ಬೆಂಗಳೂರು: ಡೆಕ್ಕನ್ ಇಂಟರ್ನ್ಯಾಷನಲ್ ಸ್ಕೂಲ್ ತಂಡದವರು ಭಾನುವಾರ ಕೊನೆಗೊಂಡ `ನಿಸರ್ಗ ಕಪ್-2013' ಮೂರನೇ ರಾಜ್ಯ ಮಟ್ಟದ ಅಂತರ ಶಾಲಾ ಬಾಲಕಿಯರ ವಾಲಿಬಾಲ್ ಟೂರ್ನಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಚಾಂಪಿಯನ್ ಆದರು.

ಕರ್ನಾಟಕ ವಾಲಿಬಾಲ್ ಸಂಸ್ಥೆ ಮತ್ತು ನಿಸರ್ಗ ವಾಲಿಬಾಲ್ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಈ ಟೂರ್ನಿ ಶುಕ್ರವಾರ ಮತ್ತು ಶನಿವಾರ ನಡೆಯಿತು. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಡೆಕ್ಕನ್ ಇಂಟರ್ನ್ಯಾಷ್ನಲ್ ಶಾಲೆ 25-18, 25-16ರಲ್ಲಿ ಕಾರ್ಮೆಲ್ ಕಾನ್ವೆಂಟ್ ತಂಡವನ್ನು ಮಣಿಸಿತು.

ಸೆಮಿಫೈನಲ್ ಪಂದ್ಯಗಳಲ್ಲಿ ಡೆಕ್ಕನ್ ತಂಡ 25-14, 25-12ರಲ್ಲಿ ಸದಾಶಿವನಗರದ ಪೂರ್ಣಪ್ರಜ್ಞಾ ಶಾಲೆ ಮೇಲೂ, ಕಾರ್ಮೆಲ್ ಕಾನ್ವೆಂಟ್ 25-18, 25-14ರಲ್ಲಿ ಯಲಹಂಕದ ಪೂರ್ಣ ಪ್ರಜ್ಞಾ ವಿರುದ್ಧವೂ ಗೆಲುವು ಪಡೆದು ಫೈನಲ್ ಪ್ರವೇಶಿಸಿದ್ದವು.

ಕಾರ್ಮೆಲ್ ಕಾನ್ವೆಂಟ್ಗೆ ಪ್ರಶಸ್ತಿ: ಹೈಸ್ಕೂಲು ವಿಭಾಗದ ಫೈನಲ್ ಪಂದ್ಯದಲ್ಲಿ ಕಾರ್ಮೆಲ್ ಕಾನ್ವೆಂಟ್ ತಂಡ 25-18, 25-16ರಲ್ಲಿ ಧಾರವಾಡದ ಸರ್ಕಾರಿ ಶಾಲೆಯ ಎದುರು ಗೆಲುವು ಪಡೆದು ಪ್ರಶಸ್ತಿ ಗೆದ್ದುಕೊಂಡಿತು. ನಾಲ್ಕರ ಘಟ್ಟದ ಹೋರಾಟದಲ್ಲಿ ಕಾರ್ಮೆಲ್ ಕಾನ್ವೆಂಟ್ 25-15, 25-17ರಲ್ಲಿ ಯಲಹಂಕ ಪೂರ್ಣಪ್ರಜ್ಞಾ ಶಾಲೆ ಮೇಲೂ, ಧಾರವಾಡದ ಸರ್ಕಾರಿ ಶಾಲೆ 26-24, 25-20ರಲ್ಲಿ ಶ್ರೀರಾಂಪುರದ ಗಾಂಧಿ ವಿದ್ಯಾ ಶಾಲಾ ತಂಡವನ್ನು ಸೋಲಿಸಿ ಪ್ರಶಸ್ತಿ ಘಟ್ಟ ಪ್ರವೇಶಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.