ತಂತ್ರಜ್ಞಾನ ಅಳವಡಿಕೆ:ಚಿನ್ನದ ಪದಕ

7

ತಂತ್ರಜ್ಞಾನ ಅಳವಡಿಕೆ:ಚಿನ್ನದ ಪದಕ

Published:
Updated:

ಬೆಂಗಳೂರು: ಬಿ- ಟ್ರಾಕ್ ಯೋಜನೆ ಅನುಷ್ಠಾನದಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಅಳವಡಿಸಿಕೊಂಡ ಬೆಂಗಳೂರು ಸಂಚಾರ ಪೊಲೀಸರಿಗೆ ಕೇಂದ್ರ ಸರ್ಕಾರವು ಚಿನ್ನದ ಪದಕ ನೀಡಿದೆ.

ಔರಂಗಬಾದ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಮತ್ತು ರಾಜ್ಯಪಾಲ ಶಂಕರ್ ನಾರಾಯಣ್ ಅವರು ನಗರ ಪೊಲೀಸ್ ಶಂಕರ್ ಬಿದರಿ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಿದರು.

ಬಿದರಿ, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್, ಫ್ರೇಜರ್‌ಟೌನ್ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಸಿ.ಆರ್.ಗೀತಾ, ಹಲಸೂರು ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಕವಿತಾ, ಸಂಚಾರ ನಿರ್ವಹಣಾ ಕೇಂದ್ರದ (ಟಿಎಂಸಿ) ಇನ್‌ಸ್ಪೆಕ್ಟರ್ ಸುಧೀರ್ ಮತ್ತು ಸಬ್‌ಇನ್‌ಸ್ಪೆಕ್ಟರ್ ಕುಲಕರ್ಣಿ ಅವರು ನಗರ ಪೊಲೀಸರ ಪರವಾಗಿ ಪದಕ ಸ್ವೀಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry