದ ರೈತ ಎಂ.ಟಿ ಶಿವಪ್ಪ ಎಂಬುವರ ಹಿತ್ತಲಿನಲ್ಲಿ ಜೋಳದ ಸೊಪ್ಪೆ ಬಣವೆಗೆ ಶುಕ್ರವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 25 ಗಾಡಿ ಜೋಳದ ಸೊಪ್ಪೆ ಸುಟ್ಟು ಹೋಗಿದ್ದು, ಸುಮಾರು 25 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ.

ರೈತ ಶಿವಪ್ಪ ಕಟಾವು ಮಾಡಿದ ಜೋಳದ ಸೊಪ್ಪೆಯನ್ನು ಹಿತ್ತಲಲ್ಲಿ ಸಂಗ್ರಹಿಸಿ ಬಣವೆ ಒಟ್ಟಿದ್ದರು. ಆಕಸ್ಮಿಕವಾಗಿ ಬಣವೆಗೆ ಬೆಂಕಿ ಬಿದ್ದ ಪರಿಣಾಮ ಸೊಪ್ಪೆ ಬೆಂಕಿಯಲ್ಲಿ ಸುಟ್ಟು ಹೋಯಿತು. ಅಕ್ಕಪಕ್ಕದ ನಿವಾಸಿಗಳೂ ಕೂಗಾಡಿದಾಗ ಜನರು ಹಾಗೂ 50ಕ್ಕೂ ಹೆಚ್ಚು ಯುವಕರು ಧಾವಿಸಿ ಬಂದು ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ ಯಾವುದೇ ಪ್ರಯೋಜನವಾಗಲಿಲ್ಲ .

ನಂತರ ಅಗ್ನಿಶಾಮಕ ದಳಕ್ಕೆ ಸುದ್ದಿಮುಟ್ಟಿಸಿದರೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರುವ ಹೊತ್ತಿಗೆ ಸೊಪ್ಪೆ ಬಣವೆ ಬೆಂದು ಬೂದಿಯಾಗಿತ್ತು. ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಉಮೇಶ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮೋಹನ್ಕುಮಾರ್ ಶನಿವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿ ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಸಿದ್ದಾರೆ. ಕಣಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.