`ಮದುವೆಯಾದ ಗಂಡಸನ್ನು ಏನೆಂದು ಕರೆಯುತ್ತಾರೆ? ಉತ್ತರ- ಏಕ್ ಥಾ ಟೈಗರ್~. ಹೀಗೊಂದು ಜೋಕ್ ಎಸ್ಎಂಎಸ್ಗಳಲ್ಲಿ ಹರಿದಾಡುತ್ತಿದೆ. ಸಲ್ಮಾನ್ ಖಾನ್ ಸಿನಿಮಾಗೂ ರಂಜಾನ್ಗೂ ಮೊದಲಿನಿಂದಲೂ ಆಗಿಬರುತ್ತದೆ.

ಆಟೊವಾಲಾಗಳ ಹಿಂಬದಿಯ ಚಿತ್ರವಾಗಿ ಸಲ್ಮಾನ್ ಜನಪ್ರಿಯ. ದೀರ್ಘ ಕಾಲದ ನಂತರ ತಮ್ಮ ಗೆಳತಿ (?) ಕತ್ರಿನಾ ಕೈಫ್ ಜೊತೆ ನಟಿಸಿದ್ದಾರೆಂಬ ಕಾರಣಕ್ಕೂ `ಏಕ್ ಥಾ ಟೈಗರ್~ ಚಿತ್ರ ಕುತೂಹಲ ಕೆರಳಿಸಿತ್ತು. ಸ್ವಾತಂತ್ರ್ಯ ದಿನಾಚರಣೆಯ ರಜಾ ದಿನವೇ ಅದನ್ನು ತೆರೆಗೆ ತರುವ ಮೂಲಕ ನಿರೀಕ್ಷಿತ ಓಪನಿಂಗ್ ಪಡೆದ ಚಿತ್ರವೆಂಬ ಅಗ್ಗಳಿಕೆ ಅದಕ್ಕೆ ಸಂದಿದೆ.

ಕಾಬೂಲ್ ಎಕ್ಸ್ಪ್ರೆಸ್ (2006), ನ್ಯೂಯಾರ್ಕ್ (2009) ಚಿತ್ರಗಳನ್ನು ನಿರ್ದೇಶಿಸಿದ್ದ ಕಬೀರ್ ಖಾನ್ ಆಕ್ಷನ್-ಕಟ್ ಹೇಳಿರುವ `ಏಕ್ ಥಾ ಟೈಗರ್~ನಲ್ಲಿ ಸಲ್ಮಾನ್ ಪಾತ್ರದ ಹೆಸರೇ ಟೈಗರ್. ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ನಲ್ಲಿ (ಆರ್ಎಡಬ್ಲ್ಯು-ರಾ) ಕೆಲಸ ಮಾಡುವ ನಾಯಕನ ಕಥನವನ್ನು ಚಿತ್ರಕ್ಕೆ ಅಡಕಮಾಡಿದ್ದಾರೆ ಕಬೀರ್ ಖಾನ್.

ನಿರ್ದೇಶಕರು ಚಿತ್ರಕಥೆ ರೂಪಿಸಲು ಮೊದಲು ಪ್ರಾರಂಭಿಸಿದ್ದು 2010ರಲ್ಲಿ. ವರ್ಷಾಂತ್ಯದ ಹೊತ್ತಿಗೆ ಚಿತ್ರೀಕರಣ ಶುರುವಾಯಿತು. ಕಳೆದ ವರ್ಷ ಗಿರೀಶ್ ಕಾರ್ನಾಡ್ ಕೂಡ ಚಿತ್ರೀಕರಣಕ್ಕೆಂದು ಗ್ರೀಸ್ಗೆ ಹೋಗಿಬಂದಿದ್ದರು.

ಬಾಲಿವುಡ್ ಮಂದಿಯ ಐಷಾರಾಮಿ ಬದುಕು, ಅವರು ಕಲಾವಿದರಿಗೆ ಮಾಡಿಕೊಡುವ ಅದ್ಭುತವಾದ ವ್ಯವಸ್ಥೆ, ಚಿತ್ರೀಕರಣಕ್ಕೆ ತಡವಾಗಿ ಬರುವುದೇ ತಮ್ಮ ಅರ್ಹತೆ ಎಂದು ಭಾವಿಸಿದ ನಟರ ವರ್ತನೆ, ಸಲ್ಮಾನ್ ಖಾನ್ ತರಹದ ನಾಯಕರನ್ನು ಕ್ಲೋಸಪ್ ಶಾಟ್ನಲ್ಲಿ ತೋರಿಸುವ ಉಮೇದು ಎಲ್ಲವುಗಳ ಕುರಿತು ಗಿರೀಶ್ ಕಾರ್ನಾಡರು ಆಗ ಹೇಳಿಕೊಂಡಿದ್ದರು.

`ಸಲ್ಮಾನ್ ಖಾನ್ ತಮ್ಮ ಕಡೆದಿಟ್ಟಂಥ ದೇಹ ತೋರಿಸುತ್ತಾ ನಿಂತುಬಿಟ್ಟರಾಯಿತು; ನಟಿಸುವುದೇ ಬೇಡ~ ಎಂಬುದು ಅವರು ಆಗ ಮಾಡಿದ್ದ ವಿಮರ್ಶೆ. ಅದು ಸತ್ಯವೂ ಹೌದು. ಯಾಕೆಂದರೆ, ಸಲ್ಮಾನ್ ಅಭಿಮಾನಿ ಬಳಗದ ಸಿಂಹಪಾಲಿನ ಜನರಿಗೆ ಅವರ ದೇಹವೇ ಮೆಚ್ಚು.

ಸಲ್ಮಾನ್ ಖಾನ್ ಮಾರುಕಟ್ಟೆಯ ಲೆಕ್ಕಾಚಾರ ಇಟ್ಟುಕೊಂಡೇ ಯಶ್ರಾಜ್ ಫಿಲ್ಮ್ಸ್ ಬ್ಯಾನರ್ ಇದೇ ಮೊದಲ ಬಾರಿಗೆ ಅವರನ್ನು ಇಟ್ಟುಕೊಂಡು ಸಿನಿಮಾ ಮಾಡಿದೆ. ನಿರ್ಮಾಪಕ ಆದಿತ್ಯ ಚೋಪ್ರಾ 75 ಕೋಟಿ ರೂಪಾಯಿ ಬಂಡವಾಳ ಚೆಲ್ಲಿದ್ದಾರೆ. ಒಂದೆರಡು ವಾರದಲ್ಲೇ ದುಪ್ಪಟ್ಟು ಲಾಭ ಮಾಡುವ ಅವರ ಉಮೇದಿಗೆ 3000 ಪರದೆಗಳ ಮೇಲೆ ಸಿನಿಮಾ ಬಿಡುಗಡೆಯಾಗಿರುವುದೇ ಸಾಕ್ಷಿ.

ಸೊಹೇಲ್ ಸೇನ್ ಸಂಗೀತ ಸಂಯೋಜನೆ, ಸಾಜಿದ್-ವಾಜಿದ್ ಅತಿಥಿ ಸಂಗೀತ ಸಂಯೋಜನೆ ಎಂಬುದು ಚಿತ್ರದ ಹಾಡುಗಳ ಮಟ್ಟಿಗೆ ಅಪರೂಪದ ಬೆಳವಣಿಗೆ. ಸಂಗೀತ ನಿರ್ದೇಶಕರೊಬ್ಬರು ಇನ್ನಿಬ್ಬರು ಸಂಗೀತಗಾರರನ್ನು ಅತಿಥಿಗಳೆಂದು ಕರೆಸಿಕೊಂಡು ಮಟ್ಟುಗಳನ್ನು ಕಟ್ಟುವುದು ಅಪರೂಪವೇ ಹೌದು.

ಈ ಚಿತ್ರದ ಚಿತ್ರೀಕರಣದ ಮಧ್ಯೆಯೇ ಸಲ್ಮಾನ್ ತಮ್ಮ ಭುಜದ ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು. ಚಿತ್ರದ ಸಾಹಸ ದೃಶ್ಯವೊಂದರಲ್ಲಿ ಅಪರೂಪದ ರೀತಿಯಲ್ಲಿ ಸಲ್ಮಾನ್ ಓಡಬೇಕಿದ್ದು ಅದಕ್ಕೆ `ಡರ್ಟಿ ರನ್ನಿಂಗ್~ ಎನ್ನಲಾಗುತ್ತದೆ.

ಹಾಗೆ ಓಡಲು 30 ದಿನಗಳ ತರಬೇತಿಯನ್ನು ಸಲ್ಮಾನ್ ಪಡೆದುಕೊಂಡಿರುವುದು ಇನ್ನೊಂದು ವಿಶೇಷ. `ಯುವರಾಜ್~ ಚಿತ್ರದಲ್ಲಿ ಸಲ್ಮಾನ್-ಕತ್ರಿನಾ ಜೋಡಿ ಅಷ್ಟೇನೂ ಗಮನ ಸೆಳೆದಿರಲಿಲ್ಲ. ಈ ಚಿತ್ರ ಆ ಕೊರತೆಯನ್ನು ತುಂಬಿಕೊಡುತ್ತಿದೆ ಎಂಬುದು ನಿರ್ದೇಶಕರ ಮಾತು.

ಚಿತ್ರಕ್ಕೆ ಮೊದಲು ಸಂಗೀತ ನಿರ್ದೇಶಕರಾಗಿ ಪ್ರೀತಂ ಗೊತ್ತಾಗಿದ್ದರು. ಆಮೇಲೆ ಡೇಟ್ಗಳು ಹೊಂದಾಣಿಕೆಯಾಗದ ಕಾರಣ ಅವರೇ ಹಿಂದೆ ಸರಿದರು. ಯಶ್ರಾಜ್ ಪ್ರೊಡಕ್ಷನ್ಸ್ನ `ಧೂಮ್ 3~ ಚಿತ್ರದ ಸಂಗೀತ ಸಂಯೋಜನೆಯ ಹೊಣೆಯನ್ನು ಮಾತ್ರ ಅವರು ಒಪ್ಪಿಕೊಂಡರು.

ಸಿನಿಮಾ ಬಿಡುಗಡೆಗೆ ಮೊದಲೇ ಪ್ರಚಾರಕ್ಕೆಂದು ಸರಣಿ ಕಾಮಿಕ್ ಪುಸ್ತಕಗಳು ಮಾರುಕಟ್ಟೆಗೆ ಬಂದಿವೆ. `ಯೋಮಿಕ್ಸ್~ ಹೆಸರಿನ ಈ ಪುಸ್ತಕಗಳಿಂದ ಸಿನಿಮಾಗೆ ಎಷ್ಟು ಉಪಯೋಗವಾಯಿತೋ ಗೊತ್ತಿಲ್ಲ, ಆದರೆ ಬುಕ್ಕಿಂಗ್ ಶುರುವಾದಾಗ ಮಾತ್ರ ಮೊದಲ ದಿನದ ಶೇ 60ರಷ್ಟು ಟಿಕೆಟ್ಗಳನ್ನು ಅಭಿಮಾನಿಗಳು ಕಾಯ್ದಿರಿಸಿದರು.

ನಲವತ್ತಾರು ವಯಸ್ಸಿನ ಅವಿವಾಹಿತ ಸಲ್ಮಾನ್ ಖಾನ್, ದೇಹವನ್ನು ಲಾಲಿತ್ಯದಿಂದ ಬಾಗಿಸಬಲ್ಲ ಕತ್ರಿನಾ ಕೈಫ್, ಪ್ರತಿಭಾವಂತ ರಣವೀರ್ ಶೋರೆ, ಶೆಣೈ ಪಾತ್ರಧಾರಿ ಗಿರೀಶ್ ಕಾರ್ನಾಡ್ ಎಲ್ಲರೂ ಇರುವ `ಏಕ್ ಥಾ ಟೈಗರ್~ ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿಗೆ ಗೆಲ್ಲುತ್ತದೆ ಎಂಬುದು ಈಗ ಉಳಿದಿರುವ ಕುತೂಹಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.