ಸೋಮವಾರ, ಜನವರಿ 27, 2020
24 °C

ಟ್ವಿಟ್ಟರ್ ಖಾತೆ ತೆರೆದ ಮನಮೋಹನ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವ ದೆಹಲಿ (ಐಎಎನ್ಎಸ್): ಭಾರತದ ಯುವ ಶಕ್ತಿಯನ್ನು ಸೆಳೆಯಲು ಹಾಗೂ ತಮ್ಮ ಕಾರ್ಯಾಲಯದಲ್ಲಿ ನಡೆಯುತ್ತಿರುವ ಕೆಲಸ ಕಾರ್ಯಗಳ ವಿಚಾರವನ್ನು 140 ಶಬ್ದಗಳಲ್ಲಿ ಹಂಚಿಕೊಳ್ಳಲು ಪ್ರಧಾನಿ ಮನಮೋಹನ ಸಿಂಗ್ ಸಜ್ಜಾಗಿದ್ದಾರೆ. ಇದಕ್ಕಾಗಿ ಅವರೊಂದು ಟ್ವಿಟ್ಟರ್ ಖಾತೆ ತೆರೆದಿದ್ದಾರೆ.

Twitter@PMOIndia ಎಂಬ ಖಾತೆ ಆರಂಭವಾದ ಒಂದು ಗಂಟೆಯಲ್ಲೇ ಪ್ರಧಾನಿ ಮೂರು ಟ್ವೀಟ್ ಗಳನ್ನು ಮಾಡಿದ್ದಾರೆ. ಜತೆಗೆ ಹತ್ತು ಸಾವಿರ ~ಅಭಿಮಾನಿ~ಗಳನ್ನು ಅವರು ಸಂಪಾದಿಸಿದ್ದಾರೆ.

ಟ್ವಿಟ್ಟರ್ ಖಾತೆ ಹೊಂದಿರುವ ವಿಶ್ವದ ನಾಯಕರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮೊದಲಿಗರು. ಅವರು 2008ರ ಚುನಾವಣೆಗೆ ಮೈಕ್ರೋ ಬ್ಲಾಗ್ ನ ಸಹಾಯ ಪಡೆದಿದ್ದರು. Twitter@BarackObama ಖಾತೆ ಈಗ ಸುಮಾರು 1.2 ಕೋಟಿ ಅಭಿಮಾನಿಗಳನ್ನು ಹೊಂದಿದೆ. ಇವರಂತೆ ಆಸ್ಟ್ರೇಲಿಯಾ (Twitter@JuliaGillard), ನ್ಯೂಜಿಲೆಂಡ್ (Twitter@JohnKeyPM), ಇಸ್ರೇಲ್ (Twitter@Netanyahu), ಸಂಯುಕ್ತ ಅರಬ್ ರಾಷ್ಟ್ರ ಸೇರಿದಂತೆ ಇತರ ರಾಷ್ಟ್ರಗಳ ನಾಯಕರೂ ಸಹ ತಮ್ಮ ದೇಶದ ಪ್ರಜೆಗಳೊಂದಿಗೆ ವ್ಯವಹರಿಸಲು ಸಾಮಾಜಿಕ ತಾಣಗಳ ಮೊರೆ ಹೋಗಿದ್ದಾರೆ. ಇದೀಗ ಅವರ ಸಾಲಿಗೆ ಪ್ರಧಾನಿ ಮನಮೋಹನ ಸಿಂಗ್ ಸೇರ್ಪಡೆಗೊಂಡಿದ್ದಾರೆ.

ಪ್ರಧಾನಿ ಮನಮೋಹನ ಸಿಂಗ್ ಟ್ವೀಟ್ ಮಾಡಿದ ಮೊದಲ ಸಂದೇಶ ಶೌರ್ಯ ಪ್ರಶಸ್ತಿ ಕಾರ್ಯಕ್ರಮದ ಕುರಿತಾಗಿತ್ತು. ~ನಿಮ್ಮಿಂದ ಇಡೀ ರಾಷ್ಟ್ರವೇ ಹೆಮ್ಮೆ ಪಡುವಂತಾಗಿದೆ~ ಎಂಬ ಸಂದೇಶ ಹಾಗೂ ವಿಜೇತರೊಂದಿಗಿನ ತಮ್ಮ ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಸಧ್ಯ ಪ್ರಧಾನಿ ಅವರ ಟ್ವಿಟ್ಟರ್ ಖಾತೆಯನ್ನು ಅವರ ಮಾಧ್ಯಮ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಧಾನಿ ಅವರೇ ಸ್ವತಂತ್ರವಾಗಿ ಟ್ವೀಟ್ ಮಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಕಾರ್ಯಾಲಯ ತಿಳಿಸಿದೆ.

ಪ್ರತಿಕ್ರಿಯಿಸಿ (+)