ಹೊಸಪೇಟೆ: ಆಸ್ಪತ್ರೆಗೆ ಬಂದ ತಕ್ಷಣವೇ ನನ್ನ ಮಗಳನ್ನು ನೋಡಾಕ ಡಾಕ್ಟರ್ ಬಂದ್ಬಿಟ್ಟಿದ್ದರೇ ನನ್ನ ಮಗು ಉಳೀತಿತ್ತು, ಇವರೇ ಕೊಂದುಬಿಟ್ಟರು..! ಎಂದು ಮೃತ ಸಂಧ್ಯಾಳ ತಾಯಿ ಗೀತಾ ಅವರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾನು ನಮ್ಮ ಪಕ್ಕದ ಮನೆ ಪಕ್ಕದ ಮನೆಯವರನ್ನು ಕರೆದುಕೊಂಡು ರಾತ್ರಿ ಆಸ್ಪತ್ರೆಗೆ ಬಂದಿದ್ದೆವು. ಕರ್ತವ್ಯ ಮೇಲಿದ್ದ ವೈದ್ಯರು ತಕ್ಷಣ ಮಗುವನ್ನು ನೋಡಲು ಬರಲಿಲ್ಲ. ಕೂಗಿ, ಕೂಗಿ ವೈದ್ಯರನ್ನು ಕರೆದಾಗ ಬಹಳ ಹೊತ್ತಿನ ನಂತರ ಸ್ಥಳಕ್ಕೆ ಬಂದ ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು. ಇಲ್ಲಿಂದ ಖಾಸಗಿ ಆಸ್ಪತ್ರೆಗೆ ಮತ್ತೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಆಗ ಇದೇ ಡಾಕ್ಟ್ರು ಮಗು ಸತ್ತಿದೆ ಎಂದು ಹೇಳಿದರು ಎಂದು ರೋದಿಸುತ್ತ ಹೇಳಿದರು.

ಸುಹಾನ್ ತಂದೆ ತಾಯಿಗಳ ಧ್ವನಿ ಸಹ ತಮ್ಮ ಮಗುವನ್ನು ಕಳೆದುಕೊಂಡ ನೋವಿನಲ್ಲಿ ಸ್ತಬ್ದಗೊಂಡಿತ್ತು. ನಿನ್ನೆ ನಮ್ಮ ಅಂಗನವಾಡಿಯಲ್ಲಿ ನೀಡಿದ ಲಸಿಕೆಯಿಂದ ನಮ್ಮ ಮಕ್ಕಳಿಗೆ ಹೀಗೆ ಆಗಿದೆ ಎಂದು ತಮ್ಮ ದುಃಖ ತೋಡಿಕೊಂಡರು. ಇನ್ನು ಬಂಧು ಬಳಗದ ಹಾಗೂ ನಗರ ಅನೇಕ ಜನಪರ ಸಂಘಟನೆಗಳ ಆಕ್ರೋಶ ಮಾತ್ರ ಈ ಸಂದರ್ಭದಲ್ಲಿ ಮುಗಿಲ ಮುಟ್ಟತು. ಒಂದೂವರೆ ವರ್ಷದ 2 ಮಕ್ಕಳು ಮೃತಪಟ್ಟು, ಮತ್ತೊರಡು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ ಎನ್ನುವ ಸುದ್ದಿ ನಗರದಲ್ಲಿ ಹರಡುತ್ತಿದ್ದಂತೆಯೇ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು ಸ್ಲಂ ಜನಾಂದೋಲದ ಸಮಿತಿ, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಎಸ್ಎಫ್ಐ, ಡಿವೈಎಫ್ಐ, ಕಾಂಗ್ರೇಸ್ ಸೇರಿದಂತೆ ಸಿಪಿಐ(ಎಂ)ಪಕ್ಷಗಳ ಮುಖಂಡರು, ಕಾರ್ಯಕರ್ತರು ನಗರದ ನೂರು ಹಾಸಿಗೆ ಆಸ್ಪತ್ರೆಗೆ ಬಂದು ವೈದ್ಯರುಗಳ ನಿರ್ಲಕ್ಷ ಹಾಗೂ ಅರುಣೋದಯ ಸಂಸ್ಥೆಯ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಿದರು.

ತಪ್ಪಿತಸ್ಥರ ವಿರುದ್ಧ ಕ್ರಮ
ಹೊಸಪೇಟೆ: ಮಕ್ಕಳು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಗ್ರ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೊಸಪೇಟೆ ಉಪ ವಿಭಾಗಾಧಿಕಾರಿ ಡಾ.ಡಿ.ಆರ್.ಅಶೋಕ ತಿಳಿಸಿದರು.

ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬುಧವಾರ ಅಂಗನವಾಡಿಯಲ್ಲಿ ನೀಡಿದ ಚುಚ್ಚುಮದ್ದುಗಳನ್ನು ಸಂಗ್ರಹಿಸಲಾಗಿದೆ. ತನಿಖೆ ಮುಗಿಯುವವರೆಗೂ ಕಾರ್ಯನಿರ್ವಹಿಸದಂತೆ ಅರುಣೋದಯ ಸೇವಾ ಸಂಸ್ಥೆಗೆ ಕಾರ್ಯನಿರ್ವಹಿಸದಂತೆ ಸೂಚಿಸಲಾಗಿದೆ ಎಂದು ಹೇಳಿದರು. ಮಕ್ಕಳನ್ನು ಕರೆ ತಂದಾಗ ಕಾರ್ಯನಿರ್ವಹಿಸುತ್ತಿದ್ದ ವೈದ್ಯರಿಗೂ ನೋಟಿಸ್ ನೀಡಲಾಗುವುದು. ಎಲ್ಲ ಹಂತದ ವೈದ್ಯಕೀಯ ಪರೀಕ್ಷೆಗಳು ಮುಗಿದ ನಂತರ ಸಾವಿಗೆ ನಿಖರ ಕಾರಣ ಕಂಡುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದರು.

ಪರಿಹಾರ: ಘಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರ ಗಮನಕ್ಕೆ ತರಲಾಗಿದ್ದು ತಕ್ಷಣವೇ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಮೃತಪಟ್ಟ ಪ್ರತಿ ಮಗುವಿನ ಕುಟುಂಬಕ್ಕೂ 50 ಸಾವಿರ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಇದೇ 13ರಂದು ಸ್ಥಳೀಯ ಸಂಘ-ಸಂಸ್ಥೆಗಳು ಸೇರಿದಂತೆ ಎಲ್ಲ ಸರ್ಕಾರಿ ಅಧಿಕಾರಿಗಳೊಂದಿಗೆ ಎಂ.ಪಿ. ಪ್ರಕಾಶ ನಗರಸಭಾ ಕಲಾಮಂದಿರದಲ್ಲಿ ಸಭೆ ನಡೆಸುವ ಮೂಲಕ ನಗರದ ನೂರು ಹಾಸಿಗೆ ಆಸ್ಪತ್ರೆಯ ಸಮಗ್ರ ಸುಧಾರಣೆಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಮನವಿ: ವೈದ್ಯಕೀಯ ಸೇವೆಗಳ ಮೂಲ ಉದ್ದೇಶ ಚಿಕಿತ್ಸೆ ನೀಡುವುದಾಗಿದೆ. ನಿಖರ ಕಾರಣ ತಿಳಿಯದೆ ಸುಳ್ಳು ಸುದ್ದಿ ಮಾಡಿ ಘಟನೆಗೆ ಬಣ್ಣ ಬಳಿಯದಂತೆ ಹಾಗೂ ವದಂತಿಗಳಿಗೆ ಕಿವಿಗೊಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಭೇಟಿ: ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರುಗಳೊಂದಿಗೆ ಮಾತನಾಡಿದರು. ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತನೆ ಮಾಡುವಂತೆ ಸೂಚಿಸಿದರು. ನಂತರ ಅಂಗನವಾಡಿ ಕೇಂದ್ರ, ಮೃತ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.