ದಾವಣಗೆರೆ: ಡೇನಿಯಲ್ ಫರೀದ್ ಹಾಗೂ ಶಿಖಾ ಗೌತಮ್ ಭಾನುವಾರ ಮುಕ್ತಾಯಗೊಂಡ `ಲಿ-ನಿಂಗ್ 5 ಸ್ಟಾರ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ'ಯ ಹಲವು ವಿಭಾಗಗಳಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವ ಮೂಲಕ ಪ್ರಾಬಲ್ಯ ಮೆರೆದರು.

ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯು, ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಗರದ ಸುಭಾಷ್ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಈ ಟೂರ್ನಿಯಲ್ಲಿ ಅಗ್ರಶ್ರೇಯಾಂಕದ ಡೇನಿಯಲ್ ಫರೀದ್ 17 ಮತ್ತು 19 ವರ್ಷದೊಳಗಿನವರ ಸಿಂಗಲ್ಸ್ ಹಾಗೂ 19 ವರ್ಷದೊಳಗಿನವರ ಡಬಲ್ಸ್ನಲ್ಲಿ ಜಯ ಗಳಿಸಿ, ಮೂರು ಪ್ರಶಸ್ತಿ ಗೆದ್ದುಕೊಂಡನು. 5ನೇ ಶ್ರೇಯಾಂಕದ ಶಿಖಾ ಗೌತಮ್, 17 ಹಾಗೂ 19 ವರ್ಷದೊಳಗಿನವರ ಸಿಂಗಲ್ಸ್ ಮತ್ತು ಡಬಲ್ಸ್ನಲ್ಲಿ ಪ್ರಾಬಲ್ಯ ಮೆರೆದು, ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡರು.

ಫೈನಲ್ ಪಂದ್ಯಗಳ ಫಲಿತಾಂಶ
13 ವರ್ಷದೊಳಗಿನವರು: ಕಾರ್ತಿಕ್ ವ್ಯಾಕರಣಂ 23-21, 21-16ರಿಂದ 2ನೇ ಶ್ರೇಯಾಂಕದ ತೇಜಸ್ ಕಲ್ಲೋಳಕರ್ಗೆ ಆಘಾತ ನೀಡಿದರು.

15 ವರ್ಷದೊಳಗಿನವರು: ಅಗ್ರ ಶ್ರೇಯಾಂಕದ ರಾಹುಲ್ ಭಾರದ್ವಾಜ್ಗೆ 21-12, 21-19ರಲ್ಲಿ ಅಕ್ಷಯ್ ಶ್ರೀನಿವಾಸ್ಗೆ ಜಯ.

17 ವರ್ಷದೊಳಗಿನವರು: ಅಗ್ರ ಶ್ರೇಯಾಂಕದ ಡೇನಿಯಲ್ ಫರೀದ್ 21-19, 21-16ರಿಂದ ಮಿಥುನ್ ಮಂಜುನಾಥ್ ವಿರುದ್ಧ ನಿರಾಯಾಸ ಗೆಲುವು ಸಾಧಿಸಿದರು.

19 ವರ್ಷದೊಳಗಿನವರು: ಡೇನಿಯಲ್ ಫರೀದ್ಗೆ 21-6, 21-10ರಲ್ಲಿ ವೈಭವ್ ಸುಲಭ ತುತ್ತಾದರು.

ಡಬಲ್ಸ್: 13 ವರ್ಷದೊಳಗಿನವರು: ಅಂಜಿಕ್ಯ ಜೋಶಿ- ತೇಜಸ ಸಂಜಯ್ ಕಲ್ಲೋಳಕರ್ ಜೋಡಿಗೆ 18-21, 21-13, 21-19ರಲ್ಲಿ ಕಾರ್ತಿಕ್ ವ್ಯಾಕರಣಂ- ಸಿ.ಎಸ್.ಸಾಕೇತ್ ಜೋಡಿ ವಿರುದ್ಧ ಜಯ.

15 ವರ್ಷದೊಳಗಿನವರು: ಎಸ್.ಅಕ್ಷಯ್ ಶ್ರೀನಿವಾಸ್- ಎಂ.ಎಲ್.ಕೆವಿನ್ ಜೋಡಿ 21-11, 20-22, 21-16ರಿಂದ ಬಿ.ಎಂ.ರಾಹುಲ್ ಭಾರದ್ವಾಜ್- ಸೈಫ್ ಅಲಿ ವಿರುದ್ಧ ಗೆಲುವು ಸಾಧಿಸಿತು.

17 ವರ್ಷದೊಳಗಿನವರು: ಮಿಥಿನ್ ಮಂಜುನಾಥ್- ಎಂ.ರಘು ಜೋಡಿ 21-18, 21-15ರಿಂದ ಅನಿಶ್ ಉಪಾಧ್ಯಾಯ- ಅಮೃತ್ಲಾಡ್ ಜೋಡಿ ವಿರುದ್ಧ ಜಯ ಗಳಿಸಿತು.

19 ವರ್ಷದೊಳಗಿನವರು: ಡೇನಿಯಲ್ ಫರೀದ್- ಹರ್ಷಿತ್ ಅಗರ್ವಾಲ್ ಜೋಡಿ 21-8, 21-13ರಿಂದ ಮಿಥುನ್ ಮಂಜುನಾಥ್- ಎಂ.ರಘು ಜೋಡಿ ವಿರುದ್ಧ ಗೆದ್ದು, ಪ್ರಶಸ್ತಿ ಪಡೆದುಕೊಂಡಿತು.

ಬಾಲಕಿಯರ ವಿಭಾಗ: 13 ವರ್ಷದೊಳಗಿನವರು: ಮೂರನೇ ಶ್ರೇಯಾಂಕದ ಧೃತಿ ಯತೀಶ್ಗೆ 21-14, 21-13ರಲ್ಲಿ ಅಗ್ರಶ್ರೇಯಾಂಕದ ಶಿವಾನಿ ಎ. ಪತಿ ವಿರುದ್ಧ ಜಯ.

15 ವರ್ಷದೊಳಗಿನವರು: ಅಗ್ರಶ್ರೇಯಾಂಕದ ಅಪೇಕ್ಷಾ ನಾಯಕ್ 21-17, 21-11ರಿಂದ ಅರ್ಚನಾ ಪೈ ವಿರುದ್ಧ ಗೆಲುವು ಪಡೆದರು.

17 ವರ್ಷದೊಳಗಿನವರು: ಶಿಖಾ ಗೌತಮ್ 21-10, 21-13ರಿಂದ ಮಹಿಮಾ ಅಗರ್ವಾಲ್ ವಿರುದ್ಧ ಜಯ ಗಳಿಸಿದರು.

19 ವರ್ಷದೊಳಗಿನವರು: ಶಿಖಾ ಗೌತಮ್ಗೆ 21-16, 21-19ರಲ್ಲಿ ಮಹಿಮಾ ಅಗರ್ವಾಲ್ ವಿರುದ್ಧ ಜಯ.

ಡಬಲ್ಸ್: 13 ವರ್ಷದೊಳಗಿನವರ ವಿಭಾಗದಲ್ಲಿ ಪ್ರಾರ್ಥನಾ ವಾಸುದೇವನ್- ಶಿವಾನಿ ಎ.ಪತಿ ಜೋಡಿ 21-17, 21-5ರಿಂದ ಡಿ.ಶೀತಲ್- ತ್ರಿಶಾ ಹೆಗಡೆ ಜೋಡಿ ವಿರುದ್ಧ ಗೆದ್ದಿತು.

15 ವರ್ಷದೊಳಗಿನವರು: ಅರ್ಚನಾ ಪೈ- ರೀನಿ ತಿರುಮಲ ಜೋಡಿ 21-13, 21-15ರಿಂದ ಪ್ರಾರ್ಥನಾ ವಾಸುದೇವನ್- ಶಿವಾನಿ ಎ.ಪತಿ ಜೋಡಿ ವಿರುದ್ಧ ಜಯ ಗಳಿಸಿತು.

17 ವರ್ಷದೊಳಗಿನವರು: ಮಹಿಮಾ ಅಗರ್ವಾಲ್- ಶಿಖಾ ಗೌತಮ್ ಜೋಡಿ 21-14, 21-13ರಿಂದ ಸರಯೂ ವ್ಯಾಕರಣಂ- ಶೀತಲ್ ಸುದರ್ಶನ್ ಜೋಡಿ ವಿರುದ್ಧ ಗೆಲುವು ಸಾಧಿಸಿತು.

19 ವರ್ಷದೊಳಗಿನವರು: ಮಹಿಮಾ ಅಗರ್ವಾಲ್-ಶಿಖಾ ಗೌತಮ್ ಜೋಡಿ 21-18, 21-19ರಿಂದ ಅರ್ಶೀನ್ ಎಸ್.ಸಾದತ್- ಪಾರ್ವತಿ ಕೃಷ್ಣನ್ ಜೋಡಿ ವಿರುದ್ಧ ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.