ಬೆಂಗಳೂರು: ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ 1999ರಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದ ಒಂದೇ ಇನಿಂಗ್ಸ್ನಲ್ಲಿ 10 ವಿಕೆಟ್ ಪಡೆದು ವಿಶ್ವದಾಖಲೆ ಸರಗಟ್ಟಿದ ನೆನಪನ್ನು ಹಸಿರಾಗಿಸಿಕೊಳ್ಳುವ ಉದ್ದೇಶದಿಂದ ಅನಿಲ್ ಕುಂಬ್ಳೆ ಸ್ಥಾಪಿಸಿದ ಕಂಪೆನಿ `ಟೆನ್ವಿಕ್~.

`ಖಚಿತ ಗೆಲುವು~ ಎಂಬ ದ್ಯೇಯ ವಾಕ್ಯದೊಂದಿಗೆ ಆರಂಭವಾಗಿರುವ ಈ ವೃತ್ತಿಪರ ಕ್ರೀಡಾ ಸಲಹಾ ಸಂಸ್ಥೆ ಪ್ರಮುಖ ಉದ್ದೇಶ ಮಕ್ಕಳಲ್ಲಿ ಕ್ರೀಡೆ ಬಗ್ಗೆ ಆಸಕ್ತಿ ಮೂಡಿಸುವುದು ಹಾಗೂ ಕ್ರೀಡೆಗಳ ಮೂಲಕ ಕೌಶಲ ವೃದ್ಧಿಸುವುದು. `ಟು ಎನ್ಶೂರ್ ವಿಕ್ಟರಿ~ ಟೆನ್ವಿಕ್ನ ಇನ್ನೊಂದು ವಿಸ್ತೃತ ವಿವರಣೆ. ಈಗ ಈ ಸಂಸ್ಥೆ ದೇಶದಾದ್ಯಂತ ಸೇವಾ ವಿಸ್ತರಣೆಗೆ ಯೋಜನೆ ರೂಪಿಸಿದೆ.

`ತಂತ್ರಜ್ಞಾನದ ನೆರವಿನೊಂದಿಗೆ, ಗ್ರಾಮೀಣ ಮಟ್ಟದಿಂದ ನಗರ ಹಂತದವರೆಗೆ, ಶಾಲಾ ಮಕ್ಕಳಿಗೆ ವಿಶ್ವದರ್ಜೆಗುಣಮಟ್ಟದ ಕ್ರೀಡಾ ತರಬೇತಿ ನೀಡಲಾಗುವುದು. 2012ರ ಅಂತ್ಯದ ವೇಳೆಗೆ 80ಕ್ಕೂ ಹೆಚ್ಚು ಶಾಲೆಗಳ ಜತೆ ಟೆನ್ವಿಕ್ ಒಪ್ಪಂದ ಮಾಡಿಕೊಳ್ಳಲಿದೆ~ ಎನ್ನುತ್ತಾರೆ ಕುಂಬ್ಳೆ.

ಈ ಸಂಸ್ಥೆ ಮಕ್ಕಳಿಗೆ ತಜ್ಞ ಕೋಚ್ಗಳಿಂದ ತರಬೇತಿ ನೀಡುತ್ತಿದೆ. ಖ್ಯಾತ ಕ್ರೀಡಾಪಟುಗಳು, ನಿರ್ವಹಣಾ ವಿಜ್ಞಾನ ಪರಿಣತರಿಂದ ಮಾರ್ಗದರ್ಶನ ನೀಡುತ್ತಿದೆ. ಅದಕ್ಕೆ ತಂತ್ರಜ್ಞಾನದ ಸಹಾಯ ಪಡೆಯಲಾಗುತ್ತಿದೆ. ಮಕ್ಕಳು ತಮಗಿಷ್ಟವಾದ ಕ್ರೀಡೆಗಳನ್ನು ಆಯ್ಕೆ ಮಾಡಿಕೊಳ್ಳಲು ಇಲ್ಲಿ ಅವಕಾಶವಿದೆ. ಸದ್ಯ ಕ್ರಿಕೆಟ್, ಬ್ಯಾಡ್ಮಿಂಟನ್, ಚೆಸ್ ಹಾಗೂ ಟೇಬಲ್ ಟೆನಿಸ್ ಕ್ರೀಡೆಗಳನ್ನು ಈ ಯೋಜನೆ ಒಳಗೊಂಡಿದೆ.

`ದೇಶದಲ್ಲಿ ವೃತ್ತಿಪರ ಕ್ರೀಡಾ ತರಬೇತಿಯ ಅಗತ್ಯ ಮನಗಂಡು ಟೆನ್ವಿಕ್ ವೈಜ್ಞಾನಿಕ ಪಠ್ಯಕ್ರಮ ರೂಪಿಸಿದೆ. ಕೌಶಲ ವೃದ್ಧಿ, ನಾಯಕತ್ವ ತರಬೇತಿ, ವ್ಯಕ್ತಿತ್ವ ವಿಕಸನದ ಜತೆಗೆ ಉತ್ತಮ ಕ್ರೀಡಾ ಶಿಸ್ತು ಮತ್ತು ಸಂಸ್ಕೃತಿ ಬೆಳೆಸುವುದೂ ಸಂಸ್ಥೆಯ ಆಶಯ. ಈ ನಿಟ್ಟಿನಲ್ಲಿ ಖಾಸಗಿ ಪಾಲುದಾರಿಕೆಯಡಿ ಹೊರಾಂಗಣ ತರಬೇತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುವುದು~ ಎಂದು ಟೆನ್ವಿಕ್ನ ಸಹ ಸ್ಥಾಪಕ ಹಾಗೂ ಮಾಜಿ ಟೇಬಲ್ ಟೆನಿಸ್ ಅಂತರರಾಷ್ಟ್ರೀಯ ಆಟಗಾರ ವಸಂತ್ ಭಾರದ್ವಾಜ್ ಹೇಳುತ್ತಾರೆ.

ಕುಂಬ್ಳೆ ಸಹೋದರ ದಿನೇಶ್ ಕುಂಬ್ಳೆ ಕೂಡ ಇದರ ಸಹ ಸ್ಥಾಪಕ. ಟೆನ್ವಿಕ್ ಸ್ಥಾಪನೆಗೆ ಪ್ರೇರಣೆಯಾಗಿದ್ದು ವಸಂತ್ ನೀಡಿದ ಸಲಹೆ. ಅವರು 1987ರಲ್ಲಿ ನಡೆದ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡ್ದ್ದಿದ ಆಟಗಾರ.

ಟೆನ್ವಿಕ್ ಆರಂಭವಾಗಿ ಒಂಬತ್ತು ತಿಂಗಳು ಕಳೆದಿವೆ. ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಗುಡಗಾಂವ್ನ ಎಂಟು ಶಾಲೆಗಳ 300 ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ. 150 ಶಾಲೆಗಳನ್ನು ತಲುಪುವುದು ಇದರ ಗುರಿ. ಅಷ್ಟೇ ಅಲ್ಲದೆ, ವಿವಿಧ ಕಂಪೆನಿಗಳು, ಕಾರ್ಪೊರೇಟ್ ಸಂಸ್ಥೆಗಳು, ಆಡಳಿತ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಕ್ರೀಡಾಧಾರಿತ ಶಿಕ್ಷಣ ನೀಡುತ್ತಿದೆ. ಜಾಹೀರಾತು ಹಾಗೂ ಮಾರ್ಕೆಟಿಂಗ್ ಸಂಸ್ಥೆಗಳಿಗೆ ಸಲಹೆ ನೀಡುತ್ತಿದೆ. ವಿ.ವಿ.ಎಸ್.ಲಕ್ಷ್ಮಣ್ ಸೇರಿದಂತೆ ವಿವಿಧ ಕ್ಷೇತ್ರದ ಪ್ರಮುಖ ಕ್ರೀಡಾಪಟುಗಳು ಈ ಕಂಪೆನಿಯ ತಜ್ಞರ ಸಮಿತಿಯಲ್ಲಿದ್ದಾರೆ.

ಐಐಎಂ-ಬಿ ಜೊತೆ ಒಪ್ಪಂದ: ಬೆಂಗಳೂರಿನ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ (ಐಐಎಂ-ಬಿ) ಹಿರಿಯ ಮ್ಯಾನೇಜರ್ಗಳಿಗೆ ಕ್ರೀಡಾಧಾರಿತ ಶಿಕ್ಷಣ ನೀಡಲು ಮುಂದಾಗಿದೆ. ಅದಕ್ಕಾತಿ ಖ್ಯಾತ ಕ್ರೀಡಾಪಟುಗಳನ್ನು ಆಹ್ವಾನಿಸಿ ಶಿಕ್ಷಣ ನೀಡುತ್ತಿದೆ. ಇದಕ್ಕೆ ಕ್ರೀಡಾ ಕಂಪೆನಿ ಟೆನ್ವಿಕ್ ಸಹಾಯ ನೀಡುತ್ತಿರುವುದು ವಿಶೇಷ. ವ್ಯವಹಾರದ ವೇಳೆ ಉದ್ಭವಿಸುವ ಸವಾಲುಗಳನ್ನು ಎದುರಿಸಲು ಇದು ನೆರವಾಗಬಹುದು ಎಂಬುದು ಐಐಎಂ-ಬಿನ ಉದ್ದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.