ಟಿಸಿ ಅವಳವಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಶನಿವಾರ, ಜೂಲೈ 20, 2019
28 °C

ಟಿಸಿ ಅವಳವಡಿಕೆಗೆ ಆಗ್ರಹಿಸಿ ಪ್ರತಿಭಟನೆ

Published:
Updated:

ಮಹಾಲಿಂಗಪುರ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರು, ಗ್ರಾಮಸ್ಥರು ಮಂಗಳವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಅಧಿಕಾರಿಗಳು ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿದರು. ರೈತ ಮುಖಂಡ ಸದಾಶಿವ ಸಂಕ್ರಟ್ಟಿ ಮಾತನಾಡಿ, `ರೈತರ ಜಮೀನಿನಲ್ಲಿ ಟಿಸಿ ಹಾಳಾದಲ್ಲಿ 72 ಗಂಟೆ ಒಳಗೆ ಬದಲಾಯಿಸಬೇಕು' ಎಂದು ಒತ್ತಾಯಿಸಿದರು.ಜಮೀನಿನಲ್ಲಿ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಅತ್ಯಂತ ಹಳೆಯದಾಗಿದ್ದು, ಅಪಾಯದ ಅಂಚಿನಲ್ಲಿವೆ. ಅವುಗಳನ್ನು ಬದಲಾಯಿಸಬೇಕು. ಸಾಮರ್ಥಕ್ಕೆ ತಕ್ಕಂತೆ ಟಿಸಿ ಅಳವಡಿಸಬೇಕು' ಎಂದು ಒತ್ತಾಯಿಸಿದರು.ಹೆಸ್ಕಾಂ ಅಧಿಕಾರಿ ಮಹಾಲಿಂಗಪ್ಪ ಧಡೂತಿ ಮಾತನಾಡಿ, ಒಂದು ತಿಂಗಳ ಕಾಲಾವಧಿಯಲ್ಲಿ ರೈತರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಹೇಳಿದರು. ರೈತ ಮುಖಂಡರಾದ ಗಂಗಾಧರ ಮೇಟಿ, ಬುದ್ನಿಯ ಮಹಾಲಿಂಗಪ್ಪಗೌಡ ಪಾಟೀಲ, ಪರಮಾನಂದ ಸನದಿ, ಶ್ರಿಶೈಲ ರೊಡ್ಡನ್ನವರ, ಪರಮಾನಂದ ಕೆಸರಗೊಪ್ಪ, ಸಿದ್ದು ಉಳ್ಳಾಗಡ್ಡಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry