ಶನಿವಾರ, ಮೇ 8, 2021
27 °C

ಟೆನಿಸ್: ಭೂಪತಿ-ಬೋಪಣ್ಣಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ/ಐಎಎನ್‌ಎಸ್): ಭಾರತದ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಅವರು ಇಲ್ಲಿ ನಡೆಯುತ್ತಿರುವ ಎಜೋನ್ ಟೆನಿಸ್ ಚಾಂಪಿಯನ್‌ಷಿಪ್‌ನ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿದ್ದಾರೆ.



ಮೂರನೇ ಶ್ರೇಯಾಂಕ ಹೊಂದಿದ್ದ ಭಾರತದ ಜೋಡಿ 4-6, 2-6 ರಲ್ಲಿ ಅಮೆರಿಕದ ಬಾಬ್ ಮತ್ತು ಮೈಕ್ ಬ್ರಯಾನ್ ಸಹೋದರರ ವಿರುದ್ಧ ನೇರ ಸೆಟ್‌ಗಳಿಂದ ಸೋಲು ಕಂಡಿತು. 41 ನಿಮಿಷಗಳ ಆಟದಲ್ಲಿ  ಭೂಪತಿ-ಬೋಪಣ್ಣ ಒಟ್ಟು ಮೂರು ಬಾರಿ `ಡಬಲ್ ಫಾಲ್ಟ್' ಎಸಗಿ ಪಾಯಿಂಟ್ ಕಳೆದುಕೊಂಡರು.



ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಬ್ರಯಾನ್ ಸಹೋದರರು ಎದುರಾಳಿಗಳಿಗೆ ಯಾವುದೇ ಬ್ರೇಕ್ ಪಾಯಿಂಟ್ ಬಿಟ್ಟುಕೊಡಲಿಲ್ಲ.

ದಿವಿಜ್-ರಾಜಾಗೆ ಮತ್ತೆ ನಿರಾಸೆ



ನಾಟಿಂಗ್‌ಹ್ಯಾಂ ವರದಿ: ಭಾರತದ ದಿವಿಜ್ ಶರಣ್ ಹಾಗೂ ಪುರವ್ ರಾಜಾ ಜೋಡಿ ಇಲ್ಲಿ ನಡೆದ ನಾಟಿಂಗ್‌ಹ್ಯಾಂ ಚಾಲೆಂಜರ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸೋತು `ರನ್ನರ್‌ಅಪ್' ಸ್ಥಾನ ಪಡೆದರು.  ಈ ಮೂಲಕ ಪ್ರಸಕ್ತ ಋತುವಿನಲ್ಲಿ ಎರಡನೇ ಟ್ರೋಫಿ  ಎತ್ತಿ ಹಿಡಿಯುವ ದಿವಿಜ್-ರಾಜಾ ಕನಸು ಭಗ್ನಗೊಂಡಿದೆ.



ನಾಲ್ಕನೇ ಶ್ರೇಯಾಂಕದ ಭಾರತದ ಆಟಗಾರರು 6-7, 7-6, 8-10ರಲ್ಲಿ ಥಾಯ್ಲೆಂಡ್‌ನ ಸಂಚಾಯ್ ಹಾಗೂ ಸೊಂಚತ್ ರತಿವತನ ಎದುರು ಸೋಲು ಕಂಡರು. ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದರಿಂದ ದಿವಿಜ್ ಹಾಗೂ ರಾಜಾ ತಲಾ 55 ಎಟಿಪಿ ಪಾಯಿಂಟ್‌ಗಳನ್ನು ಗಳಿಸಿದರು. ಈ ಋತುವಿನಲ್ಲಿ ಒಟ್ಟು ನಾಲ್ಕು ಫೈನಲ್‌ನಲ್ಲಿ ಆಡಿರುವ ಇವರು  ಒಂದೇ ಬಾರಿ ಟ್ರೋಫಿ ಗೆದ್ದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.