ಮಂಗಳವಾರ, ಜನವರಿ 21, 2020
29 °C

ಟೇಬಲ್ ಟೆನಿಸ್: ಎರಡನೇ ಸುತ್ತಿಗೆ ನೇಹಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ (ಪಿಟಿಐ): ಒಲಿಂಪಿಯನ್ ನೇಹಾ ಅಗರ್‌ವಾಲ್ ಇಲ್ಲಿ ನಡೆಯುತ್ತಿರುವ 73ನೇ ರಾಷ್ಟ್ರೀಯ ಸೀನಿಯರ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಆದರೆ ಪಶ್ಚಿಮ ಬಂಗಾಳದ ಮೀನು ಬಾಸಕ್ ಆಘಾತ ಅನುಭವಿಸಿದ್ದಾರೆ. ನೇಹಾ ಶುಕ್ರವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 11-6, 11-7, 1-11, 10-12, 11-7ರಲ್ಲಿ ತಮಿಳುನಾಡಿನ ಎನ್.ವಿದ್ಯಾ ಅವರನ್ನು ಸೋಲಿಸಿದರು. ಮೊದಲ ಎರಡು ಗೇಮ್ ಗೆದ್ದ ನೇಹಾ ಅವರಿಗೆ ವಿದ್ಯಾ ಒಮ್ಮೆಲೇ ತಿರುಗೇಟು ನೀಡಿದರು. ಇದರಿಂದ ಪಂದ್ಯ ಕುತೂಹಲದ ತಿರುವು ಪಡೆದುಕೊಂಡಿತ್ತು. ಆದರೆ ಬಳಿಕ ತಮ್ಮ ಅನುಭವದ ಆಟದ ಮೂಲಕ ನೇಹಾ ಮೇಲುಗೈ ಸಾಧಿಸಿದರು.ಕುತೂಹಲಕ್ಕೆ ಕಾರಣವಾಗಿದ್ದ ಇನ್ನೊಂದು ಪಂದ್ಯದಲ್ಲಿ ಮೀನು ಬಾಸಕ್ 5-11, 3-11, 11-4, 7-11, 11-8, 8-11ರಲ್ಲಿ ಮಧ್ಯಪ್ರದೇಶದ ಪೂಜಾ ಶರ್ಮ ಎದುರು ಆಘಾತ ಅನುಭವಿಸಿದರು. ಈ ಟೂರ್ನಿಯಲ್ಲಿ 16ನೇ ಶ್ರೇಯಾಂಕ ಪಡೆದಿದ್ದ ಬಾಸಕ್ ಪಂದ್ಯದ ಮೇಲೆ ಹಿಡಿತ ಸಾಧಿಸಲು ಪೂಜಾ ಅವಕಾಶ ನೀಡಲಿಲ್ಲ.  ಪಿಎಸ್‌ಪಿಬಿಯ ಕಸ್ತೂರಿ ಚಕ್ರವರ್ತಿ 11-7, 11-4, 2-11, 8-11, 13-11, 8-11, 11-8ರಲ್ಲಿ ಮಹಾರಾಷ್ಟ್ರದ ಸ್ನೇಹೊರಾ ಡಿಜೋಸಾ ಅವರನ್ನು ಪರಾಭವಗೊಳಿಸಿದರು. ಇನ್ನೊಂದು ಪಂದ್ಯದಲ್ಲಿ ದೆಹಲಿಯ ಅನುಭವಿ ಆಟಗಾರ್ತಿ ಇಶಾ ಮೋಂಗಾ 11-13, 11-7, 11-8, 11-9, 9-11, 10-11, 11-8ರಲ್ಲಿ ಎಎಐನ ಕರ್ಣಮ್ ಸ್ಪೂರ್ತಿ ಅವರನ್ನು ಮಣಿಸಿದರು. ಮೊದಲ ಗೇಮ್‌ನಲ್ಲಿ ಸೋಲು ಕಂಡ ಇಶಾ ಬಳಿಕ ಸೊಗಸಾದ ಆಟದ ಮೂಲಕ ಗಮನ ಸೆಳೆದರು.

 

ಪ್ರತಿಕ್ರಿಯಿಸಿ (+)