ಬೆಂಗಳೂರು (ಪಿಟಿಐ): ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್ ಅಳವಡಿಸಿರುವ ಸುಧಾರಿತ ಜಿಎಸ್ಎಲ್ವಿಡಿ–5 ಉಪಗ್ರಹ ಉಡಾವಣಾ ವಾಹನವನ್ನು ಜನವರಿ 5ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲು ಯೋಚಿಸಿದ್ದು, ರಾಕೆಟ್ನ ಪರಿಶೀಲನೆ ನಂತರ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.

ಜಿಎಸ್ಎಲ್ವಿಡಿ–5 ಉಡಾವಣೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಇಸ್ರೊದ ಯೋಜನಾ ಸಿದ್ಧತಾ ಪರಿಶೀಲನಾ (ಮಿಷನ್ ರೆಡಿನೆಸ್ ರಿವ್ಯೂವ್– ಎಂಆರ್ಆರ್) ತಂಡ ಡಿಸೆಂಬರ್ 27ಕ್ಕೆ ಸಭೆ ಸೇರಲಿದೆ. ಆಗಸ್ಟ್ 19ರಂದು ನಿಗದಿಯಾಗಿದ್ದ ಜಿಎಸ್ಎಲ್ವಿಡಿ–5 ರಾಕೆಟ್ ಉಡಾವಣೆಯನ್ನು ಇಂಧನ ಸೋರಿಕೆ ಕಾರಣದಿಂದ ದಿಢೀರನೆ ಮುಂದೂಡಲಾಗಿತ್ತು. ಈ ರಾಕೆಟ್ ‘ಜಿಸ್ಯಾಟ್–14’ ಎಂಬ ಸಂವಹನ ಉಪಗ್ರಹವನ್ನು ಹೊತ್ತೊಯ್ಯಬೇಕಿತ್ತು.

‘ಜ.5ಕ್ಕೆ ಪರೀಕ್ಷಾರ್ಥ ಉಡ್ಡಯನ ನಡೆಸಲು ನಾವು ಯೋಚಿಸಿದ್ದೇವೆ. ಇದೇ 27ರಂದು ಸಭೆ ಸೇರುವ ಎಂಆರ್ಆರ್ ತಂಡವು ರಾಕೆಟ್ನ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದೆ. ಉಡ್ಡಯನದ ದಿನಾಂಕ ಮತ್ತು ಸಮಯವನ್ನೂ ಈ ತಂಡವೇ ನಿರ್ಧರಿಸಲಿದೆ’ ಎಂದು ಇಸ್ರೊ ವಕ್ತಾರ ದೇವಿಪ್ರಸಾದ್ ಕಾರ್ಣಿಕ್ ತಿಳಿಸಿದ್ದಾರೆ. ‘ಮುಂದಿನ ವಾರ ಉಪಗ್ರಹವನ್ನು ರಾಕೆಟ್ಗೆ ಜೋಡಿಸಲಾಗುತ್ತದೆ. ಇದೇ 26ರ ವೇಳೆಗೆ ಎಲ್ಲವೂ ಸಿದ್ಧವಾಗಲಿದೆ. 27ಕ್ಕೆ ಪರಿಶೀಲನೆ ನಡೆಯಲಿದೆ. ಈ ಬಾರಿ ರಾಕೆಟ್ಗೆ ಹೊಸ ಇಂಧನ ಟ್ಯಾಂಕ್ ಅಳವಡಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.