ಡೈವಿಂಗ್ ‘ಕೊಳ’ಕು; ಪಟುಗಳ ಸಿಡುಕು

ರಿಯೊ ಡಿ ಜನೈರೊ (ಎಎಫ್ಪಿ): ಒಲಿಂಪಿಕ್ಸ್ ಕ್ರೀಡಾ ಗ್ರಾಮದ ಡೈವಿಂಗ್ ಕೊಳವು ವಿಪರೀತವಾಗಿ ಮಲಿನಗೊಂಡಿದೆ ಎಂದು ಡೈವಿಂಗ್ ಸ್ಪರ್ಧಿಗಳು ಕಿಡಿಕಾರಿದ್ದಾರೆ.
ಪಾಚಿಗಟ್ಟಿದ ಹಸಿರು ನೀರು ದುರ್ವಾಸನೆ ಬೀರುತ್ತಿದೆ. ಡೈವಿಂಗ್ ಮಾಡಿದ ನಂತರ ಕಣ್ಣುಗಳು ಉರಿಯುತ್ತಿವೆ ಎಂದು ಡೈವಿಂಗ್ ಪಟುಗಳು ದೂರಿದ್ದಾರೆ
‘ಗಲೀಜಾಗಿದ್ದ ಕೊಳವನ್ನು ಭಾನುವಾರದವರೆಗೂ ಸ್ವಚ್ಛ ಮಾಡಿರಲಿಲ್ಲ. ಸ್ಪರ್ಧೆಯ ವೇಳೆಯೂ ಕೊಳದ ನೀರು ಬದಲಾಯಿಸಿಲ್ಲ’ ಎಂದು ಆಸ್ಟ್ರೇಲಿಯಾದ ಡೈವಿಂಗ್ ಪಟು ಮ್ಯಾಡಿಸನ್ ಕೀನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಮಹಿಳೆಯರ 3 ಮೀಟರ್ಸ್ ಸ್ಪ್ರಿಂಗ್ಬೋರ್ಡ್ ಡೈವಿಂಗ್ನಲ್ಲಿ ಐದನೇ ಸ್ಥಾನ ಪಡೆದರು.
ಮರಿಯಾ ಲೆಂಕ್ ಅಕ್ವೆಟಿಕ್ ಸೆಂಟರ್ ಗೆ ಹೊಂದಿ ಕೊಂಡು ಡೈವಿಂಗ್ ಕೊಳ ಇದೆ.
‘ಕೊಳದ ಅವ್ಯವಸ್ಥೆ ನನ್ನ ಸೋಲಿಗೆ ಕಾರಣ ಎಂದು ಆರೋಪಿಸುವುದಿಲ್ಲ. ಆದರೆ ಈ ಕೊಳದ ವಾತಾವರಣ ಅಸಹನೀಯ ವಾಗಿದೆ. ಅದರಿಂದ ಹೊರಗೆ ಬಂದಿರುವುದಕ್ಕೆ ಸಂತಸವಿದೆ. ಈ ಕೊಳಚೆಯಲ್ಲಿ ಮತ್ತೊಮ್ಮೆ ಡೈವ್ ಮಾಡುವುದಿಲ್ಲ’ ಎಂದು ಮ್ಯಾಡಿಸನ್ ಹೇಳಿದ್ದಾರೆ.
‘ಕೊಳದ ಇಡೀ ವಾತಾವರಣವೇ ದುರ್ನಾತ ಬೀರುತ್ತಿದೆ’ ಎಂದು ಜರ್ಮನಿಯ ಸ್ಟೀಫನ್ ಫೆಕ್ ತಮ್ಮ ಫೇಸ್ಬುಕ್ ನಲ್ಲಿಯೂ ಬರೆದುಕೊಂಡಿದ್ದಾರೆ.
ಇವರಲ್ಲದೇ ಇನ್ನೂ ಹಲವು ಡೈವಿಂಗ್ ಪಟುಗಳು ಕೊಳದ ಅವ್ಯವಸ್ಥೆಯ ಕುರಿತು ಅಸಮಾಧಾನ ವ್ಯಕ್ತಪಡಿ ಸಿದ್ದಾರೆ.
‘ನನ್ನ ಎರಡು ಕೈಗಳು, ಕಾಲುಗಳನ್ನು ಉಳಿಸಿ ಕೊಂಡು ರಿಯೊದಿಂದ ನಿರ್ಗಮಿಸು ತ್ತಿದ್ದೇನೆ ಎಂಬುದೇ ಸಂತಸದ ವಿಷಯ. ಇದೆಲ್ಲದರ ಮುಂದೆ ಹಸಿರು ನೀರು ಲೆಕ್ಕವೇ ಅಲ್ಲ’ ಎಂದು ಕೆನಡಾದ ಡೈವರ್ ಅಬೆಲ್ ವ್ಯಂಗ್ಯವಾಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.