ಶುಕ್ರವಾರ, ಮೇ 14, 2021
31 °C

ಜ್ಞಾನಪೀಠ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜ್ಞಾನಪೀಠಾ ಗಾನಪೀಠಾ

ಎತ್ತು ಹಕ್ಕಲ ಹಾರಿತೊ

ಸಾವಳಿಗಿಯ ಮಠದ ರೊಟ್ಟಿಯು

ಹತ್ತು ಕಡಲನು ದಾಟಿತೊ

ಮಣ್ಣ ಹುಡುಗನ ಸೀಗಿಹಬ್ಬಕೆ

ದಿಲ್ಲಿ ಓಡುತ ಬಂದಿತೊ

ತಾಯಿ ಭಾಷೆಗೆ ಜೋಳ ರಾಶಿಗೆ

ಗೋದಿ ಬೆಲ್ಲವು ಬಾಗಿತೊ

ಕುಲಿಮೆ ಕೆಂಡದ ತಿದಿಯ ದುಡಿಮೆಗೆ

ವಿಶ್ವಪೂಜೆಯು ಸಂದಿತೊ

ಚಂದ್ರಶೇಖರ ಕಂಬಾರರ

ತಾಯ ಜೋಗುಳ ಕೇಳಿತೊ

ಇಗೋ ಕನ್ನಡ ಮಹಾಮಠದಲಿ

ಜ್ಞಾನಪೀಠದ ಠಂಠಂಣಾ

ಹಸಿದ ಕನ್ನಡ

ಹುಡುಗನೊಬ್ಬನ

ವಿಶ್ವ ಗಂಟೆಯ

ಢಂಢಣಾ  !!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.