ಗುರುವಾರ , ಮೇ 6, 2021
21 °C

ತಂತ್ರಾಂಶ ಸಿದ್ಧಪಡಿಸುತ್ತಿರುವ ಶ್ರೀ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: `ಪ್ರಾಚೀನ ಕಾಲದ ವಿದ್ವಾಂಸ ಪಾಣಿನಿ ರಚಿಸಿದ 4 ಸಾವಿರ ಸೂತ್ರಗಳನ್ನು ಗಣಕಯಂತ್ರಕ್ಕೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕಾಗಿ ನಾವು ತಂತ್ರಾಂಶ ಸಿದ್ಧಪಡಿಸಿದ್ದೇವೆ' ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ದಾವಣಗೆರೆ ವಿವಿಯಲ್ಲಿ ನಡೆದ ನೂತನ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪಾಣಿನಿ ರಚಿಸಿದ ಸೂತ್ರಗಳು ಇಂದಿನ ಸಾಫ್ಟ್‌ವೇರ್ ತಂತ್ರಜ್ಞಾನಕ್ಕೆ ಮೂಲದಂತಿವೆ. ತಂತ್ರಾಂಶದ ಕಾರ್ಯಕ್ರಮ ಕೋಡ್‌ಗಳಂತೆ ಅವು ಇವೆ. ಈ ಸೂತ್ರಗಳನ್ನು ಗಣಕಯಂತ್ರಕ್ಕೆ ಅಳವಡಿಸಲು 20 ವರ್ಷಗಳಿಂದಲೂ ಯತ್ನಿಸುತ್ತಿದ್ದೇವೆ. ಈಗ, ಒಂದು ಪರಿಣಾಮಕಾರಿ ಹಂತಕ್ಕೆ ಈ ಪ್ರಯತ್ನ ಬಂದಿದೆ. ತರಳಬಾಳು ಪೀಠದ ವೆಬ್‌ಸೈಟ್‌ನಲ್ಲಿ ಆಸಕ್ತರು ವೀಕ್ಷಿಸಬಹುದು ಎಂದು ತಿಳಿಸಿದರು.ಜರ್ಮನಿಯ ನಾಲ್ಕು ಹಾಗೂ ಆಸ್ಟ್ರಿಯಾದ ವಿಯೆನ್ನಾ ವಿವಿಯಲ್ಲಿ ಕನ್ನಡ ಅಧ್ಯಯನ ಪೀಠವನ್ನು ಮತ್ತೆ ಸ್ಥಾಪನೆ ಮಾಡಬೇಕು. ಈ ಬಗ್ಗೆ ಹಿಂದಿನ ಸರ್ಕಾರದ ರೂ 1 ಕೋಟಿ ನೀಡಿದೆ.  ದಾವಣಗೆರೆ ವಿವಿಯನ್ನು ವಿದೇಶಿ ವಿವಿಗಳೊಂದಿಗೆ ಬೆಸೆಯುವ ಕಾರ್ಯವಾಗಿದೆ. ವಿಯೆನ್ನಾ ವಿವಿಯವರು, ದಾವಣಗೆರೆ ವಿವಿಯಲ್ಲಿ ಹೆಚ್ಚಿನ ಅಧ್ಯಯನಕ್ಕೆ ಸೌಲಭ್ಯ ಇಲ್ಲ ಎಂದು ಸಹಯೋಗಕ್ಕೆ ಬರಲು ಹಿಂದೆಮುಂದೆ ನೋಡುತ್ತಿದ್ದಾರೆ. ಇತ್ತ ರಾಜ್ಯ ಸರ್ಕಾರ ಗಮನಹರಿಸಬೇಕು. ಹೊಸದಾಗಿ ಬೆಳೆಯುತ್ತಿರುವ ವಿವಿಗೆ ಮಾತೃ ಹೃದಯಿಯಾಗಿ ಪ್ರೋತ್ಸಾಹ ನೀಡಬೇಕು ಎಂದು ಸೂಚಿಸಿದರು.ಆಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರದಲ್ಲಷ್ಟೇ ಅಲ್ಲದೇ ಲೌಕಿಕ ವಿದ್ಯೆಯಲ್ಲಿಯೂ ಭಾರತದಲ್ಲಿ ಬಹಳ ಮೇಲ್ಮಟ್ಟದ ಕಲಿಕೆ ಪ್ರಾಚೀನ ಕಾಲದಿಂದಲೂ ಇತ್ತು. ಇದಕ್ಕೆ ಹಲವು ಗ್ರಂಥಗಳಲ್ಲಿ ನಿದರ್ಶನಗಳಿವೆ. ಮಠಗಳು ಪ್ರಾಚೀನ ಕಾಲದಿಂದಲೂ ವಿದ್ಯಾಪ್ರಸಾರ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸಿವೆ. `ಶೂನ್ಯ'ವನ್ನು ಜಗತ್ತಿಗೆ ನೀಡಿದ ಕೊಡುಗೆ ಭಾರತದ್ದು ಎಂದು ಹೆಮ್ಮೆ ಪಡಬೇಕು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.