ಸೋಮವಾರ, ಮೇ 23, 2022
28 °C

ಟಿಸಿಎಸ್: ಮುಂದಿನ ವರ್ಷ 37,000 ಉದ್ಯೋಗಿಗಳ ಭರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಮುಂದಿನ ಹಣಕಾಸು ವರ್ಷದಲ್ಲಿ ‘ಕ್ಯಾಂಪಸ್  ನೇಮಕಾತಿ’ ಮೂಲಕ  37,000 ಉದ್ಯೋಗಿಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಐಟಿ  ಮುಂಚೂಣಿ ಕಂಪೆನಿ ‘ಟಾಟಾ ಕನ್ಸಲ್ಟನ್ಸಿ’  ತಿಳಿಸಿದೆ.2012ರಲ್ಲಿ ದೇಶದ 171 ಶೈಕ್ಷಣಿಕ ಸಂಸ್ಥೆಗಳಿಂದ  37,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಯೋಜನೆ ಇದೆ ಎಂದು ‘ಟಿಸಿಎಸ್’ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಜೋಯೇಂದ್ರ ಮುಖರ್ಜಿ ತಿಳಿಸಿದ್ದಾರೆ.ಕಳೆದ ವರ್ಷ ‘ಟಿಸಿಎಸ್’ ಕ್ಯಾಂಪಸ್ ನೇಮಕಾತಿ ಮೂಲಕ 27,000 ಉದ್ಯೋಗಿಗಳನ್ನು ಭರ್ತಿ ಮಾಡಿಕೊಂಡಿತ್ತು. ಕಳೆದ ಮೂರು ತ್ರೈಮಾಸಿಕ ಅವಧಿಗಳಲ್ಲಿ ಕಂಪೆನಿಯ ಸಾಧನೆ ಉತ್ತಮವಾಗಿದ್ದು, ಉದ್ಯೋಗಿಗಳ ಬೇಡಿಕೆ ಹೆಚ್ಚಿದೆ. ಹೊಸ ನೇಮಕಾತಿ ಮೂಲಕ ಸಂಸ್ಥೆಗೆ ಸೇರ್ಪಡೆಯಾಗುವ ಉದ್ಯೋಗಿಗಳನ್ನು ದೇಶಿ ಮತ್ತು ವಿದೇಶಿ ಕಚೇರಿಗಳಲ್ಲಿ ನೇಮಿಸಲಾಗುವುದು ಎಂದು  ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.