ಸೋಮವಾರ, ಆಗಸ್ಟ್ 3, 2020
28 °C

ತಂಬಾಕು ಬಿಡಿಸಲು ಜೋಳಿಗೆ ಹಿಡಿದ ಯುವಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ತಂಬಾಕು ಬಿಡಿಸುವುದಕ್ಕಾಗಿ ಜೋಳಿಗೆ ಹಿಡಿದುಕೊಂಡು ಸಂಚಾರ ನಡೆಸುವ ಮೂಲಕ ಯುವ ಸಂಘಗಳ ಕಾರ್ಯಕರ್ತರು ಗಮನ ಸೆಳೆದಿದ್ದಾರೆ.ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಜಿಲ್ಲಾ ಹಡಪ್ಪದ ಅಪ್ಪಣ್ಣ ಯುವಕ ಸಂಘ ಹಾಗೂ ಬೌದ್ಧೀಕಿರಣ ಯುವಕ ಸಂಘ ಕಾರ್ಯಕರ್ತರು ನಗರದ ಶಾಂತಿನಗರದಲ್ಲಿ ಮಂಗಳವಾರ ಜನ ಜಾಗೃತಿ ರ‌್ಯಾಲಿ ನಡೆಸಿದರು.ಕೈಯಲ್ಲಿ ಜೋಳಿಗೆ ಹಿಡಿದು ಹಲಿಗೆ ಬಾರಿಸುತ್ತ ಜನರಲ್ಲಿ ತಂಬಾಕಿನಿಂದ ಉಂಟಾಗುವ ಹಾನಿಗಳ ಬಗ್ಗೆ ಮಾಹಿತಿ ನೀಡಿದರು.ಮನೆ ಮನೆಗೆ ತೆರಳಿ ಅನೇಕರಿಗೆ ಚಟ ಬಿಡಿಸು ಪ್ರತಿಜ್ಞೆ ಮಾಡಿಸಿ ಬೀಡಿ, ಸಿಗರೇಟ್, ಗುಟ್ಕಾ, ತಂಬಾಕು ಮತ್ತಿತರ ಸಾಮಗ್ರಿಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಂಡರು.ಜಿಲ್ಲಾ ಹಡಪದ ಅಪ್ಪಣ್ಣ ಯುವಕ ಸಂಘದ ಅಧ್ಯಕ್ಷ ಸಂಗಮೇಶ ಏಣಕೂರ್, ಬೌದ್ಧೀಕಿರಣ ಯುವಕ ಸಂಘದ ಅಧ್ಯಕ್ಷ ಮಡಿವಾಳೇಶ್ವರ ಸಿಂಧೆ, ಪ್ರಮುಖರಾದ ಸ್ವಾಮಿದಾಸ ಕೆಂಪೆನೋರ್, ರಾಮಣ್ಣ ಇತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.