ಮಂಗಳೂರು: ದೇಶದ ಪರಿಣಿತ ದ್ವಿಚಕ್ರ ವಾಹನ ಸವಾರರು, ನಗರದ ಎಕ್ಕೂರಿನ ಮೀನುಗಾರಿಕಾ ಕಾಲೇಜು ಮೈದಾನದಲ್ಲಿ ಇದೇ 17 ಮತ್ತು 18ರಂದು ನಡೆಯಲಿರುವ ಗಲ್ಫ್ ಡರ್ಟ್ ಟ್ರ್ಯಾಕ್ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ಷಿಪ್ನಲ್ಲಿ ನೈಪುಣ್ಯ ಪ್ರದರ್ಶಿಸಲಿದ್ದಾರೆ.

ಮುಂಬೈನ ಸ್ಪೋರ್ಟ್ಸ್ ಕ್ರಾಫ್ಟ್ ಸಂಸ್ಥೆ, ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಈ ಚಾಂಪಿಯನ್ಷಿಪ್ ನಡೆಸುತ್ತಿದೆ. ದೇಶದ ಎಫ್ಎಂಎಸ್ಸಿಐ ರ್ಯಾಲಿ ಚಾಂಪಿಯನ್ಷಿಪ್ನ ಐದು ಸುತ್ತುಗಳ ಪೈಕಿ ಮಂಗಳೂರು ಲೆಗ್ ಮೊದಲನೆಯದು. ದೇಶದ ವಿವಿಧೆಡೆ ನಡೆಯುವ ಐದು ಸುತ್ತುಗಳಲ್ಲಿ ಗಳಿಸುವ ಪಾಯಿಂಟ್ ಆಧರಿಸಿ ಚಾಂಪಿಯನ್ ಸವಾರರನ್ನು ಆಯ್ಕೆ ಮಾಡಲಾಗುತ್ತದೆ.

ಕಳೆದ ವರ್ಷ ಗಮನ ಸೆಳೆದಿದ್ದ ಬೆಂಗಳೂರು ಮೂಲದ ಟಿವಿಎಸ್ ರೈಡರ್ಗಳಾದ ಎಚ್.ಕೆ.ಪ್ರದೀಪ್, ಪ್ರದೀಪ್ ಜೋಶುವ ಮತ್ತು ಕೆ.ಪಿ.ಅರವಿಂದ ರ್ಯಾಲಿಯ ಪ್ರಮುಖ ಆಕರ್ಷಣೆಯಾದ `ವಿದೇಶಿ ಮೋಟಾರ್ ಸೈಕಲ್ಗಳಲ್ಲಿ ಭಾರತೀಯರು~ ವಿಭಾಗದ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ದೆಹಲಿ, ಮುಂಬೈ, ಪುಣೆ, ನಾಸಿಕ್, ಹೈದರಾಬಾದ್ ಮತ್ತು ಮಂಗಳೂರಿನಿಂದಲೂ ಸವಾಲು ಎದುರಾಗಬಹುದು.

ರ್ಯಾಲಿ ಚಾಂಪಿಯನ್ಷಿಪ್ನಲ್ಲಿ ಆರು ಕ್ಲಾಸ್ಗಳಿವೆ. ರೂ. 1.75 ಲಕ್ಷ ನಗದು ಬಹುಮಾನಕ್ಕಾಗಿ ಸವಾರರು ಸ್ಪರ್ಧಿಸಲಿದ್ದಾರೆ. ಈಗಾಗಲೇ 75 ಪ್ರವೇಶಗಳು ಬಂದಿವೆ. ಪ್ರವೇಶ ಸಲ್ಲಿಸಲು ಕೊನೆದಿನ ಇದೇ 13. ವಿವರ, ಪ್ರವೇಶಗಳಿಗಾಗಿ ಸ್ಪೋರ್ಟ್ಸ್ಕ್ರಾಫ್ಟ್ ಕಚೇರಿ, ಚಿತ್ರಕೂಟ್, 3ನೇ ಮಹಡಿ, ಸಿರಿ ರಸ್ತೆ, ಚೌಪಾಟಿ ಬಸ್ ನಿಲ್ದಾಣ, ಮುಂಬೈ- 400 006. ಪ್ರವೇಶಗಳನ್ನು ಇದೇ 13ಕ್ಕೆ ಮೊದಲು ತಲುಪಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.