ಮಂಗಳವಾರ, ಮಾರ್ಚ್ 9, 2021
18 °C

ಡಿಎಚ್‌ಎಫ್‌ಎಲ್‌ ‘ಎನ್‌ಸಿಡಿ’ ನೀಡಿಕೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿಎಚ್‌ಎಫ್‌ಎಲ್‌ ‘ಎನ್‌ಸಿಡಿ’ ನೀಡಿಕೆ ಇಂದು

ನವದೆಹಲಿ (ಪಿಟಿಐ): ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಲಿ. (ಡಿಎಚ್‌ಎಫ್‌ಎಲ್‌) ಕಂಪೆನಿಯ ಪರಿವರ್ತಿಸಲಾಗದ ಸಾಲಪತ್ರಗಳ ವಿತರಣೆ (ಎನ್‌ಸಿಡಿ) ಮೂಲಕ ₹4 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ.ಎನ್‌ಸಿಡಿ ಖರೀದಿ ಬುಧವಾರ  ಆರಂಭವಾಗಲಿದ್ದು, ಆ.16ಕ್ಕೆ ಅಂತ್ಯವಾಗಲಿದೆ ಎಂದು ಕಂಪೆನಿ ಸಿಇಒ ಹರ್ಷಿಲ್‌ ಮೆಹ್ತಾ  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಇಲ್ಲಿ ಸಂಗ್ರಹವಾಗುವ ಹಣವನ್ನು ಕಂಪೆನಿಯ ವ್ಯವಹಾರಕ್ಕೆ ಮತ್ತು ಹಳೆ ಸಾಲ ಮರುಪಾವತಿಗೆ ಬಳಸಿಕೊಳ್ಳಲಾಗುವುದು ಎಂದರು. ಕಂಪೆನಿಯು ₹1 ಸಾವಿರ ಮುಖಬೆಲೆಯ ಮರು ಖರೀದಿಸಬಹುದಾದ ಸುರಕ್ಷಿತ ‘ಎನ್‌ಸಿಡಿ’ಗಳನ್ನು ಬಿಡುಗಡೆ ಮಾಡಿದ್ದು, ಗರಿಷ್ಠ ₹ 4,000 ಕೋಟಿ ಸಂಗ್ರಹ ಮಿತಿ ವಿಧಿಸಲಾಗಿದೆ.ಕೇರ್ ಸಂಸ್ಥೆಯಿಂದ ‘ಕೇರ್‌ ಎಎಎ’, ಬ್ರಿಕ್‌ವರ್ಕ್‌ನಿಂದ ‘ಬಿಡಬ್ಲ್ಯುಆರ್‌ ಎಎಎ’  ರೇಟಿಂಗ್‌ ಪಡೆದಿದೆ. ಆಸ್ತಿ ಗುಣಮಟ್ಟ ಉತ್ತಮವಾಗಿದ್ದು, ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿದೆ.ಹೀಗಾಗಿ ಎನ್‌ಸಿಡಿಗಳು ಹೆಚ್ಚು ಸುರಕ್ಷಿತವಾಗಿದೆ ಎಂದು ಹೂಡಿಕೆದಾರರಿಗೆ ಮಾಹಿತಿ ನೀಡಿದರು. ಹೂಡಿಕೆದಾರರಿಗೆ 3, 5 ಮತ್ತು 10 ವರ್ಷದ ಅವಧಿಗೆ ಸಾಲಪತ್ರಗಳನ್ನು ಖರೀದಿಸುವ ಅವಕಾಶ ನೀಡಲಾಗಿದೆ. ವಾರ್ಷಿಕ ಗಳಿಕೆಯು ಶೇ 9.2 ರಿಂದ ಶೇ 9.3ರವರೆಗಿರಲಿದೆ.‘ಸಿಪಿಐ’ ಆಧಾರಿತ  ಸಾಲಪತ್ರ

ಇದೇ ಮೊದಲ ಬಾರಿಗೆ ಕಂಪೆನಿಯು ಚಿಲ್ಲರೆ ಹಣದುಬ್ಬರದ (ಸಿಪಿಐ) ಜತೆ ಸಂಪರ್ಕ ಹೊಂದಿರುವ ಸಾಲಪತ್ರಗಳ ಖರೀದಿಗೆ ಅವಕಾಶ ಕಲ್ಪಿಸಿದೆ. ‘ಸಿಪಿಐ’ ಸಂಪರ್ಕ ಹೊಂದಿರುವ ‘ಎನ್‌ಸಿಡಿ’ಗಳನ್ನು ಮೂರು ವರ್ಷಗಳ ಅವಧಿಗೆ ಮಾತ್ರವೇ ಖರೀದಿಸಬಹುದಾಗಿದೆ. ಚಿಲ್ಲರೆ ಹಣದುಬ್ಬರದಲ್ಲಿನ ಏರಿಳಿತಗಳಿಂದ ಆಗುವ ಭಾರಿ ನಷ್ಟ ಅಥವಾ ಗರಿಷ್ಠ ಲಾಭವನ್ನು ನಿಯಂತ್ರಿಸುವ ಉದ್ದೇಶದಿಂದ  ಕಂಪೆನಿಯು ನಿರ್ದಿಷ್ಟ ಬಡ್ಡಿದರ ನಿಗದಿಪಡಿಸಿದೆ. ಕನಿಷ್ಠ ಶೇ 8.90 ರಿಂದ ಗರಿಷ್ಠ 9.50ರವರೆಗೆ ಬಡ್ಡಿದರ ನಿಗದಿಮಾಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.