ಮಂಗಳವಾರ, ಜೂನ್ 15, 2021
27 °C

ಡಿಸಿಸಿ ಬ್ಯಾಂಕ್‌ಗೆ ಅತ್ಯುತ್ತಮ ಸಾಧನೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಸ್ವಸಹಾಯ ಗುಂಪುಗಳ ರಚನೆ, ಸಾಲ ಜೋಡಣೆಯಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ನಬಾರ್ಡ್ ಈಚೆಗೆ `ಅತ್ಯುತ್ತಮ ಸಾಧನೆ~ ಪ್ರಶಸ್ತಿ ನೀಡಿ ಗೌರವಿಸಿತು.ಸ್ವಸಹಾಯ ಗುಂಪುಗಳ ವಿಭಾಗದಲ್ಲಿ ಬ್ಯಾಂಕ್ ಸಮಗ್ರ ಸಾಧನೆ, ಶಾಖೆಗಳ ವಿಭಾಗದಲ್ಲಿ ರಾಜ್ಯದಲ್ಲಿಯೇ ಅತಿಹೆಚ್ಚು ಪ್ರಗತಿ ಸಾಧಿಸಿದ ಮಧುಗಿರಿ ಶಾಖೆಗೆ ನಬಾರ್ಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ಎನ್.ಎ.ಜಿನ್ನಾ ಸಮ್ಮುಖದಲ್ಲಿ ರಾಜ್ಯ ಕೃಷಿ ಸಚಿವ ಉಮೇಶ್‌ಕತ್ತಿ ಬಹುಮಾನ ವಿತರಿಸಿದರು.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ವಿ.ನರಸಿಂಹಮೂರ್ತಿ ಬ್ಯಾಂಕ್ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಬ್ಯಾಂಕ್ ಸ್ವಸಹಾಯ ಗುಂಪುಗಳ ನೋಡೆಲ್ ಅಧಿಕಾರಿ ಟಿ.ಕೆ.ಧನಲಕ್ಷ್ಮಿ, ಮಧುಗಿರಿ ಶಾಖೆ ಮೇಲ್ವಿಚಾರಕರಾದ ಸೀತಾರಾಮು, ಎಚ್.ಸಿ.ತಿಮ್ಮರಾಜು ಉಪಸ್ಥಿತರಿದ್ದರು.ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಕಾಮಧೇನು ಸ್ವಸಹಾಯ ಕಾರ್ಡ್‌ಗಳ ಮೂಲಕ ರೂ. 53 ಕೋಟಿಗೂ ಹೆಚ್ಚು ಸಾಲ ಸೌಲಭ್ಯವನ್ನು ಡಿಸಿಸಿ ಬ್ಯಾಂಕ್ ಒದಗಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.