`ಗೋವಿಂದಾಯ ನಮಃ~ ಚಿತ್ರ ಗೆದ್ದರೂ ವಿವಾದದ ನಂಟಿನಿಂದ ಮುಕ್ತವಾಗುತ್ತಿಲ್ಲ. ಕತೆ ಕದ್ದ ಆರೋಪದಿಂದ ಮುಕ್ತವಾಗಿದ್ದ ಚಿತ್ರತಂಡ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ಇದು ಚಿತ್ರದ ಟೆಲಿವಿಷನ್ ಪ್ರಸಾರದ ವಿವಾದ.

ಚಿತ್ರ ಪ್ರಸಾರದ ಹಕ್ಕು ಪಡೆದಿರುವ `ಝೀ ಕನ್ನಡ ವಾಹಿನಿ~ ಜೂನ್ 30ರಂದು ಚಿತ್ರವನ್ನು ಪ್ರಸಾರ ಮಾಡುವುದಾಗಿ ಪ್ರಕಟಿಸಿತ್ತು. ಆದರೆ ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಚಿತ್ರ ವಿತರಕರಿಗೆ ಹಿನ್ನಡೆಯಾಗಿದೆ. ಚಿತ್ರ ಪ್ರಸಾರಕ್ಕೆ ತಡೆ ನೀಡಲು ಸಿಟಿ ಸಿವಿಲ್ ಕೋರ್ಟ್ ನಿರಾಕರಿಸಿದೆ.

ಚಿತ್ರ ವಿತರಣೆಯ ಹಕ್ಕು ಪಡೆದಿರುವ ವಿತರಕರು, ಚಿತ್ರ 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ. ಹೀಗಿರುವಾಗ ಈಗಲೇ ಟೀವಿಯಲ್ಲಿ ಚಿತ್ರ ಪ್ರಸಾರ ಮಾಡಿದರೆ ನಮಗೆ ನಷ್ಟವಾಗುತ್ತದೆ ಎನ್ನುವ ವಾದ ಮುಂದಿಟ್ಟಿದ್ದರು.

ಇದಕ್ಕೆ ಪೂರಕವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಸಾ.ರಾ.ಗೋವಿಂದು ಝೀ ವಾಹಿನಿಗೆ ಬರೆದ ಪತ್ರದಲ್ಲಿಯೂ ಚಿತ್ರ ಪ್ರಸಾರ ಮಾಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ವಾಣಿಜ್ಯ ಮಂಡಳಿಯ ನಿಯಮಾವಳಿ ಪ್ರಕಾರ ಚಿತ್ರ ಬಿಡುಗಡೆಯಾದ ಒಂದು ವರ್ಷದ ನಂತರವೇ ಟೀವಿ ಮತ್ತು ಇನ್ನಿತರ ಉಪಗ್ರಹ ಚಾನೆಲ್ಗಳಲ್ಲಿ ಪ್ರಸಾರ ಮಾಡಬೇಕು. ಈ ವಿಷಯ ಮಂಡಳಿಯ ಸರ್ವ ಸದಸ್ಯರ ಸಭೆಯಲ್ಲೂ ಅನುಮೋದನೆಗೊಂಡಿದೆ.

ಆದರೆ `ಗೋವಿಂದಾಯ ನಮಃ~ ಚಿತ್ರವನ್ನು ಬಿಡುಗಡೆಯಾದ ಮೂರು ತಿಂಗಳೊಳಗೆ ಪ್ರಸಾರ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಉದ್ಯಮದ ಹಿತದೃಷ್ಟಿಯಿಂದ ಇದು ಸಮಂಜಸವಲ್ಲ ಎಂಬುದು ಸಾ.ರಾ. ಗೋವಿಂದು ಬರೆದಿರುವ ಪತ್ರದ ಸಾರಾಂಶ.

ಆದರೆ ಇದಕ್ಕೆ ಝೀ ವಾಹಿನಿ ಆಕ್ಷೇಪ ವ್ಯಕ್ತಪಡಿಸಿದೆ. ಸಿನಿಮಾ ಚಿತ್ರೀಕರಣ ಪ್ರಾರಂಭವಾಗುವ ಮುನ್ನವೇ ವಾಹಿನಿ ನಿರ್ಮಾಪಕರೊಂದಿಗೆ ವ್ಯಾವಹಾರಿಕ ಸಂಬಂಧ ನಡೆಸಿದೆ. ಚಿತ್ರಕ್ಕೆ ಅಗತ್ಯ ಹಣಕಾಸಿನ ನೆರವು ನೀಡಿರುವುದಲ್ಲದೆ, ಅದರ ಪ್ರಸಾರದ ಹಕ್ಕನ್ನು ಚಿತ್ರೀಕರಣ ನಡೆಯುವಾಗಲೇ ಪಡೆದುಕೊಂಡಿದೆ.

ಒಂದು ತಿಂಗಳ ಹಿಂದೆಯಷ್ಟೇ ನಿರ್ಮಾಪಕ ಸುರೇಶ್ ಅವರಿಂದ ವಾಹಿನಿ `ತಕ್ಷಣ ಪ್ರಸಾರದ ಹಕ್ಕ~ನ್ನು ಸಹ ಪಡೆದುಕೊಂಡಿದೆ. ಇದಕ್ಕೆ ಬೇಕಾದ ಎಲ್ಲಾ ದಾಖಲಾತಿಗಳೂ ನಮ್ಮಲ್ಲಿವೆ. ಹೀಗಾಗಿ ವಾಹಿನಿಯು ಯಾವಾಗ ಬೇಕಾದರೂ ಚಿತ್ರವನ್ನು ಪ್ರಸಾರ ಮಾಡಬಹುದಾಗಿದೆ ಎನ್ನುತ್ತಾರೆ ಝೀ ವಾಹಿನಿಯ ಅಧಿಕಾರಿಗಳು.

ಚಿತ್ರರಂಗದ ಆಶಯಕ್ಕೆ ವಿರುದ್ಧವಾಗಿ ವಾಹಿನಿ ವರ್ತಿಸುತ್ತಿದೆ ಎಂಬ ಭಾವನೆ ಸೃಷ್ಟಿಯಾಗಿದೆ. ಇದು ಸತ್ಯಕ್ಕೆ ದೂರ. ಅಪಾರ ಮೊತ್ತದ ಹಣ ನೀಡಿ ಚಿತ್ರದ ತತ್ಕ್ಷಣ ಪ್ರಸಾರದ ಹಕ್ಕು ಸೇರಿದಂತೆ ಉಪಗ್ರಹ ಹಕ್ಕನ್ನು ನ್ಯಾಯಬದ್ಧವಾಗಿ ನಿರ್ಮಾಪಕರೊಂದಿಗೆ ನಡೆಸಿರುವ ಒಪ್ಪಂದದಲ್ಲಿ ಪಡೆದುಕೊಳ್ಳಲಾಗಿದೆ.

ಅನೇಕ ಚಾನೆಲ್ಗಳಲ್ಲಿ ಚಿತ್ರ ಬಿಡುಗಡೆಯಾಗಿ ಒಂದು ವರ್ಷಕ್ಕೂ ಮುನ್ನವೇ ಪ್ರಸಾರವಾಗುತ್ತಿದ್ದರೂ ಝೀ ವಾಹಿನಿಯೊಂದಿಗೆ ಮಾತ್ರ ಈ ರೀತಿ ನಡೆದುಕೊಳ್ಳುತ್ತಿರುವುದು ಅಚ್ಚರಿ ಉಂಟುಮಾಡಿದೆ ಎಂದು ಝೀ ವಾಹಿನಿ ವಾಣಿಜ್ಯ ಮಂಡಳಿಗೆ ಪ್ರತಿಕ್ರಿಯೆ ನೀಡಿದೆ.

`ಇದು ಚಿತ್ರತಂಡದ ಆಂತರಿಕ ಭಿನ್ನಾಭಿಪ್ರಾಯ. ಇದರ ಮಧ್ಯೆ ವಾಹಿನಿಯನ್ನು ಎಳೆದುತರುವ ಅಗತ್ಯವಿಲ್ಲ. ವಾಣಿಜ್ಯ ಮಂಡಳಿ, ನಿರ್ಮಾಪಕರು ಮತ್ತು ವಿತರಕರು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಅಲ್ಲದೆ ಚಿತ್ರ ಬಿಡುಗಡೆಯಾದ ಒಂದು ವರ್ಷದವರೆಗೆ ಅದನ್ನು ಟೀವಿಯಲ್ಲಿ ಪ್ರಸಾರ ಮಾಡುವಂತಿಲ್ಲ ಎಂಬ ಯಾವುದೇ ಕಾನೂನು ಇಲ್ಲ.

ಕೆಲವು ದಿನಗಳ ಹಿಂದೆಯಷ್ಟೇ ಮತ್ತೊಂದು ಖಾಸಗಿ ವಾಹಿನಿಯಲ್ಲಿ ಪುನೀತ್ ರಾಜ್ಕುಮಾರ್ ಅಭಿನಯಿಸಿದ್ದ ಹೊಸ ಚಲನಚಿತ್ರವನ್ನು ಪ್ರಸಾರ ಮಾಡಲಾಗಿತ್ತು. ಆದರೆ ಅದರ ಬಗ್ಗೆ ಯಾರೂ ಆಕ್ಷೇಪ ಎತ್ತಿರಲಿಲ್ಲ~ ಎನ್ನುತ್ತಾರೆ ಝೀ ವಾಹಿನಿಯ ಅಧಿಕಾರಿಯೊಬ್ಬರು.

`ಕನ್ನಡ ಚಿತ್ರರಂಗಕ್ಕೆ ಇತರ ಭಾಷೆಗಳಂತೆ ವಿಶಾಲ ಮಾರುಕಟ್ಟೆ ಇಲ್ಲ. ಉಪಗ್ರಹ ಪ್ರಸಾರದ ಹಕ್ಕು ನೀಡಿಯೇ ಚಿತ್ರಗಳು ಲಾಭ ಗಳಿಸಬೇಕಾಗಿದೆ. ಆದರೆ ಉದಯ ಮತ್ತು ಝೀ ವಾಹಿನಿಗಳನ್ನು ಹೊರತುಪಡಿಸಿ ಅನ್ಯ ಖಾಸಗಿ ವಾಹಿನಿಗಳು ಹೊಸ ಚಿತ್ರಗಳನ್ನು ಖರೀದಿಸುತ್ತಿಲ್ಲ. ಹೀಗಾಗಿ ಉದ್ಯಮದ ಲಾಭ, ನಷ್ಟ ಈ ವಾಹಿನಿಗಳನ್ನೇ ಅವಲಂಬಿಸಿದೆ.

ಝೀ ವಾಹಿನಿ ಸುಮಾರು 150 ಕೋಟಿ ರೂಪಾಯಿಗಳನ್ನು ಸಿನಿಮಾಗಳ ಮೇಲೆ ವಿನಿಯೋಗಿಸಿದೆ. ಹೀಗಿರುವಾಗ ಚಿತ್ರ ಪ್ರಸಾರ ಮಾಡದಂತೆ ಒತ್ತಡ ಹೇರುವುದು ಸಮಂಜಸವಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೆ ಚಿತ್ರಗಳನ್ನೇ ಕೊಳ್ಳುವುದನ್ನು ನಿಲ್ಲಿಸಬೇಕಾಗುತ್ತದೆ~ ಎಂದು ಅವರು ಎಚ್ಚರಿಸುತ್ತಾರೆ.

ಕೋಮಲ್ ಹೇಳಿದ್ದು...
`ಕನ್ನಡ ಚಿತ್ರವೊಂದು ಸೂಪರ್ ಹಿಟ್ ಆಗುವುದೇ ಕಷ್ಟ. ಹೀಗಿರುವಾಗ ನೂರು ದಿನದತ್ತ ಓಡುತ್ತಿರುವ ಚಿತ್ರವನ್ನು ಈಗಲೇ ಟೀವಿಯಲ್ಲಿ ಪ್ರಸಾರ ಮಾಡಿದರೆ ಯಾರು ಚಿತ್ರಮಂದಿರಕ್ಕೆ ಬರುತ್ತಾರೆ. ನಿರ್ಮಾಪಕರು ಚಿತ್ರಮಾಡುವ ಮುನ್ನವೇ ವಾಣಿಜ್ಯ ಮಂಡಳಿಗೆ ಒಂದು ವರ್ಷಕ್ಕೆ ಮುನ್ನ ಪ್ರಸಾರ ಮಾಡುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಿರುತ್ತಾರೆ.

ಆದರೆ ಚೆನ್ನಾಗಿ ಓಡುತ್ತಿರುವ ಚಿತ್ರವನ್ನು ದುಡ್ಡಿನ ಆಸೆಗೆ ಬಿದ್ದು ಅವರು ಟೀವಿ ವಾಹಿನಿಗೆ ಪ್ರಸಾರ ಮಾಡಲು ಒಪ್ಪಿಗೆ ನೀಡಿದ್ದಾರೆ. ತೀರಾ ನಷ್ಟವಾದ ಚಿತ್ರವನ್ನು ಆರು ತಿಂಗಳಲ್ಲಿ ಪ್ರಸಾರ ಮಾಡಲು ಅನುಮತಿ ಸಿಗುತ್ತದೆ.

ಆದರೆ ಗೆದ್ದ ಚಿತ್ರವನ್ನು ಹೀಗೆ ಪ್ರಸಾರ ಮಾಡುವುದು ಸರಿಯಲ್ಲ. ಈ ಹಿಂದೆ `ಶೌರ್ಯ~ ಚಿತ್ರದ ಪ್ರಸಾರ ವಿಷಯದಲ್ಲೂ ಹೀಗೆ ವಿವಾದ ಎದ್ದಿತ್ತು. ಕೊನೆಗೆ ಪ್ರಸಾರ ಮಾಡುವ ಯೋಜನೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿತ್ತು.

`ಪ್ರಸಾರ ಮುಂದೂಡುವ ಪ್ರಶ್ನೆಯೇ ಇಲ್ಲ~
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಚಿತ್ರದ ನಿರ್ಮಾಪಕ ಸುರೇಶ್ ತಮಗೆ ವಾಣಿಜ್ಯ ಮಂಡಳಿಯ ನಿಯಮಾವಳಿಗಳ ಬಗ್ಗೆ ಸೂಕ್ತ ಅರಿವಿಲ್ಲದೆ ವಾಹಿನಿಗೆ ಪ್ರಸಾರ ಮಾಡಲು ಅನುಮತಿ ನೀಡಿರುವುದಾಗಿ ತಪ್ಪೊಪ್ಪೊಕೊಂಡಿದ್ದಾರೆ. ವಾಹಿನಿಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಚಿತ್ರ ಪ್ರಸಾರ ಮಾಡದಂತೆ ಮನವಿ ಮಾಡುವುದಾಗಿ ಅವರು ಮಂಡಳಿಗೆ ತಿಳಿಸಿದ್ದಾರೆ.

ಆದರೆ ಈಗಾಗಲೇ ಜಾಹೀರಾತು ಮತ್ತು ಮಾರ್ಕೆಟಿಂಗ್ ಸಂಬಂಧ ಲಕ್ಷಗಟ್ಟಲೆ ವ್ಯಯ ಮಾಡಿದ್ದು ಪ್ರಸಾರದ ದಿನಾಂಕವನ್ನು ಮುಂದೂಡುವ ಪ್ರಶ್ನೆಯೇ ಇಲ್ಲವೆಂದು ವಾಹಿನಿ ಸ್ಪಷ್ಟಪಡಿಸಿದೆ. ಕೋರ್ಟ್ ಆದೇಶ ನಮ್ಮ ಪರವಾಗಿದೆ. ಹೀಗಾಗಿ ನಿಗದಿತ ದಿನಾಂಕದಂದು ಚಿತ್ರ ಪ್ರಸಾರವಾಗುತ್ತದೆ ಎಂದು ವಾಹಿನಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಚಿತ್ರ ವಿತರಕರಿಗೆ ಇದರಿಂದ ಯಾವುದೇ ನಷ್ಟವಾಗುವುದಿಲ್ಲ. ಬಿ, ಸಿ ಕೇಂದ್ರಗಳ ವಿತರಕರಿಗೆ ಈಗಾಗಲೇ ಲಾಭ ಸಿಕ್ಕಿದೆ. ಯಾರೋ ಮಧ್ಯವರ್ತಿಗಳಿಂದ ತೆಗೆದುಕೊಂಡ ಹಣ ಬಂದಿಲ್ಲ ಎಂಬ ಕಾರಣಕ್ಕೆ ಈ ರೀತಿಯ ಗೊಂದಲ ಎಬ್ಬಿಸುತ್ತಿದ್ದಾರೆ ಎನ್ನುವುದು ನಿರ್ಮಾಪಕ ಸುರೇಶ್ ಪ್ರತಿಕ್ರಿಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.