ಸಾಗರ: ಇಲ್ಲಿನ ಖಾಸಗಿ ವಸತಿಗೃಹದಲ್ಲಿ ಕಳೆದ ಅಕ್ಟೋಬರ್ 28ರಂದು ತಂದೆಯನ್ನೇ ಕೊಲೆ ಮಾಡಿದ ಆರೋಪಕ್ಕಾಗಿ ಬೆಂಗಳೂರಿನ ಕೋರಮಂಗಲ ಬಡಾವಣೆಯ ನಾಗಾನಂದ ಎಂಬುವವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.

ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ನಾಗಾನಂದ ತನ್ನ ತಂದೆ ಕಸ್ತೂರಿರಂಗನ್ ಹಾಗೂ ತಾಯಿ ರಮಾ ಅವರೊಂದಿಗೆ ಇಲ್ಲಿಗೆ ಬಂದು ವಸತಿಗೃಹದಲ್ಲಿ ತಂಗಿದ್ದರು.

ಅ. 29ರಂದು ವಸತಿಗೃಹದ ಸಿಬ್ಬಂದಿ ಗಮನಿಸಿದಾಗ ಕಸ್ತೂರಿ ರಂಗನ್ ಕೊಲೆಯಾಗಿದ್ದರೆ, ರಮಾ ಅವರು ರಕ್ತದ ಮಡುವಿನಲ್ಲಿ ನರಳುತ್ತಿದ್ದರು. ನಾಗಾನಂದ ಸ್ಥಳದಿಂದ ಪರಾರಿಯಾಗಿದ್ದರು.

ತೀವ್ರವಾಗಿ ಗಾಯಗೊಂಡಿದ್ದ ರಮಾ ಅವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಅವರು ‘ಕೌಟುಂಬಿಕ ಸಮಸ್ಯೆ ಹಾಗೂ ಸಾಲದ ಬಾಧೆಯ ಕಾರಣ ಮೂವರು ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಇಲ್ಲಿಗೆ ಬಂದಿದ್ದೆವು’ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದರು. ‘ಹೇಗೆ ಸಾಯುವುದು ಎಂದು ನಾವು ಗೊಂದಲದಲ್ಲಿದ್ದಾಗ ನಾಗಾನಂದ ತಂದೆಯನ್ನು ಚೂರಿಯಿಂದ ಇರಿದ ನಂತರ ನನ್ನ ಕುತ್ತಿಗೆಗೂ ಚಾಕುವಿನಿಂದ ಇರಿದ’ ಎಂದು ತಿಳಿಸಿದ್ದರು. ರಮಾ ಈಗ ಚೇತರಿಸಿಕೊಂಡಿದ್ದಾರೆ.

ನಂತರ ನ. 2ರಂದು ಜೋಗ ಜಲಪಾತದಲ್ಲಿ ಅನಾಥ ಶವವೊಂದು ಪತ್ತೆಯಾದಾಗ ಇದು ನಾಗಾನಂದನ ಶವ ಇರಬಹುದು ಎಂದು ಪೊಲೀಸರು ಶಂಕಿಸಿದ್ದರು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶವವನ್ನು ತಂದಾಗ, ಅಲ್ಲಿಗೆ ಬಂದಿದ್ದ ನಾಗಾನಂದನ ಪತ್ನಿ ಇದು ತಮ್ಮ ಪತಿಯದ್ದೇ ಶವ ಎಂದು ಗುರುತಿಸಿದ್ದರು.

ಪೊಲೀಸರು ನಾಗಾನಂದನ ಶವದಿಂದ ಡಿ.ಎನ್.ಎ ಪರೀಕ್ಷೆಗೆ ಬೇಕಾದ ಅಂಶಗಳನ್ನು ತೆಗೆದ ನಂತರ ಶಿವಮೊಗ್ಗದಲ್ಲೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಈ ನಡುವೆ ನಾಗಾನಂದನ ಪತ್ನಿ ದಿವ್ಯಾ ಬೆಂಗಳೂರಿನ ಕೋರಮಂಗಲ ಠಾಣೆಯಲ್ಲಿ ತನ್ನ ಪತಿ, ಅತ್ತೆ, ಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದರು. ಆ ಪ್ರಕರಣದಲ್ಲಿ ಪೊಲೀಸರು ನಾಗಾನಂದನ ಪತ್ತೆಯಲ್ಲಿ ತೊಡಗಿದ್ದರು.

ತಂದೆಯ ಸಾವಿನ ನಂತರ ಗೋವಾ, ಮುಂಬೈ, ಶಿರಡಿ ಮೊದಲಾದ ಊರುಗಳನ್ನು ಸುತ್ತಿದ ನಾಗಾನಂದ ಮಾನಸಿಕವಾಗಿ ತೀವ್ರ ನೊಂದು ಕೆಲವು ದಿನ ಹಿಂದೆ ಕೋರಮಂಗಲ ಪೊಲೀಸ್ ಠಾಣೆಗೆ ಶರಣಾದರು. ಈ ವಿಷಯ ತಿಳಿದ ಇಲ್ಲಿನ ಪೇಟೆ ಠಾಣೆ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಾನಂದನನ್ನು ಇಲ್ಲಿಗೆ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನಾಗಾನಂದ ಇಲ್ಲಿನ ನ್ಯಾಯಾಲಯದಲ್ಲಿ ತನ್ನ ಪರವಾಗಿ ವಾದಿಸಲು ಯಾವುದೇ ವಕೀಲರನ್ನು ನೇಮಿಸಲು ನಿರಾಕರಿಸಿದ್ದರಿಂದ ಸರ್ಕಾರದ ಪರವಾಗಿ ವಕೀಲರ ನೆರವು ನೀಡಲಾಗಿದೆ. ಪತ್ನಿ ನೀಡಿದ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಶುಕ್ರವಾರ ಬೆಂಗಳೂರಿನ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ.

ಶಿವಮೊಗ್ಗದಲ್ಲಿ ಅಂತ್ಯಕ್ರಿಯೆ ನಡೆಸಿರುವ ಶವ ಯಾರದ್ದು ಎಂಬುದನ್ನು ಪತ್ತೆ ಮಾಡಬೇಕಾಗಿರುವ ಹೊಣೆ ಈಗ ಪೊಲೀಸರ ಹೆಗಲಿಗೆ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.