ನವದೆಹಲಿ (ಪಿಟಿಐ ): ಟಟ್ರಾ ಸೇನಾ ಟ್ರಕ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬ್ರಿಟನ್ ಸರ್ಕಾರಕ್ಕೆ ಪತ್ರ ಬರೆಯಲಿದ್ದು, `ಟಟ್ರಾ ಸಿಪೊಕ್ಸ್ ಯುಕೆ~ ಕಂಪೆನಿಯ ಮಾಲೀಕತ್ವ ಹಾಗೂ ಹಣಕಾಸು ವ್ಯವಹಾರದ ವಿವರ ನೀಡುವಂತೆ ಮನವಿ ಮಾಡಿಕೊಳ್ಳಲಿದೆ.

ಎಲ್ಲ ಬಗೆಯ ಭೂಭಾಗಗಳಲ್ಲಿ ಸಂಚರಿಸಬಲ್ಲ ಟಟ್ರಾ ಟ್ರಕ್ಗಳ ಖರೀದಿಯಲ್ಲಿ ರಕ್ಷಣಾ ವಲಯದ ಸಾರ್ವಜನಿಕ ಕ್ಷೇತ್ರದ ಕಂಪೆನಿಯಾಗಿರುವ `ಬಿಇಎಂಎಲ್~ ಟಟ್ರಾ ಸಿಪೊಕ್ಸ್ಗೆ ಎಷ್ಟು ಹಣ ಪಾವತಿಸಿದೆ ಎಂದು ಸಿಬಿಐ ತಿಳಿಯಬಯಸಿದೆ. `ಬಿಇಎಂಎಲ್~ನಿಂದ ಪಾವತಿಯಾಗಿರುವ ಹಣ, ಯಾವುದೇ ಲೆಕ್ಕಪತ್ರದಡಿ ಬರದೇ ತೆರಿಗೆ ವ್ಯಾಪ್ತಿಗೂ ಒಳಪಡದೇ ಹೋಗಿದೆ ಎಂಬ ಶಂಕೆ ಸಿಬಿಐಗಿದೆ.

ಈ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರಕ್ಕೆ ನ್ಯಾಯಾಂಗದ ಮೂಲಕ ಮನವಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ, ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಅಲ್ಲದೇ ಟಟ್ರಾ ಸಿಪೊಕ್ಸ್ ಹಾಗೂ ಜೆಕ್ ಗಣರಾಜ್ಯದ ಟಟ್ರಾ ಎ.ಎಸ್. ನಡುವಿನ ಸಂಬಂಧವೇನು ಎಂಬ ಬಗ್ಗೆ ಈ ಪತ್ರದಲ್ಲಿ ಸಿಬಿಐ ಮಾಹಿತಿ ಕೇಳಲಿದೆ.

ಟಟ್ರಾ ಹಗರಣದಲ್ಲಿ ಹೆಸರು ಕೇಳಿಬಂದಿರುವ ರವೀಂದ್ರ ರಿಷಿ ವೆಕ್ಟ್ರಾ ಕಂಪೆನಿಯ ಅಧ್ಯಕ್ಷರಾಗಿದ್ದು, ಈ ಕಂಪೆನಿ ಟಟ್ರಾ ಸಿಪೊಕ್ಸ್ನಲ್ಲಿ ಸಾಕಷ್ಟು ಪ್ರಮಾಣದ ಷೇರು ಹೊಂದಿದೆ. ಆದರೆ, ರವೀಂದ್ರ ರಿಷಿ ತಮ್ಮ ಮೇಲಿನ ಆರೋಪಗಳನ್ನೆಲ್ಲ ನಿರಾಕರಿಸಿದ್ದು, ಕಳೆದ ವಾರ ವಿಚಾರಣೆಯ ಸಂದರ್ಭದಲ್ಲಿ ಸಹಕಾರ ನೀಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಈ ಪ್ರಕರಣದಲ್ಲಿ ರಕ್ಷಣಾ ಸಚಿವಾಲಯ, ಬಿಇಎಂಎಲ್ ಹಾಗೂ ಸೇನಾಧಿಕಾರಿಗಳ ಪಾತ್ರವೇನು ಎಂಬ ಬಗ್ಗೆ ಸಿಬಿಐ ತನಿಖೆ ನಡೆಸಲಿದ್ದು, ಶೀಘ್ರದಲ್ಲೇ ಅವರನ್ನೂ ಸಹ ಪ್ರಶ್ನಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

1997ರಲ್ಲಿ `ಟಿಟ್ರಾ ಸಿಪೊಕ್ಸ್ ಯುಕೆ~ ಜತೆ ಬಿಇಎಂಎಲ್ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಸೇನಾ ನಿಯಯಮಾವಳಿ ಪ್ರಕಾರ ಯಾವುದೇ ಖರೀದಿ ಒಪ್ಪಂದವನ್ನು ಮೂಲ ಕಂಪೆನಿ ಜತೆಗೇ ಮಾಡಿಕೊಳ್ಳಬೇಕು. `ಟಟ್ರಾ ಸಿಪೊಕ್ಸ್ ಯುಕೆ~ ಎಲ್ಲ ಮೇಲ್ಮೈಗಳಲ್ಲಿ ಸಂಚರಿಸುವ ಟಟ್ರಾ ಟ್ರಕ್ ಉತ್ಪಾದಿಸದೇ ಇರುವುದರಿಂದ ಇಲ್ಲಿ ಸ್ಪಷ್ಟವಾಗಿ ನಿಯಮ ಉಲ್ಲಂಘಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.