ಕಾರ್ಡಿಫ್ (ಪಿಟಿಐ): `ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಖುಷಿ ನೀಡಿದೆ. ಈ ಹಿಂದೆ ನಮ್ಮ ತಂಡ ಪ್ರಮುಖ ಘಟ್ಟಗಳಲ್ಲಿ ನಿರಾಸೆ ಅನುಭವಿಸುತ್ತಿತ್ತು. ಆದರೆ, ಈ ಸಲದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ನಿರಾಸೆ ಕಾಡಲಿಲ್ಲ' ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಎ.ಬಿ. ಡಿವಿಲಿಯರ್ಸ್ ಸಂತಸ ವ್ಯಕ್ತಪಡಿಸಿದರು.

ಮಳೆಯ ಕಾಟದ ನಡುವೆಯೂ ಶನಿವಾರ ನಡೆದ ಅದೃಷ್ಟ ಪರೀಕ್ಷೆಯಲ್ಲಿ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿತ್ತು. ಇದರ ಪರಿಣಾಮ ಡಿವಿಲಿಯರ್ಸ್ ಪಡೆ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿತು. ಈ ಪಂದ್ಯದ ನಂತರ ಡಿವಿಲಿಯರ್ಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸೋಫಿಯಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ 31 ಓವರ್ಗಳಲ್ಲಿ 230 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ವಿಂಡೀಸ್ 26.1 ಓವರ್ಗಳಲ್ಲಿ ಅರು ವಿಕೆಟ್ಗೆ 190 ರನ್ಗಳನ್ನು ಕಲೆ ಹಾಕಿದ ವೇಳೆ ಮತ್ತೆ ಮಳೆ ಸುರಿಯಿತು. ಆದ್ದರಿಂದ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಪಂದ್ಯ ಟೈ ಯಲ್ಲಿ ಅಂತ್ಯ ಕಂಡಿತು.

`ಮಳೆ ಸುರಿದ ಕಾರಣ ಕ್ರೀಡಾಂಗಣ ತೇವಗೊಂಡಿದ್ದರಿಂದ ರನ್ ಗಳಿಸುವುದು ಕೊಂಚ ಕಷ್ಟವೆನಿಸುತ್ತಿತ್ತು. ಆದರೆ, ಗೆಲುವು ಅನಿವಾರ್ಯವಾಗಿದ್ದರಿಂದ ಉತ್ತಮ ಪ್ರದರ್ಶನ ತೋರಬೇಕಾದ ಸವಾಲಿತ್ತು. ನಮ್ಮ ಬ್ಯಾಟ್ಸ್ಮನ್ಗಳು ತೋರಿದ ಆಟದಿಂದ ಖುಷಿಯಾಗಿದೆ. ಇದರಿಂದ ವೇಗವಾಗಿ ರನ್ ಗಳಿಸಲು ಸಾಧ್ಯವಾಯಿತು. ಗಾಯಗೊಂಡು ಚೇತರಿಸಿಕೊಂಡಿರುವ ಡೇಲ್ ಸ್ಟೈನ್ ತೋರಿದ ಪ್ರದರ್ಶನ ಮೆಚ್ಚುವಂತದ್ದು' ಎಂದು ವಿಕೆಟ್ ಕೀಪರ್ ಕೂಡಾ ಆಗಿರುವ ಡಿವಿಲಿಯರ್ಸ್ ನುಡಿದರು.

ಬ್ರಾವೊ ಬೇಸರ: `ಮಹತ್ವದ ಪಂದ್ಯದಲ್ಲಿ ಮಳೆ ಸುರಿದ ಕಾರಣ ತುಂಬಾ ಬೇಸರವಾಯಿತು. ಇದೊಂದು ಕಠಿಣ ಫಲಿತಾಂಶ. ಆದರೆ, ಮಳೆ ವಿರಾಮ ನೀಡಿದ್ದರೆ, ಗೆಲುವು ಪಡೆಯಲು ಅವಕಾಶವಿತ್ತು. ಸೆಮಿಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆಭಿನಂದನೆಗಳು. ಗುರಿಯನ್ನು ಬೆನ್ನುಟ್ಟುವ ಹಾದಿಯಲ್ಲಿ ನಮ್ಮ ಬ್ಯಾಟ್ಸ್ಮನ್ಗಳು ತೋರಿದ ಪ್ರದರ್ಶನವೂ ಖುಷಿ ನೀಡಿದೆ' ಎಂದು ಕೆರಿಬಿಯನ್ ನಾಡಿನ ನಾಯಕ ಡ್ವೇನ್ ಬ್ರಾವೊ ನುಡಿದರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 31 ಓವರ್ಗಳಲ್ಲಿ 6 ವಿಕೆಟ್ಗೆ 230. ವೆಸ್ಟ್ ಇಂಡೀಸ್: 26.1 ಓವರ್ಗಳಲ್ಲಿ 6 ವಿಕೆಟ್ಗೆ 190 (ಕ್ರಿಸ್ ಗೇಲ್ 36, ಡೆವೊನ್ ಸ್ಮಿತ್ 30, ಮರ್ಲಾನ್ ಸ್ಯಾಮುಯೆಲ್ಸ್ 48, ಕೀರನ್ ಪೊಲಾರ್ಡ್ 28, ಡೇಲ್ ಸ್ಟೇನ್ 33ಕ್ಕೆ 2) ಫಲಿತಾಂಶ: ಡಕ್ವರ್ಥ್ ಲೂಯಿಸ್ ನಿಯಮದಂತೆ `ಟೈ'

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.