ಸೋಮವಾರ, ಮೇ 10, 2021
20 °C

ಡೇ ಕೇರ್; ಮಕ್ಕಳಲ್ಲಿ ಹೃದ್ರೋಗ ಸಾಧ್ಯತೆ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್, (ಪಿಟಿಐ):  ಮಗುವನ್ನು ಡೇ ಕೇರ್ ಸೆಂಟರ್‌ಗೆ ಬಿಟ್ಟು ಕೆಲಸಕ್ಕೆ ತೆರಳುವ ಅಮ್ಮಂದಿರು ಈ ಹೊಸ ಅಧ್ಯಯನ ವರದಿಯತ್ತ ಗಮನಹರಿಸಲೇಬೇಕು.ಡೇ ಕೇರ್ ಸೆಂಟರ್‌ಗಳಲ್ಲಿ ಕಾಲ ಕಳೆಯುವ ಸಣ್ಣ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಖ್ಯಾತ ಮಾನಸಿಕ  ತಜ್ಞರಾದ ಡಾ. ಎರಿಕ್ ಸಿಗ್‌ಮನ್ ಅಭಿಪ್ರಾಯಪಟ್ಟಿದ್ದಾರೆ. ಬೆಳವಣಿಗೆಯ ಆರಂಭದ ವರ್ಷದಲ್ಲಿ ಅಪರಿಚಿತರು ಮಗುವನ್ನು ನೋಡಿಕೊಳ್ಳುವುದರಿಂದ ಮಗುವಿನ ಒತ್ತಡದ (ಸ್ಟ್ರೆಸ್) ಹಾರ್ಮೋನುಗಳ ಪ್ರಮಾಣದಲ್ಲಿ ಒಂದೇ ಸಮನೆ ಏರಿಕೆ ಕಂಡುಬರುತ್ತದೆ. ಇದರಿಂದ ಕೆಮ್ಮು, ಶೀತ ಮುಂತಾದ ಕಾಯಿಲೆಗಳು ಅಲ್ಪಾವಧಿಯಲ್ಲೇ ಕಾಣಿಸಿಕೊಂಡು, ಮುಂದೆ ಅವು  ಹೃದಯ ಸಂಬಂಧಿ ಕಾಯಿಲೆಗೆ ರೂಪಾಂತರಗೊಳ್ಳುತ್ತವೆ ಎಂದು ಸಿಗ್‌ಮನ್ ಅವರ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.