ಕುಮಟಾ: ತಾಲ್ಲೂಕಿನ ಕಾಗಾಲದ ಬೀರ್ಕೋಡಿಯಲ್ಲಿ ಸಮುದ್ರ ನೀರು ಜನವಸತಿ ಪ್ರದೇಶಗಳಿಗೆ ನುಗ್ಗುವುದನ್ನು ತಡೆಯಲು ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶುಕ್ರವಾರ ಶಿರಸ್ತೇದಾರ ವಿ.ಆರ್. ನಾಯ್ಕ ಅವರ ಮೂಲಕ ಸರಕಾರಕ್ಕೆ ಮನವಿ ಅರ್ಪಿಸಿದರು.

`ಕಾಗಾಲ ಪಂಚಾಯತಿ ವ್ಯಾಪ್ತಿಯ ಬೀರಕೋಡಿ ಪ್ರದೇಶದಲ್ಲಿ ಹಿಂದೆಂದಿ ಗಿಂತಲೂ ಈ ಸಲ ಸಮುದ್ರ ಕೊರೆತ ಹೆಚ್ಚಾಗಿದೆ. ಹಿಂದೆಲ್ಲ ಸುಮಾರು ನೂರು ಮೀಟರ್ ದೂರ ಇರುತ್ತಿದ್ದ ಸಮುದ್ರ ಅಲೆಗಳು ಈ ವರ್ಷ ಮಳೆಗಾದಲ್ಲಿ ಜನವಸತಿ ಪ್ರದೇಶಕ್ಕೆ ಸಮೀಪ ಬಂದಿದೆ ಎಂದು ಮನವಿಯಲ್ಲಿ ಬರೆಯಲಾಗಿದೆ.

ಪ್ರತಿ ವರ್ಷದ ಕೊರೆತದಿಂದಾಗಿ ಸಮುದ್ರದಂಚಿನ ಉಸುಕಿನ ದಿಬ್ಬಗಳು ಕೊಚ್ಚಿ ಹೋಗಿ ಮಳೆಗಾಲದಲ್ಲಿ ಅಪಾಯಕಾರಿ ಮಟ್ಟದವರೆಗೆ ಅಲೆಗಳು ನುಗ್ಗಿವೆ. ಇದರಿಂದ ಇಲ್ಲಿಯ ಜನರು ರಾತ್ರಿಯಿಲ್ಲ ನಿದ್ದೆ ಕಳೆಯುವಂತಾಗಿದೆ. ಇಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸದಿದ್ದರೆ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತದೆ ಎಂದು~ ಮನವಿಯಲ್ಲಿ ತಿಳಿಸಲಾಗಿದೆ.

ಪ್ರದೇಶ ಕಾಂಗ್ರೆಸ್ ಸೇವಾದಳ ಸಂಚಾಲಕ ಆರ್ ಎಚ್ ನಾಯ್ಕ ನೇತೃತ್ವ ವಹಿಸಿದ್ದರು. ಗ್ರಾಮಸ್ಥರಾದ ವಸಂತ ರಾಮ ನಾಯ್ಕ, ಮಹಮ್ಮದ್ ಹೊಡೇ ಕರ್, ಇಸ್ಮಾಯಿಲ್ ಹೊಡೇಕರ್, ಪಂಚಾಯಿತಿ ಸದಸ್ಯ ಎಂ.ಟಿ. ನಾಯ್ಕ, ಸಪುರಾ ಹೊಡೇಕರ್, ಹನೀಫಾ, ಆಯಿಶಾಬೀ ಸೇರಿಂದತೆ ಮೀನುಗಾರ ಮಹಿಳೆಯರು ಉಪಸ್ಥಿತರಿದ್ದರು.

ವಾಲ್ಮೀಕಿ ಜಯಂತಿ ಕಾರ್ಯಕ್ರಮ 11ರಂದು
ಕುಮಟಾ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಅ. 11 ರಂದು ಬೆಳಿಗ್ಗೆ 10 ಗಂಟೆಗೆ ಗಿಬ್ ಹೈಸ್ಕೂಲ್ ಸಭಾ ಭವನದಲ್ಲಿ ವಾಲ್ಮೀಕಿ ದಿನಾಚರಣೆ ನಡೆಯಲಿದೆ.
ಶಾಸಕ ದಿನಕರ ಶೆಟ್ಟಿ ಉದ್ಘಾಟಿಸುವರು. ತಾ.ಪಂ. ಅಧ್ಯಕ್ಷೆ ನೀಲಾಂಬಿಕಾ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಇಂದಿರಾ ವೈದ್ಯ, ಉಪ ವಿಭಾಗಾಧಿಕಾರಿ ಸಿ. ವಿಜಯಕುಮಾರ, ಜಿ.ಪಂ. ಸದಸ್ಯರಾದ ಪ್ರದೀಪ ನಾಯಕ, ವೀಣಾ ಸೂರಜ್ ನಾಯ್ಕ, ಲಲಿತಾ ಪಟಗಾರ, ಮಹಾದೇವಿ ಗೌಡ, ತಾ.ಪಂ. ಉಪಾಧ್ಯಕ್ಷ ಈಶ್ವರ ನಾಯ್ಕ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಹಾತ್ಮಗಾಂಧಿ ಪ್ರೌಢ ಶಾಲೆ ಮುಖ್ಯಾಧ್ಯಾಪಕ ಎನ್.ಆರ್.ಗಜು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.