ಡೀಸೆಲ್ ಚಾಲಿತ ಷೆವರ್ಲೆ ಬೀಟ್ ಮಾರುಕಟ್ಟೆಗೆ

ಸೋಮವಾರ, ಮೇ 20, 2019
30 °C

ಡೀಸೆಲ್ ಚಾಲಿತ ಷೆವರ್ಲೆ ಬೀಟ್ ಮಾರುಕಟ್ಟೆಗೆ

Published:
Updated:

ಬೆಂಗಳೂರು: ಜನರಲ್ ಮೋಟಾರ್ ಇಂಡಿಯಾ ಡೀಸೆಲ್ ಚಾಲಿತ ಷೆವರ್ಲೆ ಬೀಟ್ ಕಾರನ್ನು ಬುಧವಾರ ಇಲ್ಲಿ ರಾಜ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಮೂರು ಮಾದರಿಗಳಲ್ಲಿ ಲಭ್ಯವಿರುವ ಈ ಕಾರಿನ ಬೆಂಗಳೂರು ಎಕ್ಸ್ ಷೊರೂಂ ಬೆಲೆ ್ಙ4.35 ಲಕ್ಷದಿಂದ ಪ್ರಾರಂಭವಾಗುತ್ತದೆ.`ಇದು ದೇಶದ ಗರಿಷ್ಠ ಇಂಧನ ಕ್ಷಮತೆ ಹೊಂದಿರುವ ಡೀಸೆಲ್ ಚಾಲಿತ ಕಾರು. ಬೆಂಗಳೂರಿನಲ್ಲಿರುವ ಕಂಪೆನಿಯ ತಾಂತ್ರಿಕ ಕೇಂದ್ರದ ಸಹಭಾಗಿತ್ವದಲ್ಲಿ ಮುಂದಿನ ತಲೆಮಾರಿನ `ಸ್ಮಾರ್ಟ್‌ಟೆಕ್~ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಲೀಟರ್‌ಗೆ 24 ಕಿ.ಮೀ ಇಂಧನ ಸಾಮರ್ಥ್ಯ ಹೊಂದಿದ್ದು, ಪವರ್ ಸ್ಟಿಯರಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ~ ಎಂದು ಜನರಲ್ ಮೋಟಾರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕಾರ್ಲ್ ಸ್ಲ್ಯಾಮ್ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.`ಡೀಸೆಲ್ ಚಾಲಿತ ಷೆವರ್ಲೆ ಬೀಟ್ ಭಾರತೀಯ ಮಾರುಕಟ್ಟೆಗೆಂದೇ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಮುಂದಿನ 18 ತಿಂಗಳಲ್ಲಿ ಕಂಪೆನಿಯು ಇನ್ನೂ 5 ಹೊಸ ಮಾದರಿಗಳನ್ನು ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಸ್ಲ್ಯಾಮ್ ಹೇಳಿದರು. ಕಂಪೆನಿಯ ಭಾರತೀಯ ಮಾರುಕಟ್ಟೆ ಮುಖ್ಯಸ್ಥ ಪಿ. ಬಾಲೇಂದ್ರನ್ ಸುದ್ದಿಗೋಷ್ಠಿಯಲ್ಲಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry