ಗುರುವಾರ , ಮಾರ್ಚ್ 4, 2021
25 °C

ಟೋಟಲ್ ಸ್ಟೋರ್ಸ್‌ನಲ್ಲಿ ರಿಯಾಯಿತಿ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಟಲ್ ಸ್ಟೋರ್ಸ್‌ನಲ್ಲಿ ರಿಯಾಯಿತಿ ಮಾರಾಟ

ನಿಮ್ಮ ಮನೆಯನ್ನು ಇನ್ನಷ್ಟು ಚೆಂದಗೊಳಿಸಬೇಕೆಂಬ ಹಂಬಲವಿದ್ದರೆ, ಅದಕ್ಕೆ ಉತ್ತಮ ಅವಕಾಶವನ್ನು ಮುಂದಿಟ್ಟಿದೆ ಟೋಟಲ್ ಮಳಿಗೆ. ಗೃಹಾಲಂಕಾರಿಕ ಪೀಠೋಪಕರಣಗಳ ಪೂರಕ ಉತ್ಪನ್ನಗಳ ಮಾರಾಟದ ಉತ್ಸವ ಈಗಾಗಲೇ ಆರಂಭಗೊಂಡಿದ್ದು, ಗ್ರಾಹಕರಿಗೆ ಆಯ್ಕೆಗಳು ಅತಿ ಹೆಚ್ಚು ಸಂಖ್ಯೆಯಲ್ಲಿರಲಿವೆ. ಟೋಟಲ್ ಸೂಪರ್‌ಸ್ಟೋರ್ಸ್‌ ಹೈಪರ್‌ಮಾರ್ಕೆಟ್‌ನಲ್ಲಿ ಇಂತಹ ಉತ್ಪನ್ನಗಳು ಲಭ್ಯವಿದ್ದು, ಗುಣಮಟ್ಟ, ಸುಂದರ ಬಣ್ಣಗಳು, ಚಿತ್ತಾಕರ್ಷಕ ಚಿತ್ತಾರಗಳನ್ನು ಹೊಂದಿರುವ ಉತ್ಪನ್ನಗಳನ್ನು ಬಯಸುವವರಿಗೆ ಇದು ಸೂಕ್ತ ವೇದಿಕೆ ಒದಗಿಸಲಿದೆ. `ಬೆಡ್, ಬಾತ್ ಅಂಡ್ ಬಿಯಾಂಡ್~ ಎಂಬ ಶೀರ್ಷಿಕೆಯಲ್ಲಿ ಈ ಅತ್ಯುನ್ನತ ವಿನ್ಯಾಸಗಳ ಪೀಠೋಪಕರಣಗಳ ಪೂರಕ ಉತ್ಪನ್ನಗಳು ದೊರೆಯಲಿವೆ.

ಈ ಮಾರಾಟದಲ್ಲಿ ತಲೆದಿಂಬು, ಬೆಡ್‌ಶೀಟ್, ಬೆಡ್‌ಸ್ಪ್ರೆಡ್, ದಿಂಬಿನ ಕವರ್‌ಗಳು, ಹಾಸಿಗೆಗಳು, ಕುಶನ್, ದಿವಾನ್‌ಸೆಟ್, ಟವಲ್, ಕಾರ್ಪೆಟ್, ಡೋರ್‌ಮ್ಯಾಟ್ ಮುಂತಾದ ಹತ್ತು ಹಲವು ಆಯ್ಕೆಗಳು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಮನೆಯ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಪೀಠೋಪಕರಣಗಳೂ ಇಲ್ಲಿವೆ. ಜತೆಗೆ ಒಂದು ಕೊಂಡರೆ ಒಂದು ಉಚಿತ ರಿಯಾಯಿತಿ ಇದ್ದು, ಬಾಂಬೆ ಡೈಯಿಂಗ್, ಬಿರ್ಲಾ ಸೆಂಚುರಿ, ಪೋರ್ಟಿಕೋ, ಸ್ಪೇಸಸ್, ವೆಲಸ್ಪನ್, ರಿಕಾರ್ನ್, ಒಬೆಶನ್, ಕರ್ಲಾನ್, ಸ್ಲೀಪ್‌ವೆಲ್, ಪೆಪ್ಸ್ ಮೊದಲಾದ ಹಲವು ಪ್ರತಿಷ್ಠಿತ ಬ್ರಾಂಡ್‌ಗಳ ಮೇಲೆ 50 ಶೇಕಡಾ ರಿಯಾಯಿತಿಯಿದೆ. ಆಗಸ್ಟ್‌ವರೆಗೂ ಈ ಮಾರಾಟ ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.