ಶುಕ್ರವಾರ, ಮೇ 7, 2021
26 °C

ಟೇಬಲ್ ಟೆನಿಸ್: ನವನೀತ್, ಐಶ್ವರ್ಯಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೇಬಲ್ ಟೆನಿಸ್: ನವನೀತ್, ಐಶ್ವರ್ಯಗೆ ಪ್ರಶಸ್ತಿ

ಬೆಂಗಳೂರು: ಎ.ಆರ್. ನವನೀತ್ ಮತ್ತು ಐಶ್ವರ್ಯ ಆರ್ ಬಿದರಿ ಇಲ್ಲಿ ನಡೆದ ಜಯನಗರ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದ ಟಿವಿಎಸ್ ವೇಗೊ ರಾಜ್ಯ ರ‌್ಯಾಂಕಿಂಗ್ ಟಿಟಿ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದರು.ಮಂಗಳವಾರ ನಡೆದ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ನವನೀತ್ 11-5, 11-7, 11-8, 11-9 ರಲ್ಲಿ ಆದಿತ್ಯ ಮಹಗಾಂವ್ಕರ್ ವಿರುದ್ಧ ಜಯ ಸಾಧಿಸಿದರು. ಮಹಿಳೆಯರ ಸಿಂಗಲ್ಸ್ ವಿಭಾಗದ    ಫೈನಲ್‌ನಲ್ಲಿ ಐಶ್ವರ್ಯ 9-11, 11-4, 11-6, 11-8, 11-6 ರಲ್ಲಿ ಭಾವನಾ ಎಚ್. ಅವರನ್ನು ಮಣಿಸಿದರು.ಸೆಮಿಫೈನಲ್ ಪಂದ್ಯದಲ್ಲಿ ಐಶ್ವರ್ಯ 7-11, 6-11, 11-8, 11-8, 11-9, 4-11, 11-4 ರಲ್ಲಿ ಆರ್. ರಕ್ಷಾ ಎದುರು ಪ್ರಯಾಸದ ಜಯ ಪಡೆದಿದ್ದರು.ಡಿ. ಸೂರಜ್ `ನಾನ್‌ಮೆಡಲಿಸ್ಟ್~ ವಿಭಾಗದ ಫೈನಲ್‌ನಲ್ಲಿ 11-8, 15-13, 6-11, 12-10 ರಲ್ಲಿ ಚೇತನ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡರು. ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ವೈ. ದಿನೇಶ್ ರಾವ್- ದಿನಕರ್ ನಾಯ್ಡು 12-10, 11-5, 11-4 ರಲ್ಲಿ ಆದಿತ್ಯ ಎಸ್. ರಾಜ್- ಜಿ. ಸುದೀಪ್ ಅವರನ್ನು ಸೋಲಿಸಿದರು.ತಂಡ ವಿಭಾಗದ ಫೈನಲ್‌ನಲ್ಲಿ ಸೌತ್ ವೆಸ್ಟರ್ನ್ ರೈಲ್ವೆ `ಎ~ ತಂಡ 3-1 ರಲ್ಲಿ ಹೊರೈಜನ್ ವಿರುದ್ಧ ಜಯ ಪಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.