ಶನಿವಾರ, ಮಾರ್ಚ್ 6, 2021
18 °C
ವೀಸಾ ಉಲ್ಲಂಘನೆಯ ಆರೋಪ

ಟಿಸಿಎಸ್‌, ಇನ್ಫೊಸಿಸ್‌ ವಿರುದ್ಧ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಿಸಿಎಸ್‌, ಇನ್ಫೊಸಿಸ್‌ ವಿರುದ್ಧ ತನಿಖೆ

ನ್ಯೂಯಾರ್ಕ್‌ (ಪಿಟಿಐ): ಎಚ್‌1-ಬಿ ವೀಸಾ ಉಲ್ಲಂಘನೆ ಆರೋಪದ ಮೇಲೆ ಭಾರತದ ಅತ್ಯಂತ ದೊಡ್ಡ ಹೊರಗುತ್ತಿಗೆ ಕಂಪೆನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ಮತ್ತು ಇನ್ಫೊಸಿಸ್‌ ವಿರುದ್ಧ ಅಮೆರಿಕ ಸರ್ಕಾರ ತನಿಖೆ ಆರಂಭಿಸಿದೆ.ಸದರ್ನ್‌ ಕ್ಯಾಲಿಫೋರ್ನಿಯಾ ಎಡಿಸನ್‌ ಹೆಸರಿನ ವಿದ್ಯುತ್‌ ಕಂಪೆನಿಯಲ್ಲಿ ವಿದೇಶಿ ತಾಂತ್ರಿಕ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ವೀಸಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದರ ಆಧಾರದ ಮೇಲೆ ಅಮೆರಿಕದ ಕಾರ್ಮಿಕ ಇಲಾಖೆ ತನಿಖೆಗೆ ಆದೇಶ ನೀಡಿದೆ ಎಂದು ‘ನ್ಯೂಯಾರ್ಕ್‌ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.ಈ ವಿದ್ಯುತ್‌ ಸಂಸ್ಥೆಯು ಇತ್ತೀಚೆಗೆ 500ಕ್ಕೂ ಹೆಚ್ಚು ತಾಂತ್ರಿಕ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿತ್ತು. ಅವರ ಸ್ಥಾನಕ್ಕೆ ವಿಪ್ರೊ ಮತ್ತು ಇನ್ಫೊಸಿಸ್‌ಗಳ ಮೂಲಕ ತಾತ್ಕಾಲಿಕ ಕೆಲಸದ ವೀಸಾದಲ್ಲಿ (ಎಚ್‌1-ಬಿ ವೀಸಾ) ಬಂದವರನ್ನು ನೇಮಕ ಮಾಡಿತ್ತು. ಹೊಸದಾಗಿ ನೇಮಕಗೊಂಡವರಿಗೆ ಉದ್ಯೋಗ ತರಬೇತಿ ನೀಡುವಂತೆ ವಜಾ ಮಾಡಲಾದ ಹಲವು ಸಿಬ್ಬಂದಿಗೆ ಆದೇಶಿಸಿತ್ತು. ಸೆನೆಟರ್‌ಗಳಾದ ಇಲಿನಾಯಿಸ್‌ನ ರಿಚರ್ಡ್‌ ಡರ್ಬಿನ್‌ ಮತ್ತು ಅಲಬಾಮಾದ ಜೆಫ್‌ ಸೆಷನ್ಸ್‌ ಪ್ರಕರಣದ ತನಿಖೆ ನಡೆಸಲಿದ್ದಾರೆ ಎಂದು ವರದಿ ಹೇಳಿದೆ.

ಇತ್ತೀಚೆಗೆ ಮನರಂಜನಾ ಸಂಸ್ಥೆ ವಾಲ್ಟ್‌ ಡಿಸ್ನಿ ಕೂಡ ಹಲವು ಸಿಬ್ಬಂದಿಯನ್ನು ವಜಾಗೊಳಿಸಿತ್ತು. ಅವರ ಬದಲಿಗೆ ಎಚ್‌1-ಬಿ ವೀಸಾದಲ್ಲಿರುವ ಭಾರತೀಯರನ್ನು ನೇಮಕ ಮಾಡಿಕೊಂಡಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿತ್ತು.ಸದರ್ನ್‌ ಕ್ಯಾಲಿಫೋರ್ನಿಯಾ ಎಡಿಸನ್‌ ವಿದ್ಯುತ್‌ ಕಂಪೆನಿಯಲ್ಲಿ ಕೆಲಸಗಾರರನ್ನು ವಜಾ ಮಾಡಿರುವುದು ಉದ್ಯಮ ಮತ್ತು ಹೊರಗುತ್ತಿಗೆ ಸಂಸ್ಥೆಗಳು ಅಮೆರಿಕದಲ್ಲಿ ತಾಂತ್ರಿಕ ಕೆಲಸಗಳಿಗಾಗಿ ವಲಸಿಗರನ್ನು ನೇಮಿಸಿಕೊಳ್ಳುವ ಬಗ್ಗೆ ಹಲವು ಪ್ರಶ್ನೆಗಳನ್ನು  ಎತ್ತಿದೆ. ತಾಂತ್ರಿಕ ಕೆಲಸಗಳಿಗಾಗಿ ವಲಸಿಗರನ್ನು ನೇಮಿಸಲು ಎಚ್‌1–ಬಿ ವೀಸಾಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ‘ನ್ಯೂಯಾರ್ಕ್‌ ಟೈಮ್ಸ್‌’ ಹೇಳಿದೆ.

*

ಮುಖ್ಯಾಂಶಗಳು

*ತಾಂತ್ರಿಕ ಕೆಲಸಗಳಿಗೆ ತಾತ್ಕಾಲಿಕ ವೀಸಾದಲ್ಲಿರುವ ವಲಸಿಗರ ಬಳಕೆ

* ಅಮೆರಿಕ ಕಾರ್ಮಿಕ ಇಲಾಖೆಯಿಂದ ತನಿಖೆಗೆ ಆದೇಶ

* ತನಿಖೆ ನಡೆಸಲು ಇಬ್ಬರು ಸೆನೆಟರ್‌ಗಳು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.