ಗುರುವಾರ , ಮೇ 28, 2020
27 °C

ಟೆನಿಸ್: ಮೋಹಿತ್‌ಗೆ ಪ್ರಶಸ್ತಿ ಡಬಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆ. ಮೋಹಿತ್ ರೆಡ್ಡಿ ಅವರು ಇಲ್ಲಿ ಕೊನೆಗೊಂಡ ಬುಲ್‌ಡಾಗ್ ಎಐಟಿಎ ಟ್ಯಾಲೆಂಟ್ ಸೀರಿಸ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ‘ಡಬಲ್’ ಗೌರವ ಪಡೆದರು.

ಶುಕ್ರವಾರ ನಡೆದ ಬಾಲಕರ 14 ವರ್ಷ ವಯಸ್ಸಿನೊಳಗಿನವರ ವಿಭಾಗದ ಫೈನಲ್‌ನಲ್ಲಿ ಮೋಹಿತ್ 6-3, 6-0 ರಲ್ಲಿ ರೋಹಿತ್ ಮಧು ಅವರನ್ನು ಮಣಿಸಿ ಚಾಂಪಿಯನ್ ಆದರು. ಆ ಬಳಿಕ ಆದಿಲ್ ಕಲ್ಯಾಣ್‌ಪುರ್ ಜೊತೆ ಸೇರಿ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ 6-2, 6-1 ರಲ್ಲಿ ಎ. ತೌಸೀಫ್ ಖಾನ್ ಮತ್ತು ವಿ.ಆರ್. ಸಂಜಯ್ ವಿರುದ್ಧ ಜಯ ಸಾಧಿಸಿದರು.

12 ವರ್ಷ ವಯಸ್ಸಿನೊಳಗಿನವರ ಬಾಲಕರ ವಿಭಾಗದ ಫೈನಲ್‌ನಲ್ಲಿ ಬಿ. ಪ್ರಶಾಂತ್ 6-0, 6-0 ರಲ್ಲಿ ಅಭಿಮನ್ಯು ರೆಡ್ಡಿ ಅವರನ್ನು ಮಣಿಸಿ ಚಾಂಪಿಯನ್ ಆದರು.

ನೂಪುರ್‌ಗೆ ಪ್ರಶಸ್ತಿ: ನೂಪುರ್ ಉಮಾಶಂಕರ್ ಬಾಲಕಿಯರ 14 ವರ್ಷ ವಯಸ್ಸಿನೊಳಗಿನವರ ವಿಭಾಗದ ಫೈನಲ್‌ನಲ್ಲಿ 6-1, 6-2 ರಲ್ಲಿ ಸೋಹಾ ಖಾನ್ ಅವರನ್ನು ಮಣಿಸಿದರು. 12 ವರ್ಷ ವಯಸ್ಸಿನೊಳಗಿನವರ ವಿಭಾಗದ ಫೈನಲ್‌ನಲ್ಲಿ ಶಿವಾನಿ ಮಂಜಣ್ಣ 6-4, 6-2 ರಲ್ಲಿ ವಾಸವಿ ವಿರುದ್ಧ ಜಯ ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.