ಡೆಹ್ರಾಡೂನ್: ನದಿಗೆ ಬಸ್ ಉರುಳಿ 15 ಸಾವು

7

ಡೆಹ್ರಾಡೂನ್: ನದಿಗೆ ಬಸ್ ಉರುಳಿ 15 ಸಾವು

Published:
Updated:
ಡೆಹ್ರಾಡೂನ್: ನದಿಗೆ ಬಸ್ ಉರುಳಿ 15 ಸಾವು

ಡೆಹ್ರಾಡೂನ್ (ಪಿಟಿಐ):  ಇಲ್ಲಿನ ಗುಡ್ಡಗಾಡು ಪ್ರದೇಶದಲ್ಲಿನ ಟ್ಯೂನಿ ಮಾರ್ಕೆಟ್ ಎಂಬಲ್ಲಿ ಭಾನುವಾರ ಬಸ್ಸೊಂದು ಉಕ್ಕಿ ಹರಿಯುತ್ತಿದ್ದ  ಯಮುನಾ ನದಿಯ ಉಪನದಿ ಟೋನ್ಸ್ ನದಿಯಲ್ಲಿ ಬಿದ್ದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಎಂಟು ಮಂದಿ ಕಾಣೆಯಾಗಿದ್ದಾರೆ.ಇದುವರೆಗೆ 15 ಶವಗಳು ಪತ್ತೆಯಾಗಿವೆ. ‘ಕಾಣೆಯಾದ ಎಂಟು ವ್ಯಕ್ತಿಗಳ ಶೋಧ ಕಾರ್ಯ ಚುರುಕಿನಿಂದ  ನಡೆದಿದೆ ಎಂದು  ಜಿಲ್ಲಾಧಿಕಾರಿ ಕುರ್ವೆ ಅವರು ತಿಳಿಸಿದ್ದಾರೆ. ಇದುವರೆಗೆ ನದಿಯಲ್ಲಿ ಬಿದ್ದ ಬಸ್ಸಿನ ಸುಳಿವು ದೊರೆತಿಲ್ಲ ಎಂದೂ ಅವರು ತಿಳಿಸಿದ್ದಾರೆ.ಈ ಅಪಘಾತದಲ್ಲಿ ಗಾಯಗೊಂಡಿರುವ 12 ಮಂದಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ  ಬಸ್ ಕಟ್ಯಾಲ್ ನಿಂದ ಡೆಹ್ರಾಡೂನ್‌ಗೆ ತೆರಳುತ್ತಿತ್ತು. ಚಾಲಕನು ಬಸ್ಸನ್ನು ಕಡಿದಾದ ತಿರುವಿನಲ್ಲಿ ಚಾಲನೆ ಮಾಡುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry