ಭಾನುವಾರ, ಮಾರ್ಚ್ 7, 2021
29 °C

ಡಿಜಿಟಲ್ ಪ್ರಜಾಪ್ರಭುತ್ವ ಭಾರತದ ವೈಶಿಷ್ಟ್ಯ: ಪ್ರಸಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿಜಿಟಲ್ ಪ್ರಜಾಪ್ರಭುತ್ವ ಭಾರತದ ವೈಶಿಷ್ಟ್ಯ: ಪ್ರಸಾದ್‌

ನವದೆಹಲಿ (ಪಿಟಿಐ):  ಸರ್ಕಾರ ಮತ್ತು ಜನರ  ನಡುವೆ   ‘myGov’  ಅಂತರ್ಜಾಲ ತಾಣವು ಡಿಜಿಟಲ್ ಇಂಡಿ ಯಾದ ಅತಿ ದೊಡ್ಡ ವೇದಿಕೆಯಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.ದೇಶದಲ್ಲಿ 103 ಕೋಟಿ ಮೊಬೈಲ್ ಬಳಕೆದಾರರು ಇರುವುದರಿಂದ  ‘myGov’  ವೆಬ್‌ಸೈಟ್ 10ರಿಂದ 15 ಕೋಟಿ ಜನರನ್ನು ತಲುಪಲಿದೆ ಎಂದು ‘myGov’  ವೆಬ್‌ಸೈಟ್ ಆರಂಭವಾಗಿ ಎರಡು ವರ್ಷ ಸಂದ ನಿಮಿತ್ತ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಹೇಳಿದರು. ದೇಶ ಬದಲಾಗುತ್ತಿದೆ, ಡಿಜಿಟಲ್ ಪ್ರಜಾಪ್ರಭುತ್ವವು ಭಾರತದ ವೈಶಿಷ್ಟ್ಯ ಹಾಗೂ ಶಕ್ತಿ ಎಂದು ಸಚಿವರು ಹೇಳಿದರು.ಈಗ 35 ಲಕ್ಷ ಜನರು ‘myGov’ ವೆಬ್‌ಸೈಟ್ ಸಂಪರ್ಕದಲ್ಲಿ ಇದ್ದಾರೆ. ಸ್ಮಾರ್ಟ್ ಸಿಟಿ, ಕೇಂದ್ರ ಬಜೆಟ್, ತಟಸ್ಥ ಅಂತರ್ಜಾಲ  ಮತ್ತು ಹೊಸ ಶಿಕ್ಷಣ ನೀತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸಕಾರಾತ್ಮಕ ಸಲಹೆ ಬಂದಿದೆ ಎಂದರು.ದೇಶದಲ್ಲಿ 103 ಕೋಟಿ ಮೊಬೈಲ್ ಫೋನ್ ಬಳಕೆದಾರರು ಇರುವುದರಿಂದ ‘myGov’ ವೆಬ್‌ಸೈನ್ನು 10ರಿಂದ 15 ಕೋಟಿ ನಾಗರಿಕರು ಸಂಪರ್ಕಿಸಬಹುದು ಎಂಬ ಅಂದಾಜಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದರು.ಭವಿಷ್ಯದಲ್ಲಿ ದೇಶದಲ್ಲಿ ಏನು ಸುಧಾರಣೆ ತರಬಹುದು ಎಂಬುದರ ಬಗ್ಗೆ ನಾಗರಿಕರು ಸಲಹೆ ನೀಡಬೇಕು. ಹಾಗಾಗಿ ಸರ್ಕಾರ ತಂತ್ರಜ್ಞಾನದ ಮೂಲಕ ಜನರ ಜತೆ ನೇರ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದೆ. ಮುಂಬರುವ ದಿನಗಳಲ್ಲಿ ಸಾಮಾನ್ಯ ಜನತೆಯ ಸಾಧನೆಗಳಿಗೂ ‘myGov’ ವೆಬ್‌ಸೈಟ್‌ನಲ್ಲಿ ಪ್ರಚಾರ ಸಿಗಲಿದೆ ಎಂದ ಅವರು, ತಂತ್ರಜ್ಞಾನ ಬಳಕೆಯಿಂದ ಭಾರತದ ಚಿತ್ರಣವನ್ನು ಬದಲಿಸಬೇಕು ಎಂಬುದು ಸರ್ಕಾರದ ಆಶಯ ಎಂದರು.ಹೊಸ ಪೋರ್ಟಲ್

ಪ್ರಧಾನಿ ಮೋದಿ ಅವರ ಪ್ರಥಮ ‘ಟೌನ್‌ಹಾಲ್’ ಕಾರ್ಯಕ್ರಮದಲ್ಲಿ PMO app ಪೋರ್ಟಲ್ ಆರಂಭಿಸಲಾಯಿತು. ಮೊಬೈಲ್ ಫೋನ್ ಬಳಕೆದಾರರು ನೇರವಾಗಿ ಪ್ರಧಾನಿ ಅವರನ್ನು ಈ ಮೂಲಕ ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.