ಲಂಡನ್ (ಐಎಎನ್ಎಸ್): ಧೂಮಪಾನ ಮಾಡುವ ಪುರುಷರಿಗೆ ಇದು ಆಘಾತಕಾರಿ ಸುದ್ದಿ. ಒಂದು ವೇಳೆ ತಂದೆ ಧೂಮಪಾನ ಮಾಡುತ್ತಿದ್ದಲ್ಲಿ ಆ ತಂದೆಯ ಮಕ್ಕಳಿಗೆ ಕ್ಯಾನ್ಸರ್ ತಗಲುವ ಅಪಾಯ ಹೆಚ್ಚಾಗಿರುತ್ತದೆಯಂತೆ.

ಬ್ರಾಡ್ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಧೂಮಪಾನದಿಂದ ಹಾನಿಗೊಳಗಾದ ತಂದೆಯ ಡಿಎನ್ಎ (ವಂಶವಾಹಿ) ಮತ್ತು ಆ ತಂದೆಗೆ ಜನಿಸಿದ ಮಗುವಿನ ಮೇಲೆ ನಡೆಸಿದ ಅಧ್ಯಯನದಿಂದ ಇದನ್ನು ಪತ್ತೆ ಹಚ್ಚಿದ್ದಾರೆ.
ಪುರುಷರು ಧೂಮಪಾನ ಮಾಡುತ್ತಿದ್ದಲ್ಲಿ ಅದರಿಂದ ಅವರ ವಂಶವಾಹಿಗೆ ಹಾನಿಯಾಗುತ್ತದೆ. ಈ ಹಾನಿಯಾದ ವಂಶವಾಹಿ ತಂದೆಯಿಂದ ಮಕ್ಕಳಿಗೆ ಹರಿದು ಬರುತ್ತದೆ. ಅಂತಹ ವಂಶವಾಹಿ ಹೊಂದಿರುವ ಮಕ್ಕಳಿಗೆ ಬಾಲ್ಯದಲ್ಲಿಯೇ ಕ್ಯಾನ್ಸರ್, ಅದರಲ್ಲೂ ರಕ್ತದ ಕ್ಯಾನ್ಸರ್ ಬರುವ ಅಪಾಯ ಇರುತ್ತದೆ ಎಂದು ಬ್ರಿಟಿಷ್ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ವೀರ್ಯಾಣುಗಳು ಬೆಳವಣಿಗೆ ಹೊಂದಲು ಮೂರು ತಿಂಗಳ ಕಾಲಾವಕಾಶ ತೆಗೆದುಕೊಳ್ಳುತ್ತಿದ್ದು, ಪತ್ನಿ ಗರ್ಭಧಾರಣೆಯ 12 ವಾರಗಳ ಮುಂಚೆಯೇ ಪತಿಯು ಧೂಮಪಾನ ತ್ಯಜಿಸಿದರೆ ಮಾತ್ರ ಈ ಅಪಾಯದಿಂದ ಪಾರಾಗಬಹುದು ಎಂದು ವಿಶ್ವವಿದ್ಯಾಲಯದ ಡಿನಾ ಆ್ಯಂಡರ್ಸ್ನ್ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.