ಭಾನುವಾರ, ಜನವರಿ 19, 2020
23 °C

ಟ್ರ್ಯಾಕ್ಟರ್ ತಡೆದ ಅಧಿಕಾರಿ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ತಾಲ್ಲೂಕಿನ ದೇವ­ರಾಯ ಸಮುದ್ರ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಳಿ ಮರಳು ಲಾರಿ ತಡೆಯಲು ಹೋದ ಗ್ರಾಮ ಲೆಕ್ಕಾ­ಧಿ­ಕಾರಿ ಮೇಲೆ ಹಲ್ಲೆ ನಡೆದ ಘಟನೆ ಗುರುವಾರ ಸಂಜೆ ನಡೆದಿದೆ.ತಾಲ್ಲೂಕಿನ ಹನುಮನಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ಮುನೇಶ್‌ ಕೋಲಾ­­ರದ ಕಡೆ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನ್ನು ತಡೆದಿದ್ದಾರೆ. ಈ ಸಂದರ್ಭ ರಾಧಾಕೃಷ್ಣ ಎಂಬಾತ ಹಲ್ಲೆ ನಡೆಸಿದ ಎಂದು ಅವರು ಆರೋಪಿಸಿ­ದ್ದಾರೆ.ಹಲ್ಲೆ ನಡೆದ ಬಗ್ಗೆ ಜಿಲ್ಲಾಧಿಕಾರಿಗೆ ಮುನೇಶ್‌ ವರದಿ ಮಾಡಿದ್ದಾರೆ. ಹೆಚ್ಚು­ವರಿ ಜಿಲ್ಲಾಧಿಕಾರಿ ನವೀನ್‌ ಕುಮಾರ್‌, ತಹಶೀಲ್ದಾರ್‌ ಡಿ.ವಿ.ರಾಮ­ಮೂರ್ತಿ ಲ್ಯಾಂಕೋ ಮರಳು ತಪಾ­ಸಣಾ ಕೇಂದ್ರ­ದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ­ದ­ಲ್ಲಿನ ದೃಶ್ಯಾವಳಿ ವೀಕ್ಷಿಸಿ­ದ್ದಾರೆ. ಪೊಲೀ­ಸರು ಪ್ರಕರಣ ದಾಖಲಿಸಿ­ಕೊಂಡಿದ್ದಾರೆ.ರಕ್ಷಣೆಗೆ ಮನವಿ: ಗ್ರಾಮ ಲೆಕ್ಕಾಧಿಕಾರಿ ಸಿ.ವಿ.ಮುನೇಶ್‌ ಮೇಲೆ ಹಲ್ಲೆ ನಡೆಸಿ­ರುವ ಆರೋಪಿಗಳನ್ನು ಬಂಧಿಸು­ವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಸಂಘ, ತಾಲ್ಲೂಕು ಗ್ರಾಮ­ಲೆಕ್ಕಾಧಿಕಾರಿಗಳ ಸಂಘದ ಪದಾಧಿ­ಕಾರಿಗಳು ಶುಕ್ರವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ  ವಿಜಯ­ಕುಮಾರ್, ಖಜಾಂಚಿ ಸುಬ್ರ­ಮಣ್ಯಂ, ಕಾರ್ಯದರ್ಶಿ ಬಲರಾಮೇ­ಗೌಡ, ಅರ­ವಿಂದ್, ­ಸುಧಾ­ಕರ್‌ ಇತರರಿದ್ದರು.

ಪ್ರತಿಕ್ರಿಯಿಸಿ (+)