ಶುಕ್ರವಾರ, ಜೂಲೈ 10, 2020
27 °C

ಡಿಸ್ಕವರಿ ಬಣ್ಣದಲ್ಲಿ ದ್ವಿತೀಯ ಮಹಾಯುದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರಡನೇ ಮಹಾಯುದ್ಧ ಜಗತ್ತಿನ ರಾಜಕೀಯ ಸಮೀಕರಣವನ್ನೇ ಬದಲು ಮಾಡಿದ ಘಟನೆ. ಈ ಯುದ್ಧಕ್ಕಿಂತ ಮೊದಲು ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದ್ದ ಜರ್ಮನಿ, ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಹೆಸರಾಗಿದ್ದ ಬ್ರಿಟನ್ ಯುದ್ಧದ ನಂತರ ವಿಶ್ವವೇದಿಕೆಯಲ್ಲಿ ಮಹತ್ವ ಕಳೆದುಕೊಂಡವು. ಅಣುಬಾಂಬ್ ದಾಳಿಯಿಂದ ಸಂಪೂರ್ಣ ನಿರ್ನಾಮವಾಗಿದ್ದ ಜಪಾನ್ ಆನಂತರ ವಿಶ್ವದ ಬಲಿಷ್ಠ ದೇಶಗಳಲ್ಲಿ ಒಂದಾಯಿತು.ಡಿಸ್ಕವರಿ ಚಾನೆಲ್ 2ನೇ ಮಹಾಯುದ್ಧದ ಘಟನಾವಳಿಗಳನ್ನು ಈಗ ಪ್ರತಿ ಮಂಗಳವಾರ ಬಣ್ಣದಲ್ಲಿ ತೋರಿಸಲು ಹೊರಟಿದೆ. 13 ಭಾಗಗಳ ಈ ಸರಣಿಯ ಮೊದಲ ಕಂತು ಇಂದು ಮಂಗಳವಾರ ರಾತ್ರಿ 8 ಗಂಟೆಗೆ ಆರಂಭ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.